ಹುಡುಗಿಯರು ಹುಡುಗನಿಂದ ನಿಜಕ್ಕೂ ನಿರೀಕ್ಷೆ ಮಾಡೋದೇನು ? ನಿಮ್ಮ ಪ್ರೀತಿಯ ಹುಡುಗಿಗೆ ನೀವೇನ್ ಕೊಡ್ಬೇಕು?
![](https://udupixpress.com/wp-content/uploads/2024/12/andres-molina-xGU-nvsd_4I-unsplash.jpg)
ಹುಡುಗಿಯರು ಕೇವಲ ಸುಂದರ, ಆಕರ್ಷಕವಾಗಿರುವ ಹುಡುಗನನ್ನು ಮಾತ್ರ ಇಷ್ಟಪಡ್ತಾರೆ ಅನ್ನೋ ಯೋಚ್ನೆ ಖಂಡಿತಾ ತಪ್ಪು. ಹಾಗಾಗಿ ನೀವು ನಾನು ನೋಡಲು ಚೆನ್ನಾಗಿಲ್ಲ ಎಂದು ಚಿಂತಿಸಬೇಕಿಲ್ಲ. ಹುಡುಗಿಯರನ್ನು ಹೇಗೆ ಒಲಿಸ್ಕೊಳ್ಬೋದು ಅಂತ ಯೋಚಿಸಿದ್ರೆ ಸಾಕು. ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡೋದು ಅವಳಿಗಿಂತಾ ಅವಳನ್ನು ಹೆಚ್ಚು ಇಷ್ಟಪಡೋ ಹುಡುಗರನ್ನ. ಪರಿಶುದ್ಧ ಪ್ರೀತಿಯನ್ನು ನೀಡಿ ಪ್ರೀತಿ ಗಳಿಸಬಹುದು.ನಿಮ್ಮ ಮಾತಿನಂತೆಯೇ ನಿಮ್ಮ ನಡೆಯಿದ್ದರೆ ಚೆನ್ನ. ನೀವು ಹೇಳುವುದೊಂದು ಮಾಡುವುದೊಂದು ಆದರೆ ಯಾರೂ ನಿಮ್ಮತ್ತ ಆಕರ್ಷಿತರಾಗುವುದಿಲ್ಲ. ಹಾಗಾಗಿ ನಿಮ್ಮ ನಡೆ ನುಡಿ ಒಂದೇ ಆಗಿರಲಿ. ದುಬಾರಿ […]
ಕುಂದಾಪುರ: ಹುಟ್ಟೂರು ತಲುಪಿದ ಯೋಧ ಅನೂಪ್ ಪೂಜಾರಿ ಪಾರ್ಥಿವ ಶರೀರ
![](https://udupixpress.com/wp-content/uploads/2024/12/IMG_20241226_111414.jpg)
ಉಡುಪಿ: ಜಮ್ಮು-ಕಾಶ್ಮೀರದಲ್ಲಿ ನಡೆದ ವಾಹನ ಅಪಘಾತದಲ್ಲಿ ಹುತಾತ್ಮರಾದ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ ಪಾರ್ಥಿವ ಶರೀರ ಇಂದು ಅವರ ಹುಟ್ಟೂರಿಗೆ ತಲುಪಿದೆ. ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಉಡುಪಿಯಿಂದ ಬೆಳಿಗ್ಗೆ ಬೀಜಾಡಿಗೆ ರವಾನೆ ಮಾಡಲಾಯಿತು. ತೆಕ್ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಸಲಾಯಿತು. ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಅಂತಿಮ ಯಾತ್ರೆ ಮುಗಿದ ಬಳಿಕ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು. ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ […]
ಬೆಳ್ಳಂಪಳ್ಳಿಯ “ಸೀಬರ್ಡ್ ರೆಸಾರ್ಟ್” ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜು; ವಿಶೇಷ ಪ್ಯಾಕೇಜ್ ಘೋಷಣೆ
![](https://udupixpress.com/wp-content/uploads/2024/12/IMG-20241221-WA0030-1024x685.jpg)
ಉಡುಪಿ: ಉಡುಪಿ ಆತ್ರಾಡಿ ಸಮೀಪದ ಬೆಳ್ಳಂಪಳ್ಳಿ ಗ್ರಾಮದಲ್ಲಿರುವ “ಸೀಬರ್ಡ್ ರೆಸಾರ್ಟ್” ಹೊಸ ವರ್ಷದ ಸಂಭ್ರಮಾಚರಣೆ ಸಜ್ಜುಗೊಂಡಿದೆ. ಡಿ.31ರಂದು ಸಂಜೆ 7ರಿಂದ ನ್ಯೂ ಇಯರ್ ಪಾರ್ಟಿ ಆರಂಭಗೊಳ್ಳಲಿದೆ. ಲೈವ್ ಆರ್ಕೆಸ್ಟ್ರಾ, ಅದ್ಭುತ ಪಟಾಕಿ ಪ್ರದರ್ಶನ, ಅನಿಯಮಿತ ಅದ್ದೂರಿ ಬಫೆ (ಶಾಕಾಹಾರಿ ಮತ್ತು ಮಾಂಸಾಹಾರಿ) ಹಾಗೂ ಸೀಮಿತ ಪಾನೀಯಗಳು ಇರಲಿವೆ. ಪ್ರತಿ ವ್ಯಕ್ತಿಗೆ ಪ್ರವೇಶ ಶುಲ್ಕ 1500 ನಿಗದಿಪಡಿಸಲಾಗಿದೆ. ಸೀಮಿತ ಸ್ಲಾಟ್‌ಗಳು ಲಭ್ಯವಿದ್ದು, ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 84970 98808, 096325 31153 ಅನ್ನು ಸಂಪರ್ಕಿಸಬಹುದಾಗಿದೆ.
ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾದಿಂದ ಸುಶಾಸನ ದಿನಾಚರಣೆ ಹಾಗೂ ಯೋಗ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ
![](https://udupixpress.com/wp-content/uploads/2024/12/IMG_20241226_105808-1024x311.jpg)
ಕಾರ್ಕಳ: ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ಬೆಳಿಗ್ಗೆ ಸುಶಾಸನ ದಿನ, ಯೋಗ ಸಾಧಕರಿಗೆಅಭಿನಂದನಾ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಕಳ ಶಾಸಕರ ಜನಸೇವಾ ಕಛೇರಿಯಲ್ಲಿ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿಯ ಅಂಗವಾಗಿ ಕಾರ್ಕಳ ಶಾಸಕರು ಹಾಗೂ ಮಾಜಿಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ರವರು ಗೌರವಾನ್ವಿತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿಥಾಯ್ಲೆಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ನಮ್ಮ ಮಹಿಳಾ ಮೋರ್ಚಾ […]
ಕುಂದಾಪುರ: ಜನತಾ ಪದವಿಪೂರ್ವ ಕಾಲೇಜಿನ ತನ್ವಿತಾ ವಿ. ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಆಯ್ಕೆ.
![](https://udupixpress.com/wp-content/uploads/2024/12/IMG_20241226_104310.jpg)
ಕುಂದಾಪುರ: ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ, ಕೋಟದ ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಕೊಡಮಾಡುವ ನಾಲ್ಕನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ವಿಶೇಷ ಸಾಧಕರ ವಿಭಾಗದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ತನ್ವಿತಾ ವಿಶೇಷ ಪುರಸ್ಕಾರಕ್ಕೆಆಯ್ಕೆಯಾಗಿರುತ್ತಾರೆ. ತನ್ವಿತಾ ಪ್ರೌಢ ಶಿಕ್ಷಣದ ಸಮಯದಲ್ಲಿ ಯೋಗ ಸ್ಪರ್ಧೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನುಪಡೆದಿರುತ್ತಾಳೆ. ಈ […]