ಉಡುಪಿ: ಅಂಬೇಡ್ಕರ್ ಗೆ ಅವಮಾನ ಮಾಡಿದ್ದು ಕಾಂಗ್ರೆಸ್ಸ್ ಹೊರತು ಬಿಜೆಪಿ ಅಲ್ಲ: ದಿನಕರ್ ಬಾಬು

ಉಡುಪಿ: ಇಂದು ಸದಾ ಕಾಲ ಅಂಬೇಡ್ಕರ್ ಹೆಸರನ್ನು ಜಪಿಸುವ ಕಾಂಗ್ರೆಸ್ಸ್ ಪಕ್ಷ, ಅಂದು ರಾಷ್ಟ್ರದ ಮೊದಲ ಕ್ಯಾಬಿನೆಟ್ ನಿಂದ ಅಂಬೇಡ್ಕರ್ ಅವರು ರಾಜೀನಾಮೆ ನೀಡುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ. ಅಂದಿನ ಕಾಂಗ್ರೆಸ್ಸ್ ಸರ್ಕಾರದ ವಿದೇಶಿ ನೀತಿ, ಆರ್ಟಿಕಲ್ 370 ಯಿಂದ ಅಸಮಾದಾನ ಹೊಂದಿದ್ದು, ಈ ಎಲ್ಲ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹಲವು ಬಾರಿ ಹೇಳಿದ್ದಾರೆ. ಅಂಬೇಡ್ಕರ ಹಾಗು ರಾಜಾಜಿ ರಾಜೀನಾಮೆ ನೀಡಿದಾಗ, ಕ್ಯಾಬಿನೆಟ್ ದುರ್ಬಲ ಆಗುತ್ತದೆ ಎಂದು ಕೇಳಿದಾಗ […]
ರಸ್ತೆ ನಿಮಯ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅಪಘಾತ ತಡೆಗಟ್ಟಲು ಸಾಧ್ಯವಿದೆ

ಉಡುಪಿ: ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ 250 ಮಂದಿ ಸಾವನ್ನಪ್ಪುತ್ತಿದ್ದಾರೆ. ಸರಾಸರಿ ಒಂದೂವರೆ ದಿನಕ್ಕೆ ಒಬ್ಬರಂತೆ ಅಪಘಾತದಿಂದ ಜೀವ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಜಿಲ್ಲಾ ಎಸ್ಪಿ ಡಾ.ಅರುಣ್ ಕಳವಳ ವ್ಯಕ್ತಪಡಿಸಿದರು. ಉಡುಪಿ ಜಿಲ್ಲಾ ಪೋಲಿಸ್, ಉಡುಪಿ ಉಪ ವಿಭಾಗದ ವತಿಯಿಂದ ನಗರದ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ಆಯೋಜಿಸಿದ ಅಪರಾಧ ತಡೆ ಮಾಸಾಚರಣೆ – 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಾಹನ ಚಾಲನೆಯ ವೇಳೆ ಅಗತ್ಯ ಮುಂಜಾಗೃತ ಕ್ರಮಗಳನ್ನು ವಹಿಸಿದಲ್ಲಿ ಅಪಘಾತಗಳನ್ನು ತಡೆಗಟ್ಟಬಹುದು ಎಂದರು. […]
ಉಡುಪಿ-ಮಂಗಳೂರಿನ ಅತಿದೊಡ್ಡ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಾವಕಾಶ.

ಉಡುಪಿ-ಮಂಗಳೂರಿನ ಅತಿದೊಡ್ಡ ಸಾಫ್ಟ್ ವೇರ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಉಡುಪಿ: ಡಿ.21, 22ರಂದು ರೋಟರಿ ಜಿಲ್ಲೆ 3182 “ರೋಟಾ ಮ್ಯಾಜಿಕ್” ಕ್ರೀಡಾ ಉತ್ಸವ

ಉಡುಪಿ: ರೋಟರಿ ಜಿಲ್ಲೆ 3182ರ ರೋಟರಿ ಕ್ಲಬ್ ಮಣಿಪಾಲ ವಲಯ 4ರ ನೇತೃತ್ವದಲ್ಲಿ ‘ರೋಟಾ ಮ್ಯಾಜಿಕ್’ ಕ್ರೀಡಾ ಉತ್ಸವವನ್ನು ಇದೇ ಡಿಸೆಂಬರ್ 21 ಮತ್ತು 22ರಂದು ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ರೀಡಾ ಸಭಾಪತಿ ಅಮಿತ್ ಅರವಿಂದ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಈಜು, ಟ್ರಾಕ್ ಮತ್ತು ಫೀಲ್ಡ್ ಹಾಗೂ ಟಗ್ ಆಫ್ ವಾರ್ ನಂತಹ ವಿವಿಧ ಸ್ಪರ್ಧೆಗಳು ನಡೆಯಲಿವೆ. […]
ಉಡುಪಿ: ಡಿ. 21ರಂದು ಮಿಸ್ಟರ್ ಕರ್ನಾಟಕ-2024″ ಹಾಗೂ ಮಿಸ್ಟರ್ ಉಡುಪಿ-2024″ ದೇಹದಾರ್ಡ್ಯ ಸ್ಪರ್ಧೆ

ಉಡುಪಿ: ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ವತಿಯಿಂದ “ಮಿಸ್ಟರ್ ಕರ್ನಾಟಕ-2024″ ಹಾಗೂ ಮಿಸ್ಟರ್ ಉಡುಪಿ-2024” ದೇಹದಾರ್ಡ್ಯ ಸ್ಪರ್ಧೆಯನ್ನು ಇದೇ ಡಿ. 21ರಂದು ಅಂಬಲಪಾಡಿಯ ಶಾಮಿಲಿ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೇಸನ್ ಡಯಾಸ್ ಹೇಳಿದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ದೇಹದಾರ್ಡ್ಯ ಸ್ಪರ್ಧೆಯು ಮಿ. ಕರ್ನಾಟಕ, ಬೆಸ್ಟ್ ಪೊಸರ್, ದಿವ್ಯಾಂಗ, ಮಾಸ್ಟರ್, ಮೈಕಟ್ಟು ಹಾಗೂ ಮಿ. ಉಡುಪಿ ವಿಭಾಗದಲ್ಲಿ ನಡೆಯಲಿದೆ. ಮಿ. ಕರ್ನಾಟಕ […]