ಮಂಗಳೂರು: ರೋಹನ್ ಎಸ್ಟೇಟ್ ಮುಕ್ಕ, ಮಾರುಕಟ್ಟೆಗೆ ಬಿಡುಗಡೆ.

ಮಂಗಳೂರು: ನಂದಿನಿ ನದಿಯ ಹಿನ್ನೀರಿನ ತಟದಲ್ಲಿ ರೋಹನ್ ಎಸ್ಟೇಟ್ ಮುಕ್ಕ ಬಡಾವಣೆ ನಿರ್ಮಾಣವಾಗಿದೆ. ಪರಿಸರದ ಶ್ರೀಮಂತಿಕೆಯ ಜತೆಗೆ ಅತ್ಯಂತ ಸುರಕ್ಷಿತ ಹಾಗೂ ಆಕರ್ಷಕವಾಗಿ ಬಡಾವಣೆಯು ಮೂಡಿ ಬಂದಿದೆ. ಪ್ರಕೃತಿ ಜತೆಗೆ ಮಿಳಿತವಾದ ಆರಾಮದಾಯಕ ಬದುಕಿಗಾಗಿ ಈ ಬಡಾವಣೆಯನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ಪರಿಪೂರ್ಣವಾದ ರೆಸಾರ್ಟ್ ಮಾದರಿಯ ಬಡಾವಣೆಯಾಗಿ ರೂಪುಗೊಂಡಿದೆ. ರೆಸಾರ್ಟ್ ಮಾದರಿಯ ಐಶಾರಾಮಿ ಬಡಾವಣೆ:ರೋಹನ್ ಎಸ್ಟೇಟ್ ಮುಕ್ಕ. ಇದು ರೆಸಾರ್ಟ್ ಅಲ್ಲ. ರೆಸಾರ್ಟ್ ಶೈಲಿಯ ವಸತಿ ಬಡಾವಣೆ. ಶ್ರೀಮಂತಿಕೆ, ಐಶಾರಾಮಿ ಮಾದರಿ ಎಂಬಂತೆ ಪ್ರಕೃತಿಯ ಮಡಿಲಿನಲ್ಲಿ ತಲೆ ಎತ್ತಿ […]

ಉಡುಪಿ: ಭಾರತೀಯ ದಂತ ವೈದ್ಯರ ಉಡುಪಿ ಶಾಖೆಯ ಪದಗ್ರಹಣ.

ಉಡುಪಿ: ಭಾರತೀಯ ದಂತ ವೈದ್ಯರ ಸಂಘ ಇದರ ಪದಗ್ರಹ ಸಮಾರಂಭವು ಭಾನುವಾರದಂದು ನಡೆಯಿತು. ಅಧ್ಯಕ್ಷರಾಗಿ ಡಾ. ಯು ಬಿ ಶಬರಿ , ಕಾರ್ಯದರ್ಶಿಯಾಗಿ ಡಾ. ಅತುಲ್ ಯು.ಆರ್. ಹಾಗೂ ಕೋಶಾಧಿಕಾರಿಯಾಗಿ ಡಾ.ತೇಜಕಿರಣ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು. ಡಾ. ಶಬರಿ ಮುಂದಿನ ಸಾಲಿನ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಸಮಾರಂಭದಲ್ಲಿ ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಿ ಎಸ್ ಚಂದ್ರಶೇಖರ್, ನಿಕಟಪೂರ್ವ ಅಧ್ಯಕ್ಷ ಡಾ. ಜಗದೀಶ್ ಜೋಗಿ , ಪದಗ್ರಹಣ ಅಧಿಕಾರಿ ಡಾ. ಗುರುರಾಜ್ ಕೆ , […]

ಮಂಗಳೂರು: ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರ ಮಂಜೇಶ್ವರಂದಲ್ಲಿ “ಸ್ನೇಹ ಮಿಲನ-2024” ಕ್ರಿಸ್‌ಮಸ್ ಕಾರ್ಯಕ್ರಮ ಆಚರಣೆ.

ಮಂಗಳೂರು: ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರ ಮಂಜೇಶ್ವರಂದಲ್ಲಿ “ಸ್ನೇಹ ಮಿಲನ-2024 ” ಎಂಬ ಕ್ರಿಸ್‌ಮಸ್ ಕಾರ್ಯಕ್ರಮವನ್ನು ದಿನಾಂಕ 21 ಡಿಸೆಂಬರ್ 2024 ರಂದು ಆಚರಿಸಲಾಯಿತು. ಸ್ನೇಹಾಲಯದ ವಾರ್ಷಿಕ ಕ್ರಿಸ್‌ಮಸ್ ಆಚರಣೆಯು ನಿವಾಸಿಗಳಲ್ಲಿಹೊಸ ಉತ್ಸಾಹವನ್ನು ಜೀವಂತವಾಗಿರಿಸಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥರಾದ ಶಿಲ್ಪಾ ದ್ಯಾವಯ್ಯ ಐಪಿಎಸ್, ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಶಿವಪ್ರಕಾಶ್ ಡಿ.ಎಸ್ ಸೇರಿದಂತೆ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು. ಹೊಸಂಗಡಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾ. ಲೋಯಸ್ […]

ಮಣಿಪಾಲ:ಮಣಿಪಾಲದ ಟಿ. ಎ. ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಅಲುಮ್ನಿ ಅಸೋಸಿಯೇಷನ್(ರಿ)(ಹಳೆ ವಿದ್ಯಾರ್ಥಿ ಸಂಘ) ವತಿಯಿಂದ ಕ್ರೀಡಾ ಸಾಮಗ್ರಿ ಮತ್ತು ಆಟಿಕೆಗಳ ಕೊಡುಗೆ.

ಮಣಿಪಾಲ:ಶ್ರೀ ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ, ತೆಕಟ್ಟೆ ಶಾಲೆಗೆ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಅಲುಮ್ನಿ ಅಸೋಸಿಯೇಷನ್ (ರಿ) ವತಿಯಿಂದ ಕೊಡುಗೆಯಾಗಿ ನೀಡಿದ ಸುಮಾರು ರೂ 60,000 ಮೌಲ್ಯದ ಕ್ರೀಡಾ ಸಾಮಗ್ರಿ, ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಅಲುಮ್ನಿ ಅಸೋಸಿಯೇಷನ್ ನ ಕಾರ್ಯದರ್ಶಿ ರಾಜೇಂದ್ರ ಕಾಮತ್ ಮಾತನಾಡುತ್ತಾ ಅನೇಕ ವರ್ಷಗಳಿಂದ ಈ ಶಾಲೆಗೆ ಹಲವು ಬಾರಿ ಭೇಟಿ ನೀಡಿದ್ದು ಇಂದಿನ ಆಧುನಿಕ ಶಿಕ್ಷಣಕ್ಕೆ ಅನುಕೂಲವಾಗುವಂತಹ ಆಟಿಕೆಗಳನ್ನು ಹಾಗೂ ಕ್ರೀಡಾ ಸಾಮಗ್ರಿಗಳನ್ನು […]

ಉಡುಪಿ: ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ.

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಉದ್ಯಮದಾರರು, ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕವಾಗಿ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಕೋಟ್ಪಾ ಕಾಯ್ದೆಯಂತೆ ನಿಗಧಿತ ಶುಲ್ಕ ಪಾವತಿಸಿಕೊಂಡು ಕಡ್ಡಾಯವಾಗಿ ಉದ್ಯಮ ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಸರಕಾರದ ಸುತ್ತೋಲೆಯಂತೆ ಶಾಲಾ ಕಾಲೇಜು, ದೇವಸ್ಥಾನ, ಆಸ್ಪತ್ರೆ ಹಾಗೂ ಸಂಸ್ಥೆಯಿಂದ 100 ಗಜ ಅಂತರದಲ್ಲಿ ಯಾರು ಕೂಡ ತಂಬಾಕು ಉತ್ಪನ್ನಗಳ ಮಾರಾಟವನ್ನು ಮಾಡುವಂತಿಲ್ಲ. ಒಂದುವೇಳೆ ಮಾರಾಟ ಮಾಡುತ್ತಿದ್ದಲ್ಲಿ ಪ್ರಕಟಣೆ ತಲುಪಿದ ತಕ್ಷಣವೇ ಸದ್ರಿ ಉದ್ಯಮವನ್ನು ಸದ್ರಿ […]