ಉಡುಪಿ: ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ.

ಉಡುಪಿ: ಉಡುಪಿಯ ಮದ್ವೇಶ್ ಪಾಂಗಣ್ಣಯ ಇವರು ಸಿ. ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಇವರು ಉಡುಪಿ ಶ್ರೀ ಶ್ರೀಧರ ಮತ್ತು ಶ್ರೀಮತಿ ಯಶೋಧ ಪಾಂಗಣ್ಣಯ ಇವರ ಪುತ್ರ ರಾಗಿದ್ದು, ಉಡುಪಿಯ ಸಿ ಎ ಗಣೇಶ್ ಹೆಬ್ಬಾರ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು; ಮೂವರು ಮೃತ್ಯು

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ಉರುಳಿ ಬಿದ್ದು ತಂದೆ ಮಗನ ಸಹಿತ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಮಾಣಿ-ಮೈಸೂರು ರಾಷ್ಟ್ರೀಯಹೆದ್ದಾರಿಯ ಪರ್ಲಡ್ಕ ಬೈಪಾಸ್ ನಲ್ಲಿ ನಡೆದಿದೆ. ಮೃತರನ್ನು ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ(85), ಅವರ ಪುತ್ರ ಚಿದಾನಂದ ನಾಯ್ಕ(58) ಮತ್ತು ನೆರೆಮನೆ ನಿವಾಸಿ ರಮೇಶ್ ನಾಯ್ಕ (68) ಎಂದು ಗುರುತಿಸಲಾಗಿದೆ. ಇವರು ಆಲ್ಟೋ ಕಾರಿನಲ್ಲಿ ಗೋಂದೊಳ್ ಪೂಜೆಗೆ ಪುತ್ತೂರಿನ ಪುಣಚಕ್ಕೆ ಆಗಮಿಸಿದ್ದರು. ಹಿಂತಿರುಗುವ ವೇಳೆ ಮುಂಜಾವ ಸುಮಾರು 4.15ರ […]

ಮಂಗಳೂರು ಕಂಬಳದಲ್ಲಿ ಛಾಯಾಗ್ರಹಣ ಸ್ಪರ್ಧೆ

ಮಂಗಳೂರು: ಸಂಸದರಾದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ಡಿ.28 ಮತ್ತು 29ರಂದು ಮಂಗಳೂರಿನ ಕೂಳೂರು ಬಂಗ್ರ ಗೋಲ್ಡ್ ಫಿಂಚ್ ಸಿಟಿಯಲ್ಲಿ ಆಯೋಜಿಸಿರುವ ಕಂಬಳದಲ್ಲಿ “ಮಂಗಳೂರು ಕಂಬಳ” ಎಂಬ ಥೀಮ್ ನೊಂದಿಗೆ ಛಾಯಾಗ್ರಹಣ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗಳು ಆನ್‌ಲೈನ್ ಸಲ್ಲಿಕೆಗಳಿಗೆ ಮಾತ್ರ ತೆರೆದಿರುತ್ತವೆ. ಗಡುವು ಮುಗಿದ ನಂತರ ಸಲ್ಲಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ. ಸಲ್ಲಿಸಿದ ಫೋಟೋಗಳು ಚಿಕ್ಕ ಭಾಗದಲ್ಲಿ ಕನಿಷ್ಠ 640 ಪಿಕ್ಸೆಲ್ ಗಳಾಗಿರಬೇಕು. ಮತ್ತು ಉದ್ದವಾದ ಭಾಗದಲ್ಲಿ 2000 ಪಿಕ್ಸೆಲ್‌ಗಳಿಗಿಂತ ಹೆಚ್ಚಿರಬಾರದು. ಚಿತ್ರಗಳು 200MB ಗಿಂತ ದೊಡ್ಡದಾಗಿರಬಾರದು. ಫೋಟೋಗಳು JPEG […]

ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ. ಸಮೀರ ಆಚಾರ್ಯ ತೇರ್ಗಡೆ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ. ಸಮೀರ ಆಚಾರ್ಯ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.​ ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ​ಚಿಟ್ಪಾಡಿ ನಿವಾಸಿ ನಿವೃತ್ತ ​ಬಿಎಸ್ ಎನ್ ಎಲ್ ಅಕೌಂಟ್ಸ್​ ಆಫೀಸರ್ ಎಂ​ ಶ್ರೀವತ್ಸ ಆಚಾರ್ಯ ಮತ್ತು ಉಡುಪಿ ಅಂಚೆ ಇಲಾಖೆ ಉದ್ಯೋಗಿ ಜ್ಯೋತಿ ಎಸ್ ಆಚಾರ್ಯ ದಂಪತಿಗಳ ಸುಪುತ್ರ.​ ಅವರು ಉಡುಪಿಯ ಭಾರತೀಶ ಆಂಡ್ ​ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದರು.

ಉಡುಪಿ:ತ್ರಿಶಾ ಕ್ಲಾಸಸ್: ಸಿ.ಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಫಲಿತಾಂಶ

ತ್ರಿಶಾ ಕ್ಲಾಸಸ್: ಸಿ ಎ ಫೈನಲ್ ಪರೀಕ್ಷೆಯಲ್ಲಿ ಆರನ್‌ ರೋಡ್ರಿಗಸ್ ಉತ್ತೀರ್ಣ ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2024ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಆರನ್‌ ರೋಡ್ರಿಗಸ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಮಂಗಳೂರಿನ ಅಲ್ವಿನ್‌ ಸಿರಿಲ್‌ ರೋಡ್ರಿಗಸ್ ಹಾಗೂ ವನಿತಾ ಎಮ್ ರೋಡ್ರಿಗಸ್ ದಂಪತಿಗಳ ಪುತ್ರರಾಗಿದ್ದು, ತಮ್ಮ ಆರ್ಟಿಕಲ್ ಶಿಪ್ ನ್ನು ನಿತಿನ್‌ ಜೆ ಶೆಟ್ಟಿ& ಕಂಪೆನಿ ಮಂಗಳೂರು ಸಂಸ್ಥೆಯಲ್ಲಿ ಪೂರೈಸಿಕೊಂಡಿದ್ದಾರೆ. ಸಿಎ ಫೌಂಡೇಶನ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದುಕೊಂಡಿದ್ದಾರೆ. ತ್ರಿಶಾ ಕ್ಲಾಸಸ್: ಸಿ […]