ಹೆಬ್ರಿ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ; ವ್ಯಕ್ತಿ ಮೃತ್ಯು
ಹೆಬ್ರಿ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿ -ಹಾಲಾಡಿ ರಸ್ತೆಯಲ್ಲಿ ಡಿ.26ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ನಿತ್ಯಾನಂದ ರಾವ್(78) ಎಂದು ಗುರುತಿಸಲಾಗಿದೆ. ಇವರು ಮನೆಯ ಎದುರಿನ ರಸ್ತೆ ಇನ್ನೊಂದು ಬದಿಯಲ್ಲಿ ವಾಹನದಲ್ಲಿದ್ದವರೊಂದಿಗೆ ಮಾತನಾಡಿ ವಾಪಾಸ್ಸು ಮನೆಗೆ ಬರಲು ರಸ್ತೆ ದಾಟುತ್ತಿದ್ದಂತೆ ಹೆಬ್ರಿ ಕಡೆಯಿಂದ ಹಾಲಾಡಿ ಕಡೆಗೆ ಹೋಗುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತನ್ನಲಾಗಿದೆ. ಇದರಿಂದ ಮಣ್ಣು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ನಿತ್ಯಾನಂದ, ಹೆಬ್ರಿ ಸರಕಾರಿ […]
ಡಿ.29ರಂದು ಉದ್ಯಾವರ ಬಲಾಯಿಪಾದೆಯ “ನಿವಾಸ”ದಲ್ಲಿ ಕ್ರಿಸ್ಮಸ್ ಸೆಲೆಬ್ರೆಷನ್
ಉಡುಪಿ: ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ಆಚರಣೆಗೆ ಸಿದ್ಧಗೊಂಡಿದೆ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ “ನಿವಾಸ”. ಇಲ್ಲಿ ನೀವು ಆಟಿಕೆಗಳು, ಪುಸ್ತಕಗಳು, ಮತ್ತು ಬಟ್ಟೆಗಳನ್ನು ದಾನವಾಗಿ ನೀಡಬಹುದು.ಇದೇ ಡಿಸೆಂಬರ್ 29ರಂದು ಸಂಜೆ 4ರಿಂದ ರಾತ್ರಿ 10 ರವರೆಗೆ ಕ್ರಿಸ್ಮಸ್ ಆಚರಣೆ ನಡೆಯಲಿದ್ದು ಉಚಿತ ಪ್ರವೇಶವಾಗಿದೆ. ಕಾರ್ಯಕ್ರಮಗಳ ವಿವರ:ಸಂಜೆ 4:00 ರಿಂದ 5:00 ಗಂಟೆಗೆ ಮಕ್ಕಳ ಆಟಗಳು, 5:00 ರಿಂದ 5:30 ಕ್ಕೆ ಮ್ಯಾಜಿಕ್ ಶೋ -1,5:30 ರಿಂದ 6:00 ಗಂಟೆಗೆ ಮೈಮ್ ಆಕ್ಟ್ (ಕಾರುಣ್ಯ […]
ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ(ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶರಣ್ ಅದ್ವೈತ್ ಮಂಜನಬೈಲು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪತ್ರಕರ್ತ ಕಿರಣ್ ಮಂಜನಬೈಲು ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರ. ಅವರು ಬೆಂಗಳೂರಿನ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದರು.
ಕಾರ್ಕಳ: ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ- ಜ್ಞಾನಸುಧಾ ಹಳೆ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ – ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ,ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿಮತ್ತು ಗೀತಾ ಶೆಟ್ಟಿ ದಂಪತಿಗಳ ಸುಪುತ್ರನಾದ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ ಮೋಹನ್ ಕಿಣಿ ಮತ್ತು ಶುಭಾ ಕಿಣಿ ದಂಪತಿಗಳ ಸುಪುತ್ರಿಯಾದ ಸ್ವಾತಿ ಕಿಣಿ ಮತ್ತು ಬೈಲೂರು ರಮೇಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಗಳ ಸುಪುತ್ರಿಯಾದ ರಕ್ಷಾ ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರ ಸಾಧನೆಯನ್ನು ಅಜೆಕಾರ್ […]
ಮಂಗಳೂರು:ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದ ಅಂಕುಶ್ ಎನ್. ನಾಯಕ್
ಮಂಗಳೂರು:ದೇಶದ ಹೆಮ್ಮೆಯ ಯುವ ಸಿತಾರ್ ವಾದಕ ಮಂಗಳೂರಿನ ಅಂಕುಶ್ ಎನ್. ನಾಯಕ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ವಿಭಾಗದಲ್ಲಿ ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆಪಡೆದಿದ್ದಾರೆ. ದೂರದರ್ಶನ ಹಾಗೂ ಆಕಾಶವಾಣಿಯಿಂದ ಎ-ಗ್ರೇಡ್ಪಡೆಯುವುದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿಅತ್ಯುನ್ನತ ಮಟ್ಟದ ಕಲಾ ಶ್ರೇಷ್ಠತೆ ಹಾಗೂಮಾನ್ಯತೆಯಾಗಿದೆ. ಈ ಮೂಲಕ ಪ್ರಸಾರ ಭಾರತಿಯಸಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ವೇದಿಕೆಗಳಿಗೆ ನುಡಿಸುವಅರ್ಹತೆಯನ್ನು ಅಂಕುಶ್ ಎನ್. ನಾಯಕ್ ಪಡೆದಿದ್ದಾರೆ. ಈ ಪ್ರಮಾಣೀಕರಣವನ್ನು ಶೇ. 10 ಕ್ಕಿಂತ ಕಡಿಮೆ ಪ್ರದರ್ಶನ ಕಲಾವಿದರಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಇದು […]