ಮಂಗಳೂರು: ಮಹಿಳೆ ನಾಪತ್ತೆ.

ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನಲ್ಲಿ ಕೆಲಸ ಮಾಡಿಕೊಂಡಿರುವ ಕಾಶಿನಾಥ ಮುರ್ಮ ಎಂಬವರು ಪತ್ನಿ ಶಿಫಾಲಿ ಮುರ್ಮ (36)ಎಂಬಾಕೆ ಡಿ.14ರ ಬೆಳಗ್ಗೆ 9ರಿಂದ ಕಾಣೆಯಾದವರು ಮರಳಿ ಬಂದಿಲ್ಲ ಎಂದು ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 5 ಅಡಿ ಎತ್ತರದ ಎಣ್ಣೆ ಬಿಳಿ ಮೈಬಣ್ಣದ ಈಕೆಯ ಮೂಗಿನ ಮೇಲೆ ಕಪ್ಪುಎಳ್ಳು ಮಚ್ಚೆ ಇರುತ್ತದೆ. ಕಾಣೆಯಾದಾಗ ಬೂದು ಬಣ್ಣದ ಚೂಡಿದಾರ ಧರಿಸಿರುತ್ತಾರೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.
ಡಿ.29ರಂದು ಉದ್ಯಾವರ ಬಲಾಯಿಪಾದೆಯ “ನಿವಾಸ”ದಲ್ಲಿ ಕ್ರಿಸ್ಮಸ್ ಸೆಲೆಬ್ರೆಷನ್

ಉಡುಪಿ: ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ಆಚರಣೆಗೆ ಸಿದ್ಧಗೊಂಡಿದೆ ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಇರುವ “ನಿವಾಸ”. ಇಲ್ಲಿ ಇದೇ ಡಿಸೆಂಬರ್ 29ರಂದು ಸಂಜೆ 4ರಿಂದ ರಾತ್ರಿ 10 ರವರೆಗೆ ಕ್ರಿಸ್ಮಸ್ ಆಚರಣೆ ನಡೆಯಲಿದೆ. ಕ್ರಿಸ್‌ಮಸ್ ಹೋಮ್ ನಂತೆ ಅದ್ಧೂರಿ ಅಲಂಕಾರದೊಂದಿಗೆ ಕ್ರಿಸ್ಮಸ್ ಆಚರಣೆಗೆ ನಿವಾಸ ಸಜ್ಜುಗೊಂಡಿದೆ. ಇದರಲ್ಲಿ ಭಾಗವಹಿಸಿ ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ವಿನೂತ ರೀತಿಯಲ್ಲಿ ಆಚರಿಸಬಹುದಾಗಿದೆ.
ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಸದಸ್ಯರಾಗಿ ಜೀವನ್ ಕೆ. ಶೆಟ್ಟಿ ಮುಲ್ಕಿ ಆಯ್ಕೆ

ಮಂಗಳೂರು: ಪರಿಸರ ಯೋಗ್ಯ ಕಟ್ಟಡ ನಿರ್ಮಾಣ ( ಗ್ರೀನ್ ಬಿಲ್ಡಿಂಗ್ )ಹಾಗೂ ಪರಿಣಿತ ವಿಜ್ಞಾನ ಸಲಹೆ /ಪ್ರಮಾಣ ಪತ್ರ ನೀಡುವ Confederation of Indian Industry ( CII) ನವ ದೆಹಲಿ ನ ಅಂಗ ಸಂಸ್ಥೆ ಆದ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್, ಹೈದರಾಬಾದನ ಸದಸ್ಯರಾಗಿ ಶಾರದಾ ಅಸೋಸಿಯೇಟ್ಸ್ ಮುಲ್ಕಿ ಇದರ ಮುಖ್ಯಸ್ಥರು ಹಾಗೂ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿ ಇದರ ಸ್ಥಾಪಕ ಅಧ್ಯಕ್ಷ ಇಂಜಿನಿಯರ್ಮುಲ್ಕಿ ಜೀವನ್ ಕೆ ಶೆಟ್ಟಿ ನೇಮಕ ಹೊಂದಿದ್ದಾರೆ. 1996 ರಿಂದ […]
ಉಡುಪಿ: ನಾಡಿನ ಕಲಾವಿದರೆಲ್ಲ ಸಮಾಜದ ಋಣ ತೀರಿಸಲಿ: ಸಚ್ಚಿದಾನಂದ ಭಾರತೀ ಶ್ರೀ ಆಶೀರ್ವಚನ

ಉಡುಪಿ: ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ.ಶಂಕರ್ ಅವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಗಿಲಿಗಿಲಿ ಮ್ಯಾಜಿಕ್ ಗಾರುಡಿಗ ಪ್ರೊ. […]
ಡ್ರೈವರ್ ಕೆಲಸಕ್ಕೆ ಜನ ಬೇಕಾಗಿದ್ದಾರೆ

ಉಡುಪಿ:ತಿಂಡಿ ತಿನಿಸುಗಳ ಲೈನ್ ಸೇಲ್ ಮಾಡಲು ಟಾಟಾ. ಯಸ್ ವಾಹನಕ್ಕೆ ಅನುಭವಿ ಡ್ರೈವರ್ ಬೇಕಾಗಿದ್ದಾರೆ. ವಸತಿ ಸೌಲಭ್ಯವಿದೆ. ಆಸಕ್ತರು ಸಂಪರ್ಕಿಸಿ:7349038077