ಕಾರ್ಕಳ:ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ 2024
ಕಾರ್ಕಳ : ಜ್ಞಾನಸುಧಾ ಕಾರ್ಕಳದ ಆಸ್ತಿಯಾಗಿದ್ದು,ಸಂಸ್ಕಾರ, ಸದ್ವಿಚಾರದ ಅಡಿಪಾಯವನ್ನು ಶಿಕ್ಷಣದ ಜೊತೆಗೆ ನೀಡುತ್ತಿರುವ ಇಲ್ಲಿನ ಕಾರ್ಯ ಶ್ಲಾಘನೀಯ.ಡಾ.ಸುಧಾಕರ್ ಶೆಟ್ಟಿಯವರ ತಂಡದ ಸಂಘಟಿತಪ್ರಯತ್ನ ಪ್ರಶಂಸನೀಯ. ವಿದ್ಯಾರ್ಥಿಗಳು ನವಭಾರತವನ್ನು ನಿರ್ಮಿಸುವುದಕ್ಕಾಗಿಸಂಕಲ್ಪತೊಡಬೇಕು ಎಂದು ಕ್ಷೇತ್ರದ ಶಾಸಕರಾದಶ್ರೀ.ವಿ.ಸುನಿಲ್ ಕುಮಾರ್ ನುಡಿದರು.ಅವರು ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಡಿಸೆಂಬರ್ 22, 2024ರಂದುನಡೆದ ಜ್ಞಾನಸುಧ ಸಂಸ್ಥಾಪಕರ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಳಿಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಎಂ.ಆರ್.ಜಿ.ಗ್ರೂಪ್‌ಗಳಸಂಸ್ಥಾಪಕ ಹಾಗೂ ಉದ್ಯಮಿಗಳಾದ ಶ್ರೀ ಕೆ. ಪ್ರಕಾಶ್ಶೆಟ್ಟಿಯವರು, ಸಮಾಜದ […]
ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದ ಸರ ಎಗರಿಸಿ ಪರಾರಿಯಾದ ಕಳ್ಳ
ಉಡುಪಿ: ಚಿನ್ನ ಖರೀದಿ ನೆಪದಲ್ಲಿ ಆಭರಣ ಅಂಗಡಿಗೆ ಬಂದ ಕಳ್ಳನೋರ್ವ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾದ ಘಟನೆ ಕಾರ್ಕಳ ನಗರದ ರಥಬೀದಿಯ ಎಸ್ ಜೆ ಅರ್ಕೆಡ್ ಬಳಿ ನಡೆದಿದೆ. ಚಿನ್ನ ಖರೀದಿಗಾಗಿ ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನಿಗೆ ಮಹಿಳಾ ಸಿಬ್ಬಂದಿ ಆಭರಣಗಳನ್ನು ತೋರಿಸಲು ಮುಂದಾಗಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಚಿನ್ನದ ಸರವನ್ನು ಎಳೆದುಕೊಂಡು ಕಳ್ಳ ಪರಾರಿಯಾಗಿದ್ದಾನೆ. ಕಳವಾದ ಕರಿಮಣಿ ಸರ ಸುಮಾರು 30 ಗ್ರಾಂ ತೂಕದ ಚಿನ್ನದ್ದು ಎನ್ನಲಾಗಿದೆ. ಕಳ್ಳತನದ […]
ಕುಂದಾಪುರ ಕುಲಾಲ ಸಮಾಜ ಸುಧಾರಕ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ
ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ)., ಕುಂದಾಪುರ ಇದರ ಪಟ್ಟಿ ಪ್ರಕಟವಾಗಿದೆ. ಕುಲಾಲ ಸಮಾಜ ಸುಧಾರಕ ಸಂಘದ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಯವರು ಆಯ್ಕೆಯಾಗಿರುತ್ತಾರೆ. ಇನ್ನುಳಿದಂತೆ, ಗೌರವಾಧ್ಯಕ್ಷರು : ಡಾ.ಎಂ.ವಿ.ಕುಲಾಲ್ , ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ಬಸವ ಕುಲಾಲ್ ಉಳ್ತೂರು, ಬಾಬು ಕುಲಾಲ್ ಕೊರ್ಗಿ, ಸುರೇಶ್ ಕುಲಾಲ್ ವಕ್ವಾಡಿ. ಕಾರ್ಯದರ್ಶಿ: ಸುರೇಶ್ ಕುಲಾಲ್ ಆಜ್ರಿ, ಜೊತೆ ಕಾರ್ಯದರ್ಶಿ: ಶಂಕರ್ ಕುಲಾಲ್ ಹೆಬ್ಗೋಳಿ, ಕೋಶಾಧಿಕಾರಿ: ವಿಠಲ್ ಕುಲಾಲ್ ಹೆಸ್ಕುತ್ತೂರು, ಕ್ರೀಡಾಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ […]
ಉಡುಪಿ:ತ್ರಿಶಾ ಕ್ಲಾಸಸ್ ಸಿ ಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಫಲಿತಾಂಶ
ತ್ರಿಶಾ ಕ್ಲಾಸಸ್: ಸಿ ಎ ಫೈನಲ್ ಪರೀಕ್ಷೆಯಲ್ಲಿ ಎ ಅನಂತ ನಾಯಕ್ ಉತ್ತೀರ್ಣ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2024ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಎ ಅನಂತ ನಾಯಕ್ ಅವರು ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ಎ ದೇವದಾಸ್ ನಾಯಕ್ ಹಾಗೂ ಎ ದಿವ್ಯಾ ನಾಯಕ್ ದಂಪತಿಗಳ ಪುತ್ರರಾಗಿದ್ದು, ತಮ್ಮ ಆರ್ಟಿಕಲ್ ಶಿಪ್ ನ್ನು ಸುರೇಂದ್ರ ನಾಯಕ್ ಆಸೋಸಿಯೇಟ್ಸ್ ಸಂಸ್ಥೆಯಲ್ಲಿ ಪೂರೈಸಿಕೊಂಡಿದ್ದಾರೆ. ಸಿಎ ಫೌಂಡೇಶನ್, ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಹಾಗೂ ಪದವಿ ವಿದ್ಯಾಭ್ಯಾಸವನ್ನು ಕಟಪಾಡಿಯ […]
ಉಡುಪಿ: ಕಾರಿಗೆ ಕಂಟೈನರ್ ಡಿಕ್ಕಿ: ಕೂದಲೆಳೆಯಂತರದಲ್ಲಿ ಪಾರಾದ ದಂಪತಿ
ಉಡುಪಿ: ಕಂಟೈನರ್ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಉದ್ಯಾವರದ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಕಾರಿನಲ್ಲಿದ್ದ ದಂಪತಿ ಕೂದಲೆಳೆಯಂತರದಲ್ಲಿ ಪಾರಾಗಿದ್ದಾರೆ.ಕಾಪು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಸ್ಯಾಂಟ್ರೋ ಕಾರು ಓವರ್ಟೇಕ್ ಮಾಡುವ ಧಾವಂತದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಈ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಕಂಟೈನರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನಲ್ಲಿದ್ದ ದಂಪತಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.