ಉಡುಪಿ:ಪ್ರವಾಸೋದ್ಯಮ ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ ಮೈಸೂರು ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಬೆಂಗಳೂರು ಇವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ರಾಜ್ಯಾದ್ಯಂತ 20 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಂದ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ವಿವರ : ಫುಡ್ […]

ಉಡುಪಿ:ಉದ್ದಿಮೆದಾರರು ಜಿಲ್ಲೆಯಲ್ಲಿ ಕಿರು ಉದ್ಯಮಗಳ ಸ್ಥಾಪನೆಗೆ ಮುಂದಾಗಿ : ಸಂಸದ ಕೋಟಾ ಶ್ರೀನಿವಾಸ ಪೂಜಾರಿ

ಉಡುಪಿ: ರೈತರನ್ನು ಉದ್ಯಮಿಗಳನ್ನಾಗಿ ಮಾಡಿ, ಅವರ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ, ಸಂಸ್ಕರಿಸಿ, ದೇಶ ಮತ್ತು ವಿದೇಶಗಳಿಗೆ ದೇಶೀಯ ಉತ್ಪನ್ನಗಳನ್ನು ರಪ್ತು ಮಾಡುವ ಮೂಲಕ ವಿದೇಶಗಳಿಗೆ ಪರಿಚಯಿಸುವ ಉದ್ಧೇಶ ಹೊಂದಿದ್ದು, ಇದಕ್ಕಾಗಿ ಕಿರು ಉದ್ಯಮಗಳನ್ನು ಸ್ಥಾಪಿಸಲು ಜಿಲ್ಲೆಯ ಉದ್ದಿಮೆದಾರರು ಮುಂದೆ ಬರಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ […]

ಉಡುಪಿ: ಜ.1ರಿಂದ ಬಾಳಿಗಾ ಆಸ್ಪತ್ರೆಯಲ್ಲಿ 33ನೇ ಮದ್ಯವ್ಯಸನ ವಿಮುಕ್ತಿ ಶಿಬಿರ

ಉಡುಪಿ: ದೊಡ್ಡಣಗುಡ್ಡೆ ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ‌ ಅವರ ನೇತೃತ್ವದಲ್ಲಿ ಜನವರಿ 1ರಿಂದ 10ರ ವರೆಗೆ 33ನೇ ಮದ್ಯವ್ಯಸನ ವಿಮುಕ್ತಿ ಶಿಬಿರ ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಮನೋವೈದ್ಯ ಡಾ. ದೀಪಕ್ ಮಲ್ಯ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ.1ರಂದು ಸಂಜೆ 4 ಗಂಟೆಗೆ ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ಎನ್. ಬಿ. ವಿಜಯ್ ಬಲ್ಲಾಳ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಜ.10ರಂದು ಬೆಳಿಗ್ಗೆ 10ಗಂಟೆಗೆ ಶಿಬಿರದ […]

ಕಾರ್ಕಳ: ಜ್ಞಾನಸುಧಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ-ರಾಷ್ಟ್ರೀಯ ಗಣಿತ ದಿನಾಚರಣೆ ಸಂಭ್ರಮ, ಗಣ್ಯರ ಸಂಗಮ: ಜ್ಞಾನಸುಧಾ ಕಾಲೇಜಿನ ಕಂಪು ನಾಡಿನಾದ್ಯಂತ ಪಸರಿಸಿದೆ: ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ

ಕಾರ್ಕಳ: ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸಿ,  ಗ್ರಾಮೀಣ ಭಾಗದಲ್ಲಿದ್ದುಕೊಂಡೇ ನಾಡಿನಾದ್ಯಂತ ಶಿಕ್ಷಣದ ಕಂಪನ್ನು ಪಸರಿದ ಹೆಗ್ಗಳಿಕೆ ಕಾರ್ಕಳದ ಕುಕ್ಕುಂದೂರಿನ ಜ್ಞಾನಸುಧಾ ಕಾಲೇಜಿನದ್ದು, ಜ್ಞಾನಸುಧಾ ಎನ್ನುವುದು ಜ್ಞಾನದ ಭಂಡಾರ ಎಂದು ಎಂ.ಆರ್.ಜಿ.ಗ್ರೂಪ್‌ಗಳ ಸಂಸ್ಥಾಪಕ ಹಾಗೂ  ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.  ಅವರು ಕಾರ್ಕಳ ಜ್ಞಾನಸುಧಾ ಗಣಿತ ನಗರದ ಕ್ಯಾಂಪಸ್‌ನಲ್ಲಿ ಡಿ.22ರಂದು ನಡೆದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್ ಹಾಗೂ  ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ, ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು […]

ಕಟಪಾಡಿ: ಪುರಾತನ ನೀರಿನ ಟ್ಯಾಂಕ್ ನೆಲಸಮ; ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ

ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಯಲ್ಲಿ ಶಿಥಿಲಗೊಂಡಿದ್ದ ನೀರಿನ ಟ್ಯಾಂಕೊಂದನ್ನು ತೆರವು ಮಾಡಲಾಗಿದೆ. ಆದರೆ ಈ ವೇಳೆ ನಿರ್ಲಕ್ಷ್ಯ ವಹಿಸಿದ್ದರಿಂದ ಪಕ್ಕದ ಕಟ್ಟಡಕ್ಕೆ ಹಾನಿಯಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡಿದ್ದ ಈ ನೀರಿನ ಟ್ಯಾಂಕ್ ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿ ಇತ್ತು. ಕುಸಿಯುವ ಹಂತದಲ್ಲಿದ್ದ ಟ್ಯಾಂಕಿಯನ್ನು ತೆರವುಗೊಳಿಸಿಲು ಸ್ಥಳೀಯ ಕಟಪಾಡಿ ಪಂಚಾಯತ್ ತೀರ್ಮಾನ ಮಾಡಿತ್ತು. ಕೊನೆಗೂ ಪುರಾತನ ಟ್ಯಾಂಕಿಯನ್ನು ಉರುಳಿಸಿ ನೆಲಸಮ ಮಾಡಲಾಯಿತು. ಆದರೆ ಈ ವೇಳೆ ಪಕ್ಕದಲ್ಲಿದ್ದ ಡಾ. ರವೀಂದ್ರ ಶೆಟ್ಟಿ ಎಂಬುವರಿಗೆ ಸೇರಿದ ಕ್ಲಿನಿಕ್ […]