ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ.
ಕುಂದಾಪುರ: ಕುಂದಾಪುರದ HR ಕನ್ಸಲ್ಟೆನ್ಸಿ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1.ಟೆಲಿಕಾಲರ್ – 2 (Female) 2.ಆಫೀಸ್ ಸ್ಟಾಫ್ – 2( Female) ಯಾವುದೇ ಡಿಗ್ರಿ ವಿದ್ಯಾರ್ಹತೆಯನ್ನು ಹೊಂದಿದ್ದು ಹೊಸಬರಿಗೆ ಆದ್ಯತೆ ನೀಡಲಾಗುವುದು.ಕೆಲಸದ ಸಮಯ:ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆ.ಆದಿತ್ಯವಾರ ರಜಾದಿನ. ಮಾಹಿತಿಗಾಗಿ ಸಂಪರ್ಕಿಸಿ:9019112723
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ: ಚಾಲಕ ಮೃತ್ಯು
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಉರ್ಲಾಂಡಿಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಡಿ. 22 ರಂದು ಬೆಳಗ್ಗೆ ಸಂಭವಿಸಿದೆ. ಕಬಕ ಗ್ರಾಮದ ನೆಹರೂನಗರ ಕುಡ್ವಸ್ ಕಂಪೌಂಡ್ ನಿವಾಸಿ, ರಿಕ್ಷಾ ಚಾಲಕ ಸೂರ್ಯಕುಮಾರ್ (64) ಮೃತರು. ಸೂರ್ಯಕುಮಾರ್ ಅವರು ಬೆಳಗ್ಗೆ 6.30 ಹೊತ್ತಿಗೆ ತನ್ನ ರಿಕ್ಷಾದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ನೆಹರೂನಗರ ಕಡೆಯಿಂದ ಪುತ್ತೂರು ಮಹಾಮಾಯ್ಮಿ ಟೆಂಪಲ್ ರಸ್ತೆ ಕಡೆಗೆ ತೆರಳುತ್ತಿದ್ದ ವೇಳೆ ಉರ್ಲಾಂಡಿ ಬಳಿ ರಿಕ್ಷಾಕ್ಕೆ ಶ್ವಾನವೊಂದು ಅಡ್ಡ ಬಂದಿದ್ದು […]
ಉಡುಪಿ: ವಾಲಿಬಾಲ್ ತಂಡದಿಂದ ವಿದ್ಯಾರ್ಥಿಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ದ.ಸಂ.ಸ ಪ್ರತಿಭಟನೆ
ಉಡುಪಿ: ರಾಷ್ಟ್ರೀಯ ವಾಲಿಬಾಲ್ ಪಂದ್ಯಕೂಟಕ್ಕೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ದಲಿತ ವಿದ್ಯಾರ್ಥಿ ಸುಜಿತ್ ಮತ್ತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ಜಸೀರ್’ನನ್ನು ಜಿಲ್ಲಾಧಿಕಾರಿ ಅವರ ಶಿಫಾರಸಿನ ಮೇರೆಗೆ ಕೈಬಿಡಲಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಜಿಲ್ಲಾಧಿಕಾರಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕುಂದಾಪುರದ ರಾಜಕೀಯ ವ್ಯಕ್ತಿಯ ಪ್ರಭಾವಕ್ಕೆ ಮಣಿದು ಇಬ್ಬರು ಪ್ರತಿಭಾವಂತ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ […]
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆ ಬೆಂಗಳೂರು-ಮಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು..!
ಮಂಗಳೂರು: ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯಿಂದ ಯಶವಂತಪುರ – ಮಂಗಳೂರು ಜಂಕ್ಷನ್ – ಯಶವಂತಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಾಟ ನಡೆಸಲಿದೆ. ನಂ.06505 ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ವಿಶೇಷ ರೈಲು ಡಿ.23 ಮತ್ತು 27ರಂದು (ಸೋಮವಾರ- ಶುಕ್ರವಾರ) ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದೆ. 1.03ಕ್ಕೆ ಕುಣಿಗಲ್, 2.18ಕ್ಕೆ ಚನ್ನರಾಯಪಟ್ಟಣ, ಮುಂಜಾನೆ 3.50ಕ್ಕೆ ಹಾಸನ, 4.50ಕ್ಕೆ ಸಕಲೇಶಪುರ, 8.25ಕ್ಕೆ ಸುಬ್ರಹ್ಮಣ್ಯ ರೋಡ್, 9.23ಕ್ಕೆ ಕಬಕ […]
ಕುಂದಾಪುರ: ಗಾಳಿ ತುಂಬುತ್ತಿದ್ದ ವೇಳೆ ಟಯರ್ ಸ್ಪೋಟ; ಯುವಕ ಗಂಭೀರ
ಉಡುಪಿ: ಟೈಯರ್ ಪಂಚರ್ ಶಾಪ್ ವೊಂದರಲ್ಲಿ ಟೈಯರಿಗೆ ಗಾಳಿ ತುಂಬುವ ಸಂದರ್ಭದಲ್ಲಿ ಟೈಯರ್ ಸಿಡಿದು ಸ್ಪೋಟಗೊಂಡ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದೆ. ಟಯರ್ ಸ್ಫೋಟಗೊಳ್ಳುವ ಭಯಾನಕ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಭೀರ ಗಾಯಗೊಂಡ ಯುವಕ ಅಬ್ದುಲ್ ರಜೀದ್ (19) ಎಂದು ತಿಳಿದುಬಂದಿದೆ. ಖಾಸಗಿ ಶಾಲೆಯ ಬಸ್ಸೊಂದು ಟೈಯರ್ ಪ್ಯಾಚ್ ಗೆಂದು ಬಂದಿದ್ದು, ಟಯರನ್ನು ಕೆಳಗಿಳಿಸಿ ಗಾಳಿ ತುಂಬುತ್ತಿದ್ದಾಗ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದು ಸ್ಪೋಟಗೊಂಡಿದೆ. ಸ್ಪೋಟಗೊಂಡ ಟೈಯರ್ ನ […]