ವಿದ್ಯುತ್ ಕಂಬದಿಂದ ಬಿದ್ದು ಮೃತ್ಯು
ಶಂಕರನಾರಾಯಣ, ಡಿ.22: ಕಂಬ ಹತ್ತಿ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಪೀಡ್ಸ್ ಕಾಯಿಲೆಯಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಶಂಕರನಾರಾಯಣ ಕಯ್ಯಾಣಿಗೆ ಹೋಗುವ ರಸ್ತೆ ಬಳಿ ಡಿ.21ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಶೇಡಿಮನೆ ಗ್ರಾಮದ ರಾಮ ಅವರ ಅವಳಿ ಸಹೋದರ ಲಕ್ಷ್ಮಣ(30) ಎಂದು ಗುರುತಿಸಲಾಗಿದೆ. ಪೀಡ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಲಕ್ಷ್ಮಣ ವಿದ್ಯುತ್ ಲೈನ್ ಕೆಲಸವನ್ನು ಮಾಡಿಕೊಂಡಿದ್ದು ಇವರು ಹೊಸದಾಗಿ ನಿಲ್ಲಿಸಿದ ಮೂರು ಕಂಬಗಳಲ್ಲಿನ ಲೈನ್ ಕೆಲಸವನ್ನು ಮಾಡಲು ಕಂಬ ಹತ್ತಿದ್ದರು. ಈ ವೇಳೆ ಲಕ್ಷ್ಮಣ […]
ಕುಂದಾಪುರ: ಸಮುದ್ರ ಪಾಲಾಗಿದ್ದ ಜೆಟ್ ಸ್ಕೀ ರೈಡರ್ ಮೃತದೇಹ ಪತ್ತೆ
ಕುಂದಾಪುರ: ತ್ರಾಸಿ ಬೀಚ್ ನಲ್ಲಿ ಶನಿವಾರ ಸಂಜೆ ಪ್ರವಾಸಿಗನನ್ನು ಕರೆದೊಯ್ಯತಿದ್ದ ಜೆಟ್ಸ್ಕೀ ಅಪಘಾತಕ್ಕೀಡಾಗಿ ನಾಪತ್ತೆಯಾಗಿದ್ದ ಜೆಟ್ ಸ್ಕೀ ರೈಡರ್ ರೋಹಿದಾಸ್ ಯಾನೆ ರವಿ (41)ಯವರ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.ಘಟನೆ ನಡೆದ 36 ಗಂಟೆಗಳ ಬಳಿಕ ಇಲ್ಲಿನ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆ ಆಗಿದೆ. ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳಿದ ವೇಳೆ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಅವರು […]
ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ “ವಿಶ್ವ ಧ್ಯಾನ ದಿನಾಚರಣೆ”
ಕಾರ್ಕಳ: ನಗರದ ಎಸ್. ವಿ.ಟಿ. ಶಾಲಾ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ “ವಿಶ್ವ ಧ್ಯಾನ ದಿನಾಚರಣಾ” ಸಮಾರಂಭ ಜರಗಿತ್ತು, ಸಮಾರಂಭದ ಆಧ್ಯಕ್ಷತೆಯನ್ನು ಮುಂಬೈಯ ರಾಜಯೋಗ ಶಿಕ್ಷಕಿ ರಾಜಯೋಗಿನಿ ಬಿ. ಕೆ. ಸುಕೇತಾ ಶೆಟ್ಟಿಯವರು ವಹಿಸಿದ್ದು, ಧ್ಯಾನ ಮಾಡಲು ಆಧ್ಯಾತ್ಮಿಕ ಜ್ಞಾನದ ಅವಶ್ಯಕತೆಯಿದೆ, ಮೊತ್ತಮೊದಲು ನಾನು ಯಾರು, ಪರಮಾತ್ಮ ಯಾರು ಎಂಬುದನ್ನು ಅರಿತು ಧ್ಯಾನ ಮಾಡುವುದರಿಂದ ಪರಮಾತ್ಮ ಪ್ರೀತಿ ಪಡೆಯಲು ಸಾದ್ಯ. ಪ್ರತಿದಿನ ಧ್ಯಾನಾಭ್ಯಾಸದಿಂದ ಆಂತರಿಕ ಶಾಂತಿ, ಜಾಗತಿಕ ಸದ್ಭಾವನೆ ಮಾನಸಿಕ ಸ್ಪಷ್ಟತೆ, ಒತ್ತಡದಿಂದ ಮುಕ್ತಿಯ […]
ಉಡುಪಿ: ಕೊಡವೂರು ನಾರಾಯಣ ಬಲ್ಲಾಳ್ ಅವರಿಗೆ ನಾಗರಿಕ ಅಭಿನಂದನೆ.
ಉಡುಪಿ: ಸಹಕಾರ ರತ್ನ ಪುರಸ್ಕಾರ ದೊರೆತ ಸಂಧರ್ಭದಲ್ಲಿ ಅಭಿನಂದನಾ ಸಮಿತಿಯ ವತಿಯಿಂದ ನಾಗರಿಕ ಅಭಿನಂದನೆಯು ಶನಿವಾರದಂದು ಕೊಡವೂರು ಶಾಲಾ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿಯವರು ವಾಣಿಜ್ಯ ಸಂಸ್ಥೆಗಳಿಗಿಂತ ಸಹಕಾರಿ ಸಂಸ್ಥೆಗಳು ಜನ ಸಾಮಾನ್ಯರ ಅಗತ್ಯತೆಗಳಿಗೆ ಬಹು ವೇಗವಾಗಿ, ಉತ್ತಮವಾಗಿ ಸ್ಪಂದಿಸಿ ಅವರ ಆರ್ಥಿಕ ಅವಶ್ಯಕತೆಗಳಿಗೆ ಪರಿಹಾರ ನೀಡುವ ಕಾರಣ ಇದೀಗ ಸಹಕಾರಿ ಕ್ಷೇತ್ರ ಉತ್ತುಂಗದಲ್ಲಿದೆ. ಅದಕ್ಕೆ ನಾರಾಯಣ ಬಲ್ಲಾಳ್ ರಂತಹ ಸಹಕಾರಿ ಧುರೀಣರು ಹಾಗೂ ಸಿಬ್ಬಂದಿಗಳು ಕಾರಣ ಎಂದು […]