ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಳಗಾವಿ: ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದ ಕೊಂಡಸಕೊಪ್ಪ ಬಳಿ ನಡೆದ ಅಂಗನವಾಡಿ ನೌಕರರ ಬೆಳಗಾವಿ ಚಲೋ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಚಿವರು, ಗೌರವಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು. […]

ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಉಡುಪಿ: ಕರಾವಳಿಯಲ್ಲಿ ಮೀನುಗಾರಿಕಾ ವೃತ್ತಿ ಮಾಡುವ ಮೊಗವೀರ ಸಮುದಾಯದ ಬಾರ್ಕೂರು ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯಿತು. ಈ ಪ್ರಯುಕ್ತ ನಡೆದ ತೆಪ್ಪೋತ್ಸವ (ಹೊಳೆಯಾನ ) ವಿಶೇಷವಾಗಿತ್ತು. ಶ್ರೀ ಕುಲಮಹಾಸ್ತ್ರಿ ಅಮ್ಮನವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕಾರ ಹಾಗೂ ವಿದ್ಯುದ್ವಿಪಾಲಂಕರದಿಂದ ಅಲಂಕರಿಸಿದ ಸಂಗಡ ಕಟ್ಟಿದ ಜೋಡಿ ದೋಣಿಯಲ್ಲಿ ಕೊಂಡೊಯ್ಯಲಾಯಿತು. ರಜತ ಪಲ್ಲಕ್ಕಿಯಲ್ಲಿ ಇರಿಸಿ ಭಜನೆ, ವಾದ್ಯ ಘೋಷ, ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ರಾತ್ರಿ 11 ಗಂಟೆಗೆಯಿಂದ ಪ್ರಾರಂಭಗೊಂಡು ಸರಿ ಸುಮಾರು 2 ಗಂಟೆಯ ಅವಧಿಯಲ್ಲಿ […]

ಕುಂದಾಪುರ: ಮನೆಯಂಗಳದಲ್ಲಿ ಚಿರತೆ ಸಂಚಾರ; ಬೆಚ್ಚಿಬಿದ್ದ ಮನೆಮಂದಿ

ಉಡುಪಿ: ಕುಂದಾಪುರ ತಾಲೂಕಿನ ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ ಮಾಡುತ್ತಿದ್ದ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಡಾಡಿ-ಮತ್ಯಾಡಿ ಗ್ರಾಮದ ಕರಿನಕಟ್ಟೆ ರಾಮದಾಸ ಭಂಡಾರಿ ಎಂಬವರು ಮನೆಯ ಅಂಗಳದಲ್ಲಿ ಚಿರತೆ ಸಂಚಾರ ನಡೆಸಿದ್ದು, ಇದ್ದರಿಂದ ಮನೆಯವರು, ನೆರೆ-ಹೊರೆಯವರು ಆತಂಕಗೊಂಡಿದ್ದಾರೆ. ಪದೇ ಇಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಿಚನ್ ಹೆಲ್ಪರ್ ಕೆಲಸಕ್ಕೆ ಮಹಿಳೆಯರು ಬೇಕಾಗಿದ್ದಾರೆ

ಬ್ರಹ್ಮಾವರದ ಪ್ರಸಿದ್ಧ ಹೋಂ ಪ್ರಾಡಕ್ಟ್ ಕಂಪನಿಗೆಕಿಚನ್ ಹೆಲ್ಪರ್ ಕೆಲಸಕ್ಕೆ ಮಹಿಳೆಯರು ಬೇಕಾಗಿದ್ದಾರೆ.ಬೆಳಿಗ್ಗೆ 8.30 ರಿಂದ ಸಂಜೆ 6 ಗಂಟೆ ಕೆಲಸ ಊಟ ಉಪಹಾರದ ವ್ಯವಸ್ಥೆ ಇದೆ.ಸಂಪರ್ಕಿಸಿ7349038077

ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಸೋಜಾ ಬಳಗದ ಬೃಹತ್ ಮಾರಾಟ ಮೇಳ

ಉಡುಪಿ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಉಡುಪಿಯ ಸೂಪರ್ ಬಜಾರ್ ನಲ್ಲಿರುವ ಪ್ರತಿಷ್ಠಿತ ಸೋಜಾ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ನಲ್ಲಿ ಹೊಸ ಆಫರ್ ಗಳೊಂದಿಗೆ ಮೆಗಾ ಮಾರಾಟ ಮೇಳ ಆರಂಭಗೊಂಡಿದೆ. ಡಿ 9. ರಿಂದ ಜ. 5ರವರೆಗೆ ನಡೆಯಲಿರುವ ಈ ದರ ಕಡಿತದ ಮಾರಾಟ ಮೇಳದಲ್ಲಿ ವಿವಿಧ ಪೀಠೋಪಕರಣಗಳ ಮೇಲೆ ಶೇ.50ರವರೆಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಬಾರಿ ವಿಶೇಷವಾಗಿ ಅದೃಷ್ಟ ಬಹುಮಾನ ಯೋಜನೆ ಆಯೋಜಿಸಲಾಗಿದ್ದು, ಪ್ರತಿ ವಾರವೂ ಡ್ರಾ ಇದೆ.1 ಲ. ರೂ.ವರೆಗೆ ಆಕರ್ಷಕ ಬಹುಮಾನ […]