ಬ್ರಹ್ಮಾವರ: ಅಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು.
![](https://udupixpress.com/wp-content/uploads/2024/02/death-1.png)
ಬ್ರಹ್ಮಾವರ: ಆರೂರು ಗ್ರಾಮದ ಬಂಗ್ಲಗುಡ್ಡೆ ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯ ಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತರನ್ನು ಆರೂರು ಗ್ರಾಮದ ಗಿರಿಜಾ(70) ಎಂದು ಗುರುತಿಸಲಾಗಿದೆ. ಇವರು ಡಿ.17ರಂದು ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತಿರುವಾಗ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೆನ್ನಲಾಗಿದೆ.ಇದರಿಂದ ಒಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು, ಡಿ.24ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಸಕ್ಕೆ ಜನ ಬೇಕಾಗಿದ್ದಾರೆ
![](https://udupixpress.com/wp-content/uploads/2024/12/IMG_20241208_121943-1.jpg)
ಉಡುಪಿ:ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ತಿಂಡಿ ತಯಾರಿಕಾ ಘಟಕಕ್ಕೆ ಕಿಚನ್ ಹೆಲ್ಪರ್ – ಹೆಂಗಸರು / ಪುರುಷರು, ಲೈನ್ ಸೇಲ್ ಲಘು ವಾಹನ ಚಾಲಕರು,ಸೇಲ್ಸ್ ಮ್ಯಾನ್, ಬೇಕರಿ ಕೌಂಟರ್ ಸೇಲ್ಸ್ ಗರ್ಲ್ಈ ಎಲ್ಲಾ ಹುದ್ದೆಗಳಿಗೆ ಜನ ಬೇಕಾಗಿದ್ದಾರೆಆಸಕ್ತರು ಸಂಪರ್ಕಿಸಿ:7349038077
ಉಡುಪಿ ಶ್ರೀ ಕೃಷ್ಣಮಠಕ್ಕೆ ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಭೇಟಿ
![](https://udupixpress.com/wp-content/uploads/2024/12/IMG_20241226_092732.jpg)
ಉಡುಪಿ: ಖ್ಯಾತ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀ ಕೃಷ್ಣ ದರ್ಶನ ಕೈಗೊಂಡ ಅವರು, ಪರ್ಯಾಯ ಪುತ್ತಿಗೆ ಮಠದವರು ನಡೆಸುವ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ವಿಶೇಷ ಆಸಕ್ತಿಯಿಂದ ಮಾಹಿತಿ ಪಡೆದುಕೊಂಡರು. ತನ್ನ ಅಜ್ಜನವರು ತಮಗೆ ಕಲಿಸಿಕೊಟ್ಟ ಭಗವದ್ಗೀತೆಯ ವಿಚಾರಗಳನ್ನು ಶ್ಲೋಕಗಳನ್ನು ಸ್ವಾಮೀಜಿಯ ಮುಂದೆ ಹೇಳಿದರು. ಪರ್ಯಾಯ ಮಠದ ವತಿಯಿಂದ ಈ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು. ಉಡುಪಿ ಶ್ರೀ ಕೃಷ್ಣ ಮಠದಿಂದ ಕೊಲ್ಲೂರು ಕ್ಷೇತ್ರ […]