ಮಂಗಳೂರು:ಸೈಂಟ್ ಆನ್ನಾ ಚರ್ಚ್ ಕೆಲರಾಯ್‌ಯಲ್ಲಿ ಬಂಧುತ್ವ ಕ್ರಿಸ್ಮಸ್ 2024
ಮಂಗಳೂರು:ಸೈಂಟ್ ಆನ್ನಾ ಚರ್ಚ್, ಕೆಲರಾಯ್- ಇಲ್ಲಿಯ ಚರ್ಚ್ ಪಾಲನಾ ಮಂಡಳಿ ಆಯೋಜಿಸಿದ ‘ಬಂಧುತ್ವ ಕ್ರಿಸ್ಮಸ್ 2024, ದಿನಾಂಕ 22.12.2024 ರಂದು ಭಾನುವಾರ ಸಂಜೆಯ 6 ರಿಂದ 7.30ರ ವರೆಗೆ ಕೆಲರಾಯ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಕೆಲರಾಯ್ ಚರ್ಚ್ ಧರ್ಮಗುರು ಫಾದರ್ ಸಿಲ್ವೆಸ್ಟರ್ ಡಿಕೊಸ್ಟಾ ವಹಿಸಿದ್ದು, ಅತಿಥಿಗಳಾಗಿ ಬಿಜೈ ಲೂರ್ಡ್ಸ್ ಶಾಲೆಯ ನಿವೃತ್ತ ಶಿಕ್ಷಕ, ನೀರುಮಾರ್ಗ ನಿವಾಸಿ ಆನಂದ ಮಾಸ್ಟರ್ ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾಗಿ ಮೊಹಮ್ಮದ್ ಶಫೀಖ್, ಕೌಸರಿ ಕುಕ್ಕಾಜೆ (ಧರ್ಮಗುರುಗಳು, ಆಲ್-ಮುಬಾರಕ್ […]
ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮತಾಂತರ ಗದ್ದಲ
ಉಡುಪಿ: ಉಡುಪಿ ನಗರಸಭೆಯ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಜೋಡುಕಟ್ಟೆಯ ಡಯಾನ ಹೋಟೆಲ್ ಸಮೀಪದ ಪ್ರಾರ್ಥನ ಮಂದಿರವೊಂದರಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ವಿಷಯ ಭಾರೀ ಗದ್ದಲಕ್ಕೆ ಕಾರಣವಾಯಿತು.ವಿಷಯ ಪ್ರಸ್ತಾಪಿಸಿದ ಆಡಳಿತ ಸದಸ್ಯ ವಿಜಯ ಕೊಡವೂರು ಅವರು, ಈ ಕಟ್ಟಡದಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ಅನುಮಾನವಿದೆ. ಶಿಕ್ಷಣ ನೀಡುವುದರ ಜೊತೆಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ..? ನಗರಸಭೆಯ ಕಡತಗಳಲ್ಲಿ ಈ ಕಟ್ಟಡಕ್ಕೆ ಯಾವ ಪರವಾನಿಗೆ ನೀಡಲಾಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಯಶ್ ಪಾಲ್ […]
ಹೆಬ್ರಿ ಎಸ್.ಆರ್. ಕಾಲೇಜಿನಲ್ಲಿ ವಾರ್ಷಿಕೋತ್ಸವ, ನೂತನ ಸೆಮಿನಾರ್ ಹಾಲ್ ಉದ್ಘಾಟನೆ.
ಹೆಬ್ರಿ: ಗುಣಮಟ್ಟದ ಶಿಕ್ಷಣ ಗುರಿಮುಟ್ಟಿಸುತ್ತದೆ ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಕಳೆದ 26 ವರ್ಷಗಳಿಂದ ಶಿಸ್ತುಬದ್ಧ ಶಿಕ್ಷಣದ ಮೂಲಕ ಶೈಕ್ಷಣಿಕ ಕ್ರಾಂತಿ ಮೂಡಿಸಿ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಇತ್ತ ಮುಖ ಮಾಡುವಂತೆ ಮಾಡಿದ ನಾಗರಾಜ ಶೆಟ್ಟಿ ದಂಪತಿಗಳ ಶ್ರಮ ಶ್ಲಾಘನೀಯ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಅವರು ಡಿ. 21ರಂದು ಹೆಬ್ರಿಯ ಎಸ್. ಆರ್. ಸಮೂಹ ಶಿಕ್ಷಣ ಸಂಸ್ಥೆಯ 26ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೆಮಿನಾರ್ ಹಾಲ್ ಉದ್ಘಾಟಿಸಿ ಸಂಸ್ಥೆಯ ಸಾಧಕ […]
ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ
ಉಡುಪಿ : ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಮೇರು ಕಲಾವಿದರಾಗಿ ಮೆರೆದ ದಿ.ಮಲ್ಪೆ ವಾಸುದೇವ ಸಾಮಗ ಅವರ ಬದುಕು ಅವರು ರಚಿಸಿದ ಯಕ್ಷಗಾನ ಕೃತಿಗಳು ಯಕ್ಷಗಾನಾಸಕ್ತರಿಗೆ ದಾರಿ ದೀಪಗಳಾಗಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವೀ ಕಲಾವೃಂದ ಕೋಮೆ ಹಾಗೂ ಸಂಯಮ ಕೋಟೇಶ್ವರ ಸಹಕಾರದಲ್ಲಿ ನಡೆದ ಖ್ಯಾತ ಯಕ್ಷಗಾನ ಕಲಾವಿದ ದಿ.ಮಲ್ಪೆ ವಾಸುದೇವ ಸಾಮಗ ಅವರ ೪ನೇ ಸಂಸ್ಮರಣಾ […]
ಬಂಟ್ವಾಳ: ಶಾಲಾ ಕೊಠಡಿಯಲ್ಲಿ ಯುವತಿಯನ್ನು ಕೂಡಿ ಹಾಕಿ ಅತ್ಯಾಚಾರ; ಆರೋಪಿಯ ಬಂಧನ.
ಬಂಟ್ವಾಳ: ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ವೀಕ್ಷಣೆಗೆ ತೆರಳಿದ್ದ ಯುವತಿಯೋರ್ವಳನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಯುವಕೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಾವೂರು ನಿವಾಸಿ ಜಯಂತ ಆರೋಪಿ. ಡಿ.14ರಂದು ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಲು ಮನೆಯವರ ಜೊತೆ ತೆರಳಿದ್ದ ಯುವತಿಯನ್ನು ಆರೋಪಿ ಜಯಂತ ಬಲವಂತವಾಗಿ ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದಾಗಿ ನೊಂದ ಯುವತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ. […]