ಉಡುಪಿ: ಆದ್ಯಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನಲ್ಲಿ ‘AADYA LUCKY SCHEME’ ಆರಂಭ.
ಉಡುಪಿ: 2024 ಕ್ಕೆ ಮುಗಿದು ಹೊಸವರ್ಷಕ್ಕೆ ಕಾಲಿಡಲು ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರವೇ ಬಾಕಿ ಇದೆ. ಹೊಸವರ್ಷಕ್ಕೆ ನಿಮ್ಮ ಮನೆಯನ್ನು ಹೊಸ ಹೊಸ, ಲೇಟೆಸ್ಟ್ ಡಿಸೈನ್ ನ ವಸ್ತುಗಳೊಂದಿಗೆ ಬೆಳಗಲು ನಿಮಗಿದೆ ಸುವರ್ಣಾವಕಾಶ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ಇನ್ನು ಚಿಂತಿಸಬೇಕಾಗಿಲ್ಲ. ಅಂಗಡಿಗಳನ್ನು ಅಲೆಯಬೇಕೆಂದಿಲ್ಲ. ಉಡುಪಿಯ “ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ ಗೆ ನೇರವಾಗಿ ಭೇಟಿಯಿಟ್ಟರೆ ಸಾಕು ನಿಮ್ಮಿಷ್ಟದ ಲೋಕ ನಿಮ್ಮೆದುರು ತೆರೆದುಕೊಳ್ಳುತ್ತದೆ. ಹೊಸ ವರ್ಷ ತರಲಿದೆ ಹರುಷ ಆದ್ಯಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ […]
ಕುಂದಾಪುರ: ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆಯ ವಾರ್ಷಿಕೋತ್ಸವ ಸಮಾರಂಭ
ಕುಂದಾಪುರ: ವಿದ್ಯಾ ಅಕಾಡೆಮಿ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಶಸ್ತಿಗಳ ವಿತರಣೆ ಮತ್ತು ವಿಶಿಷ್ಟವಾದ ಸ್ನಾತಕೋತ್ಸವ ಸಮಾರಂಭದ ಸಮನ್ವಯವಿತ್ತು. ಪ್ರೀ ಸ್ಕೂಲ್ ಮುಗಿಸಿದ ಚಿಣ್ಣರು ಸ್ನಾತಕೋತ್ಸವ ಪ್ರಮಾಣಪತ್ರಗಳನ್ನು ಹೆಮ್ಮೆಯಿಂದ ಸ್ವೀಕರಿಸಿದರು. ಈ ಸಂಯುಕ್ತ ಆಚರಣೆ ಕಾರ್ಯಕ್ರಮಕ್ಕೆ ಭಾವನಾತ್ಮಕ ಮತ್ತು ಸಂತೋಷದ ಆಯಾಮವನ್ನು ಸೇರಿಸಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಆ ದಿನವನ್ನು ಮರೆತುಹೋಗದಂತೆ ಮಾಡಿದವು. ಮುಖ್ಯ ಅತಿಥಿ ರೋಟೇರಿಯನ್ ರಾಘವೇಂದ್ರ ಚಾರಣ ನಾವಡ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳೊಂದಿಗೆ […]
ಬಾಂಬೆ ಪ್ರೀಮಿಯರ್ ಲೀಗ್; ಟೆಕ್ನೋ ಟೈಟಾನ್ಸ್ ತಂಡ ಪ್ರೀ ಕ್ವಾರ್ಡರ್ ಫೈನಲ್ ಗೆ ಲಗ್ಗೆ.
ಶಾರ್ಜಾದಲ್ಲಿ ಜರಗುತ್ತಿರುವ ಪ್ರತಿಷ್ಠಿತ ಬಾಂಬೆ ಪ್ರೀಮಿಯರ್ ಲೀಗ್ ಸೀಸನ್ – 5 ರ ಪಂದ್ಯಾಕೂಟದಲ್ಲಿ ಉಡುಪಿ, ಮಂಗಳೂರು ಜಿಲ್ಲೆಯ ಬಹುತೇಕ ಕ್ರೀಡಾಪಟುಗಳನ್ನು ಹೊಂದಿರುವ ಶಾರ್ಜಾದ ಟೆಕ್ನೋಟೈಟಾನ್ಸ್ ತಂಡವು ಪ್ರಿ ಕ್ವಾರ್ಟರ್ ಫೈನಲಗೆ ಲಗ್ಗೆ ಇಟ್ಟಿದೆ. ಶಾರ್ಜಾದಲ್ಲಿ ಇತ್ತೀಚೆಗೆ ಜರಗಿರುವ ಅನೇಕ ಪಂದ್ಯಗಳಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಟೆಕ್ನೋ ಟೈಟಾನ್ಸ್ ತಂಡವು ಮುಡಿಗೇರಿಸಿಕೊಂಡಿದೆ. ಉಡುಪಿ ಕಟೀಲ್ ಮಂಗಳೂರು ಕಾಪು ಕುಂದಾಪುರ ಸಮೀಪದ ಅನೇಕ ಆಟಗಾರರನ್ನು ಹೊಂದಿರುವ ಟೆಕ್ನೋ ಟೈಟಾನ್ಸ್ ತಂಡಕ್ಕೆ ಸೂರಾಲಿನ ವಿಠಲ್ ರೀಶಾನ್, ನಾಯಕರಾಗಿದ್ದು ವಿಶ್ವ ಉಪನಾಯಕರಾಗಿದ್ದಾರೆ. […]
ಉಡುಪಿ:ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆಯಲ್ಲಿ ಕಲ್ಕುಡ ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲನ್ಯಾಸ
ಉಡುಪಿ:ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿಯ ಪ್ರಧಾನ ದೈವವಾದ ಕಲ್ಕುಡ ಹಾಗೂ ಕಲ್ಲುರ್ಟಿ ದೈವಗಳಿಗೆ ನೂತನ ಗುಡಿಯ ನಿರ್ಮಾಣ ಕಾರ್ಯದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮವಾಗಿ ಶಿಲಾನ್ಯಾಸ ಕಾರ್ಯಕ್ರಮವು ಕ್ಷೇತ್ರದ ಧರ್ಮದರ್ಶಿ, ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಯುತ ಅನಿಶ್ ಆಚಾರ್ಯ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಭೂಗತಗೊಂಡಿದ್ದ ಶಕ್ತಿ ಕ್ಷೇತ್ರವು ಪುನಶ್ಚೇತನಗೊಂಡುತನ್ನ ಕಾರಣಿಕದ ಅಸ್ತಿತ್ವದಿಂದ ಬೇಡಿ ಬಂದ ಭಕ್ತರ ಇಷ್ಟಾರ್ಥವನ್ನು ಕರುಣಿಸಿ […]
ಪಲಿಮಾರು: ಶಿಥಿಲಗೊಂಡ ಕಾಲು ಸಂಕದಲ್ಲೇ ದಿನನಿತ್ಯ ಓಡಾಡುವ ವೃದ್ಧ ದಂಪತಿ
ಉಡುಪಿ: ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿಗಳು ತಮ್ಮ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಶಿಥಿಲಗೊಂಡ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ. ಇವರ ಈ ದುಸ್ಥಿತಿಯನ್ನು ವೀಕ್ಷಿಸಿ ತಹಶಿಲ್ದಾರ್ ಪ್ರತಿಭಾ ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಪ್ರತಿದಿನ ಈ ವೃದ್ದ ದಂಪತಿಗಳು ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು.ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ […]