ಕುಂದಾಪುರ:ಮೃತ ಯೋಧ ಅನೂಪ್‌ ಪೂಜಾರಿ ಮೃತದೇಹ ಬೀಜಾಡಿಯ ಸ್ವಗೃಹಕ್ಕೆ: ಕುಟುಂಬಿಕರು, ಆತ್ಮೀಯರು ಮತ್ತು ಅಭಿಮಾನಿಗಳಿಂದ ಅಂತಿಮ ದರ್ಶನ

ಕುಂದಾಪುರ : ಜಮ್ಮುಕಾಶ್ಮೀರ ಪೂಂಛ್‌ನಲ್ಲಿ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಕುಂದಾಪುರದ ಬೀಜಾಡಿಯ ಯೋಧ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ (31) ಅವರ ಪಾರ್ಥೀವ ಶರೀರವನ್ನು ಬುಧವಾರ ತಡರಾತ್ರಿ ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂದು ಇಂದು ಬೆಳಿಗ್ಗೆ ಬೀಜಾಡಿಯ ಸ್ವಗೃಹಕ್ಕೆ ತರಲಾಯಿತು. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ […]

ಉಡುಪಿ: ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಸಂಸದರಿಂದ ಅಂತಿಮ ನಮನ

ಉಡುಪಿ: ಜಮ್ಮು-ಕಾಶ್ಮೀರದ ಪೂಂಟ್ ನಲ್ಲಿ ನಡೆದ ದುರಂತದಲ್ಲಿ ಹುತಾತ್ಮರಾದ ಕುಂದಾಪುರ ಸಮೀಪದ ಬೀಜಾಡಿಯ ಅನೂಪ್ ಪೂಜಾರಿ ಅವರ ಅಂತ್ಯ ಸಂಸ್ಕಾರ ಇಂದು ಸಕಲ ಗೌರವಗಳೊಂದಿಗೆ ನಡೆಯಲಿದೆ. ತೆಕ್ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಅನೂಪ್ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು. ಅಂತಿಮ ಯಾತ್ರೆ ಬಳಿಕ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಮತ್ತು ಮಾಜಿ ಸಚಿವ ಸುನಿಲ್ ಕುಮಾ‌ರ್ ಈ ಸಂದರ್ಭ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಬೀಜಾಡಿ […]

ಕುಂದಾಪುರ ಕುಲಾಲ ಸಂಘದ 34ನೇ ವರ್ಷದ ಮಹಾಸಭೆ, ಸಾಧಕರಿಗೆ ಸನ್ಮಾನ ಸಮಾರಂಭ.

ಕುಂದಾಪುರ: ಕುಂದಾಪುರ ಕುಲಾಲ ಸಂಘದ 34 ನೇ ವರ್ಷದ ಮಹಾಸಭೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ ಉಡುಪಿ ಚಿಕ್ಕ ಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿಯ ಹಿಂದುಳಿದ ವರ್ಗಗಳ ಹಿರಿಯ ನಾಯಕ ಡಾ ಎಂ ಅಣ್ಣಯ್ಯ ಕುಲಾಲ್, ಸಂಘದ ಅಧ್ಯಕ್ಷ ವಿಶ್ವನಾಥ್ ಕುಲಾಲ್, ಮುಂತಾದವರು ಕಾರ್ಯಕ್ರಮವನ್ನ ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡಾ ಕೂಟ ಸ್ಪರ್ಧೆಯ ಬಹುಮಾನ ವಿತರಣೆ ಮಾಡಿ, ಯಾವುದೇ ಸಂಘಟನೆ ಬೆಳೆಯಬೇಕಾದರೆ ಹಿರಿಯರು ಮತ್ತು ಯುವಕರು ಸೇರಿ ಹಳೆ ಬೇರು ಮತ್ತು ಹೊಸ ಚಿಗುರಿನ […]

ಕಾರ್ಕಳ ಡಿಪ್ಲೋಮಾ ಕಾಲೇಜಿನ ಆವರಣದಲ್ಲಿ ಬಂಡೆಗಳನ್ನು ಸ್ಪೋಟಿಸಿ ಕಾಮಗಾರಿ: ವಿದ್ಯಾರ್ಥಿಗಳಿದ್ದರೂ ಕ್ಯಾರೇ ಇಲ್ಲ: ನಮಗೆ ಆರೋಗ್ಯ ಸಮಸ್ಯೆ ಆದ್ರೆ ಯಾರು ಜವಾಬ್ದಾರಿ, ವಿದ್ಯಾರ್ಥಿಗಳ ಪ್ರಶ್ನೆ!

ಕಾರ್ಕಳ: ಕಾಬೆಟ್ಟಿನಲ್ಲಿರುವ ಸರಕಾರಿ ಡಿಪ್ಲೋಮಾ ಕಾಲೇಜು ಆವರಣದಲ್ಲಿ ಕಳೆದ ಕೆಲವು ಸಮಯಗಳಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಾಲೇಜು ಅಭಿವೃದ್ಧಿಗಾಗಿ ಕೆಲಸಗಳನ್ನು ಕೈಗೊಳ್ಳುತ್ತಿದ್ದರೂ ಹೆಬ್ಬಂಡೆಗಳೇ ಹೇರಳವಾಗಿರುವ ಈ ಜಾಗದಲ್ಲಿ ಹಾಡುಹಗಲೇ ಬಂಡೆಗಳನ್ನು ಸ್ಪೋಟಿಸಿ, ಯಾವ ಮುನ್ನೆಚ್ಚರಿಕೆಯೂ ಇಲ್ಲದೇ ಕಾಮಗಾರಿಗಳನ್ನು ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ, ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದೇ ಆವರಣಕ್ಕೆ ತಾಗಿಕೊಂಡಿರುವ ಸರಕಾರಿ ಪದವಿ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದು ಮೌನವಾಗಿರುವ ಈ ಸ್ಥಳದಲ್ಲಿ ಭಾರೀ ಪ್ರಮಾಣದ ಬಂಡೆಗಳನ್ನು ವಿದ್ಯಾರ್ಥಿಗಳು ಇರುವ ಹೊತ್ತಿನಲ್ಲಿಯೇ ಸಿಡಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ […]

ಕೊರಗ ಸಂಘಗಳ ಒಕ್ಕೂಟದಿಂದ ಕಾರ್ಕಳ ತಾಲೂಕು ತಹಶೀಲ್ದಾರ್ ಗೆ ಮನವಿ

ಕಾರ್ಕಳ: ಕೊರಗ ಸಂಘಗಳ ಒಕ್ಕೂಟವು ಸಮುದಾಯದ ಪ್ರಮುಖ ಬೇಡಿಕೆಯಾದ ಭೂಮಿಯ ಕುರಿತು ಮನವಿಯನ್ನು ಕಾರ್ಕಳ ತಾಲ್ಲೂಕು ತಹಶೀಲ್ದಾರ್ ಗೆ ಸಲ್ಲಿಸಲಾಯಿತು. ಮುಖ್ಯವಾಗಿ ಬಂಡಿಮಠದಲ್ಲಿರುವ ಹದಿಮೂರು ಕುಟುಂಬಗಳ ನಿವೇಶನ ಹಕ್ಕು ಪತ್ರಕ್ಕಾಗಿ ಮನವಿ ನೀಡಿ ದರ್ಕಾಸು ಭೂಮಿ ಅರ್ಜಿಗಳ ವಿಷಯವಾಗಿ ತಹಶೀಲ್ದಾರವರೊಂದಿಗೆ ಮಾತುಕತೆ ನಡೆಸಲಾಯಿತು. ಜನವರಿ 4ರಂದು ಇಲಾಖೆಯ ವತಿಯಿಂದ ನಡೆಸುವ ಅಕ್ರಮ ಸಕ್ರಮ ಸಭೆಯಲ್ಲಿ ಕೊರಗರ ಅರ್ಜಿಗಳನ್ನು ವಿಶೇಷವಾಗಿ ಪರಿಗಣಿಸಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿರುತ್ತಾರೆ. ಮುಂದಿನ 10 ದಿನಗಳ ಬಳಿಕ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತ್ಯೇಕ […]