ಜೆಸಿಐ ಕುಂದಾಪುರ 50ರ ಸಂಭ್ರಮ; ಡಿ.22ರಿಂದ 26ರ ವರೆಗೆ ನಾಟಕೋತ್ಸವ

ಉಡುಪಿ: ಜೆಸಿಐ ಕುಂದಾಪುರ ಇದರ 50ರ ಸಂಭ್ರಮದ ಅಂಗವಾಗಿ ‘ನಾಟಕೋತ್ಸವ’ ಕಾರ್ಯಕ್ರಮವನ್ನು ಇದೇ ಡಿ.22ರಿಂದ 26ರ ವರೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಐ ಕುಂದಾಪುರ ಅಧ್ಯಕ್ಷ ಚಂದನ್ ಗೌಡ ತಿಳಿಸಿದರು. ಈ ಕುರಿತು ಉಡುಪಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿದಿನ ಸಂಜೆ 7.30ರಿಂದ ನಾಟಕ ಪ್ರದರ್ಶನಗೊಳ್ಳಲಿದೆ. ಡಿ.22ರಂದು ರಂಗ ಸಂಗಾತಿ ತಂಡದಿಂದ ‘ದಟ್ಸ್ ಆಲ್ ಯುವರ್ ಆನರ್, ಡಿ.23ರಂದು ಭೂಮಿಕಾ ಹಾರಾಡಿ ತಂಡದಿಂದ ‘ಬರ್ಬರಿಕ’, ಡಿ.24ರಂದು ನೀನಾಸಂ […]
ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರವಿಚಂದ್ರನ್ ಅಶ್ವಿನ್: ಅಭಿಮಾನಿಗಳಿಗೆ ಶಾಕ್ ಕೊಟ್ಟಿತು ಕ್ರಿಕೆಟಿಗನ ದಿಢೀರ್ ನಿರ್ಧಾರ?

ಭಾರತ ತಂಡದ ಖ್ಯಾತ, ಕಲಾತ್ಮಕ ವೇಗಿ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಗುಡ್ ಬೈ ಹೇಳಿದ್ದಾರೆ.ಆಸ್ಟ್ರೇಲಿಯಾದ ಟೆಸ್ಟ್ ಸರಣಿಯ ವೇಳೆ ಸುದ್ದಿಗೋಷ್ಟಿಯಲ್ಲಿ ಅವರು ಈ ನಿರ್ಧಾರ ಘೋಷಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಒಟ್ಟು 106 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, 200 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಟೆಸ್ಟ್ ನಲ್ಲಿ 27246 ಎಸೆತಗಳನ್ನು ಎಸೆದು ಭರ್ಜರಿ 537 ವಿಕೆಟ್ ಉರುಳಿಸಿದ್ದಾರೆ. 116 ಏಕದಿನ ಪಂದ್ಯಗಳಲ್ಲಿ 114 ಇನಿಂಗ್ಸ್ ಆಡಿ 156 ವಿಕೆಟ್ ಪಡೆದರೆ, 65 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ 72 […]
ಚೆಸ್ ಪಂದ್ಯಾಟ: ಉಡುಪಿಯ ಚಿನ್ಮಯ್‌ಗೆ ಪ್ರಶಸ್ತಿ

ಉಡುಪಿ: ಚೆಸ್ ನೈಟ್ಸ್ ವತಿಯಿಂದ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ನಡೆದ ಚದುರಂಗೋತ್ಸವ: ಅಖಿಲ ಭಾರತ 1,800ಕ್ಕಿಂತ ಕಡಿಮೆಯಿರುವ ಫಿಡೆ ಶ್ರೇಯಾಂಕಿತರ ಚೆಸ್ ಪಂದ್ಯಾಟದಲ್ಲಿ ಉಡುಪಿಯ ಚಿನ್ಮಯ್ ಎಸ್.ಭಟ್ ಅಗ್ರಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ. ಒಟ್ಟು 9 ಸುತ್ತುಗಳ ಈ ಪಂದ್ಯಾಟದಲ್ಲಿ ಚಿನ್ಮಯ್ ಅವರು ಏಳು ಅಂಕ ಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಪಡೆದರು. ಇವರು ಮಣಿಪಾಲ ಎಂಐಟಿಯ ಐಟಿ ವಿಭಾಗದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದಾರೆ.
ಉಡುಪಿ: ಸಹಕಾರ ರತ್ನ ಕೆ.ನಾರಾಯಣ ಬಲ್ಲಾಳ್ ಅವರಿಗೆ ನಾಗರಿಕ ಸನ್ಮಾನ

ಉಡುಪಿ: ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ಅಭಿನಂದನ ಸಮಿತಿ ವತಿಯಿಂದ ಸಹಕಾರ ರತ್ನಪುರಸ್ಕ್ರತರಾದ ಕೆ.ನಾರಾಯಣ ಬಲ್ಲಾಳ್ ರವರಿಗೆ ಊರ ನಾಗರಿಕರ ಪರವಾಗಿ ಅಭಿನಂದನೆ ಸಮಾರಂಭವು 21.12.2024, ಶನಿವಾರ ಸಂಜೆ 6.00 ಗಂಟೆಗೆ ಕೊಡವೂರು ಶಾಲಾವಠಾರದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಧು ಸಾಲ್ಯಾನ್ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಯಶಪಾಲ ಸುವರ್ಣ, ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿ, ಕೆ .ರವಿರಾಜ ಹೆಗ್ಡೆ, ಅಶೋಕ್ ಕುಮಾರ್ ಕೊಡವೂರು, ನಾರಾಯಣ ಬಲ್ಲಾಳ್, […]
ಉಡುಪಿ: ವಿಷದ ಹಾವು ಕಡಿದು ಕೃಷಿಕ ಮೃತ್ಯು.

ಉಡುಪಿ: ಉಡುಪಿ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಎಂಬಲ್ಲಿ ವಿಷದ ಹಾವು ಕಡಿತಕ್ಕೆ ಒಳಗಾಗಿದ್ದ ಕೃಷಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಗುಜ್ಜರಬೆಟ್ಟು ನಿವಾಸಿ ದಿ.ಬೂಧ ಪೂಜಾರಿ ಎಂಬವರ ಪುತ್ರ, ಕೃಷಿಕ ಸುಂದರ ಪೂಜಾರಿ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ವೇಳೆ ಇವರಿಗೆ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇವರು ಕೃಷಿ ಕಾರ್ಯಗಳಲ್ಲಿ […]