ಬೆಳ್ತಂಗಡಿ: ವಿದ್ಯುತ್ ಶಾಕ್ ಹೊಡೆದು ಬಾಲಕ ಮೃತ್ಯು.
ಬೆಳ್ತಂಗಡಿ: ವಿದ್ಯುತ್ ಶಾಕ್ ಹೊಡೆದು ಶಾಲಾ ವಿದ್ಯಾರ್ಥಿ, ಬಾಲಕ ಮೃತಪಟ್ಟ ಘಟನೆ ಡಿ.19ರ ಗುರುವಾರ ನಡೆದಿದೆ. ಮೃತಪಟ್ಟ ಬಾಲಕ ತಾಲೂಕಿನ ಪೆರೋಡಿತ್ತಾಯನ ಕಟ್ಟೆ ಶಾಲೆ ಬಳಿ ನಿವಾಸಿ ಬೆಳ್ತಂಗಡಿ ಖಾಸಗಿ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ದಿ.ಸ್ಟ್ಯಾನ್ಲಿ ಡಿಸೋಜ ಅವರ ಪುತ್ರ ಸ್ಟೀಫನ್ (14). ಸ್ಟೀಫನ್ ಮನೆಗೆ ಕ್ರಿಸ್ಮಸ್ ಅಂಗವಾಗಿ ಸಂಜೆ ಸಾಂತಾಕ್ಲಾಸ್ ಬರುವ ಹಿನ್ನೆಲೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟರು. ಕಳೆದ ಕೆಲ ವರ್ಷಗಳ ಹಿಂದೆ ಹೆತ್ತವರನ್ನು ಕಳೆದುಕೊಂಡಿದ್ದ ಅವರು […]
ಡಾ. ಚೈತ್ರಾ ಆರ್ ಶೆಟ್ಟಿ ಅವರಿಗೆ ಪಿಎಚ್.ಡಿ ಪದವಿ
ಉಡುಪಿ: ಮಂಗಳೂರಿನ ನಿಟ್ಟೆ ಗುಲಾಬಿ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದ ಚೈತ್ರ ಆರ್ ಶೆಟ್ಟಿ ಇವರು ಮಂಡಿಸಿದ “IN SILICO STUDIES, SYNTHESIS AND EVALUATION OF ANTICANCER POTENTIAL OF NOVEL SUBSTITUTED PYRIDOPYRIMIDINES” ಎಂಬ ಮಹಾಪ್ರಭಂದಕ್ಕೆ ನಿಟ್ಟೆ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ. ಇವರು ಮಂದಾರ್ತಿ ಮೂಡುಬಾರಾಳಿ ರಾಜು ಶೆಟ್ಟಿ ಹಾಗೂ ಬೇಬಿ ಶೆಟ್ಟಿ ಅವರ ಪುತ್ರಿ. ಅಥಣಿ ಉದ್ಯಮಿ ಭರತ್ ಶೆಟ್ಟಿ ಅವರ ಪತ್ನಿ
ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಯೋಜನೆ ಅನುಷ್ಠಾನವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು: ಸದನದಲ್ಲಿ ವಿ.ಸುನಿಲ್ ಕುಮಾರ್ ಪ್ರಸ್ತಾಪ
ಕಾರ್ಕಳ: ಉಡುಪಿಯ ಎಲ್ಲೂರೂ ಯುಪಿಸಿಎಲ್ ವಿದ್ಯುತ್ ಸ್ಥಾವರದಿಂದ ಕೇರಳದ ಕಾಸರಗೋಡಿಗೆ 400 ಕೆವಿ ವಿದ್ಯುತ್ ಲೈನ್ ಯೋಜನೆಯಲ್ಲಿ ಸರಕಾರ ರೈತರಿಗೆ ಅನೂಕೂಲವಾಗುವಂತೆ ಬದಲಾವಣೆ ಮಾಡಿಕೊಳ್ಳಬೇಕು. ಆದ್ದರಿಂದ ತಕ್ಷಣಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಬೇಕು ಎಂದು ಡಿ.19 ರಂದು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರ ಗಮನ ಸೆಳೆದರು. ಈ ಯೋಜನೆಗೆ ಯಾರ ವಿರೋಧವೂ ಇಲ್ಲ. ಆದರೆ, ರೈತರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಯೋಜನೆ […]
ಬೆಳ್ತಂಗಡಿ: ಬೈಕಿಗೆ ಕಾರು ಢಿಕ್ಕಿ; ಬೈಕ್ ಸವಾರ ಮೃತ್ಯು.
ಮಂಗಳೂರು: ಎನ್.ಆರ್.ಪುರದಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಯುವಕ ಸಾವನ್ನಪ್ಪಿದ ಘಟನೆ ಡಿ.19ರ ಗುರುವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಕುಂದಲಿಕೆ ನಿವಾಸಿ ಶಜಿ ಎಂಬವರ ಪುತ್ರ ಸಜೇಶ್ (26) ಎನ್. ಆರ್. ಪುರ ಬಳಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಕೆಲಸಕ್ಕೆ ತೆರಳಿದ್ದು ಗುರುವಾರ ಮಧ್ಯಾಹ್ನ ಕೆಲಸದಿಂದ ಊಟಕ್ಕೆಂದು ತೆರಳುತಿದ್ದ ವೇಳೆ ಎದುರಿನಿಂದ ಬಂದ ಕಾರು ಬೈಕಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ […]
ಇಲಿ ಪಾಷಣ ಸೇವಿಸಿ ಆತ್ಮಹತ್ಯೆ
ಶಂಕರನಾರಾಯಣ, ಡಿ.19: ಮಾನಸಿಕ ಖಿನ್ನತೆಯಿಂದ ಡಿ.16ರಂದು ಮನೆಯಲ್ಲಿ ಇಲಿಪಾಷಣ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ ಆಜ್ರಿ ಗ್ರಾಮದ ಬಾಬಿ(38) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ.18ರಂದು ಮಧ್ಯಾಹ್ನ ವೇಳೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.