ಉಚ್ಚಿಲದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ; ಪಾದಾಚಾರಿ ಸಾವು

ಉಚ್ಚಿಲ: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ಉಚ್ಚಿಲ ಪೇಟೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದ ಶಿವಪ್ಪ ಪೂಜಾರಿ ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಉಚ್ಚಿಲದ ಪೇಟೆಯಲ್ಲಿ ರಸ್ತೆ ದಾಟುತ್ತಿದ್ದ ಶಿವಪ್ಪ ಪೂಜಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, SDPI ಅಂಬ್ಯುಲೆನ್ಸ್’ನಲ್ಲಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಶಿವಪ್ಪ ಪೂಜಾರಿ […]

ಉಡುಪಿ: ಅಪರಾಧ ತಡೆ ಮಾಸಾಚರಣೆ ಜಾಥಾಕ್ಕೆ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಜಾಥಾವನ್ನು ಇಂದು ಹಮ್ಮಿಕೊಳ್ಳಲಾಯಿತು. ಆ ಮೂಲಕ ಅಪರಾಧ ತಡೆಗಟ್ಟುವ ಕುರಿತು ಸಾರ್ವಜನಿಕವಾಗಿ ಅರಿವು ಮೂಡಿಸಲಾಯ್ತು. ನಗರದ ಬೋರ್ಡ್ ಹೈಸ್ಕೂಲು ಮುಂಭಾಗದಲ್ಲಿ ಜಾಥಾ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು. ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಕಾಲ್ನಡಿಗೆ ಜಾಥಾದ ನೇತೃತ್ವ ವಹಿಸಿದ್ದರು. ಪೊಲೀಸರು, ನಗರದ ಕಾಲೇಜು, ನರ್ಸಿಂಗ್ ವಿದ್ಯಾರ್ಥಿಗಳು ಭಾಗಿಯಾಗಿ ಜನಕ್ಕೆ ಮಾಹಿತಿಗಳನ್ನು ನೀಡಿದರು. ನೂಕುನುಗ್ಗಲಿರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಂದರ್ಭದಲ್ಲಿ ಮುಂಜಾಗೃತೆ […]

ಉಡುಪಿ:ಬ್ರಹ್ಮಾವರದಲ್ಲಿ ಅನ್ನದಾತ ಮಹೋತ್ಸವ ಕಾರ್ಯಕ್ರಮ

ಉಡುಪಿ:ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು, ಮಾರಾಟಗಾರರ ಸಂಘ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಹಾರ ಕಚೇರಿ ಸಹಭಾಗಿತ್ವದಲ್ಲಿ ಅನ್ನದಾತ ಮಹೋತ್ಸವ ಬ್ರಹ್ಮಾವರದ ಖಾಸಗಿ ಹಾಲ್ ನಲ್ಲಿ ಮಂಗಳವಾರ ನಡೆಯಿತು. ಪ್ರಮುಖರಾದ ಶೋಭಲತಾ, ಸುಧಾ ಪ್ರಿಯದರ್ಶಿನಿ, ಕೃಷ್ಣರಾಜ ಭಟ್ ಇದ್ದರು. ಎಸ್ ಬಿ ಐ ಅನ್ನದಾತ ಮಹೋತ್ಸವ 2024 ಕಾರ್ಯಕ್ರಮವನ್ನು ಶ್ರೀಮತಿ ಶೋಭಲತಾ ಅವರು ನಡೆಸಿಕೊಟ್ಟರು. ಆಹಾರೋದ್ಯಮದಲ್ಲಿ ವಿದ್ಯುತ್ ಇಲಾಖೆಯ ಸೌಲಭ್ಯಗಳ ಮತ್ತು ನಿಯಮಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಶ್ರೀ ಗಣರಾಜ ಭಟ್ ಹಾಗೂ […]

ವಿಟ್ಲ: ಬೈಕ್- ಟೆಂಪೊ ನಡುವೆ ಅಪಘಾತ; ಬೈಕ್ ಸವಾರ ಮೃತ್ಯು.

ಮಂಗಳೂರು: ಬೈಕ್ ಮತ್ತು ಟೆಂಪೊ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆದಿದೆ. ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಟಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಅವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಾಣಿಯ ಆಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ. […]

ಬ್ರಹ್ಮಾವರ: ಚಾರಿಟೇಬಲ್ ಟ್ರಸ್ಟ್‌ನ ಲಕ್ಷಾಂತರ ರೂ. ಹಣ ದುರುಪಯೋಗಪಡಿಸಿ ವಂಚನೆ; ಪ್ರಕರಣ ದಾಖಲು.

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ರೂರು ಟಿಪ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್‌ನ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಬಸ್ರೂರು ಟಿಪ್ ಸೆಷನ್ಸ್ ಚಾರಿಟಬಲ್ ಟ್ರಸ್ಟ್ ಸಂಸ್ಥೆಯ ಮೇಲ್ವಿಚಾರಕಿ ವಿಜಯಲಕ್ಷ್ಮೀ ಹಾಗೂ ಸುಮತಿ ಎಂಬವರು ಇತರರೊಂದಿಗೆ ಸೇರಿಕೊಂಡು ಬ್ರಹ್ಮಾವರ ತಾಲೂಕು ವಾರಂಬಳ್ಳಿ, ಹಾರಾಡಿ ಮತ್ತು ಬೈಂದೂರು ತಾಲೂಕಿನ ಕೊಲ್ಲೂರು, ಕುಂದಾಪುರ ತಾಲೂಕಿನ ಗಂಗೊಳ್ಳಿ ಹಾಗೂ ತಲ್ಲೂರು, ಹೊಂಬಾಡಿ, ಕಾರ್ಕಳ ಪುರಸಭಾ ವ್ಯಾಪ್ತಿಯ ಘಟಕಗಳಲ್ಲಿ ಸಂಗ್ರಹಿಸಿದ್ದ ಸಂಸ್ಥೆಗೆ ಸಂಬಂಧಿಸಿದ ಒಟ್ಟು 50ಲಕ್ಷ […]