ಕಾರ್ಕಳ: ಲಾರಿ-ಬೈಕ್ ನಡುವೆ ಅಪಘಾತ: ಬೈಕ್ ಸವಾರ ಮೃತ್ಯು

ಕಾರ್ಕಳ, ಡಿ.19: ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ನೀರೆ ಅಂಚೆ ಕಚೇರಿಯ ಶಾರದ ವೇದಿಕೆಯ ಬಳಿ ಡಿ.18ರಂದು ನಡೆದಿದೆ. ಮೃತರನ್ನು ರಾಜು ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಲಾರಿಯು ಬೈಲೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೈಕ್ ಸಮೇತರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸವಾರ ರಾಜು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ […]

ಮಾನಹಾನಿ ಪದ ಬಳಕೆ ಆರೋಪ: ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಬಂಧನ.

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಗುರುವಾದಂದು ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಈಗ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ವಿರುದ್ಧ ಎಫ್​​​​​​​ಐಆರ್​ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಈಗ ಸಿಟಿ ರವಿ ಅವರನ್ನು ಬೆಳಗಾವಿಯಲ್ಲಿನ ಸುವರ್ಣ ಸೌಧದಲ್ಲಿ ಪೊಲೀಸರು ಬಂಧಿಸಿದ್ದಾರೆ.ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಈಗ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. […]

ಉಡುಪಿ: ಗಿರಿಜಾ ಹೆಗ್ಡೆ ಅವರಿಗೆ “ಶಿಕ್ಷಕ ರತ್ನ” ಪ್ರಶಸ್ತಿ.

ಉಡುಪಿ: ಶ್ರೀಮತಿ ಗಿರಿಜಾ ಹೆಗಡೆ ಅವರು ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜ್ ಉಡುಪಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ವಿದ್ಯಾರ್ಹತೆ: ಎಂ.ಎ.(ಅರ್ಥಶಾಸ್ತ್ರ), ಎಂ.ಫಿಲ್(ಉತ್ತರಕನ್ನಡ ಕೈಗಾರಿಕೆಗಳ ಪ್ರಗತಿ), ಎಂ.ಬಿ.ಎ.(ಹೆಚ್ ಆರ್), ಬಿ.ಎಡ್.ಸ್ಲೆಟ್ ಪರೀಕ್ಷೆ ಪಾಸಾಗಿರುತ್ತಾರೆ. ನಿಮ್ಹಾನ್ಸ್ ಕೊಡಮಾಡುವ ಒಂದುವಾರದ ಜೀವನಕೌಶಲ್ಯ ತರಬೇತಿ ಪಡೆದಿದ್ದಾರೆ. ಹವ್ಯಾಸ-ಕಥೆ ಕವನ ರಚನೆ.ಇವರು ಪ್ರಕಟಿಸಿದ ಕೃತಿಗಳು1.ಅನಾವರಣ ಕವನ ಸಂಕಲನ .ಕಾರ್ನಾಡ್ ಸದಾಶಿವರಾವ್ ಸ್ಮಾರಕ ಪ್ರಶಸ್ತಿ ಪಡೆದಿದೆ.2.ಅಗಸೆಬಾಗಿಲು- ಕವನ ಸಂಕಲನ3.ನತ್ತು- ಕಥಾ ಸಂಕಲನ ದ ಕಥೆಗೆ […]