ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಆರಂಭ: ವಾಹನ ಸವಾರರ ಪರದಾಟ
ಉಡುಪಿ: ಉಡುಪಿ ನಗರದ ಪ್ರಮುಖ ಜಂಕ್ಷನ್ ಎನಿಸಿರುವ ಅಂಬಲಪಾಡಿ ಜಂಕ್ಷನ್ ನಲ್ಲಿ ಸೋಮವಾರ ಮೇಲ್ಸೇತುವೆ ಕಾಮಗಾರಿ ಪ್ರಾರಂಭಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆಸಿಬಿಗಳು ಕಾರ್ಯಾಚರಣೆಗೆ ಇಳಿದಿವೆ. ಇದೇ ವೇಳೆ ಜಂಕ್ಷನ್ ನಲ್ಲಿ ವಾಹನ ಸಂಚಾರ ನಿರ್ಬಂಧಗೊಂಡಿದ್ದು ಸರ್ವಿಸ್ ರಸ್ತೆಗಳಲ್ಲಿ ವಾಹನ ಸವಾರರ ಪರದಾಟವೂ ಶುರುವಾಗಿದೆ. ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇತುವೆ ಕಾಮಗಾರಿ ಬೇಡಿಕೆ ಹಲವು ವರ್ಷಗಳಿಂದ ಇದ್ದವು. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ಈ ಸಮಸ್ಯೆಗೆ ಪೂರ್ಣವಿರಾಮ ಹಾಕಲು ಮೇಲ್ವೇತುವೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದ್ದವು. ಇದಕ್ಕೆ […]
ಶಬರಿಮಲೆ ಸನ್ನಿದಾನದಲ್ಲೇ ಅಯ್ಯಪ್ಪ ಭಕ್ತ ಆತ್ಮಹತ್ಯೆಗೆ ಶರಣು..!
ಅಯ್ಯಪ್ಪ ಭಕ್ತರೊಬ್ಬರು ಶಬರಿಮಲೆ ದೇಗುಲದ ಸ್ಕೈವಾಕ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಭಕ್ತ ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಎಂದು ಗುರುತಿಸಲಾಗಿದೆ. ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ದಿನದ ಹಿಂದೆ ಕುಮಾರ್ ಸೇರಿ 6 ಮಂದಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ದೇವಾಲಯದ ಸ್ಕೈವಾಕ್ ಶೆಲ್ಟರ್ ಮೇಲಿನಿಂದ ಜಿಗಿದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ದೇವಾಲಯದ ಮೇಲಿಂದ ಜಿಗಿಯುವ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನೆಯಲ್ಲಿ […]
ನಾನು ದಾಖಲೆ ಮುರಿದು ತೋರಿಸಿದ್ರೆ ಐಸಿಸಿ ನನ್ನ ಪಾದ ತೊಳೆದು ನೀರು ಕುಡಿಬೇಕು: ಶೊಯೇಬ್ ಅಖ್ತರ್ ಅತಿರೇಕದ ಮಾತು
ಪಾಕಿಸ್ತಾನದ ಮಾಜಿ ವೇಗಿ ಅತ್ಯಂತ ವೇಗದ ಬೌಲರ್ ಎನ್ನುವ ಖ್ಯಾತಿ ಗಳಿಸಿದವರು.ಶೊಯೇಬ್ ಅಖ್ತರ್. ಗಂಟೆಗೆ 161.3 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ವೇಗದಲ್ಲೇ ಬ್ಯಾಟ್ಸ್ ಮೆನ್ ಗಳನ್ನು ಹೆದರಿಸಿದ ಖ್ಯಾತಿಯೂ ಅಖ್ತರ್ ಗಿದೆ. ಇವರ ಈ ಬೌಲಿಂಗ್ ದಾಖಲೆಯನ್ನು ಮುರಿಯಲು ಈ ವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಪಾಡ್ ಕಾಸ್ಟ್ ಒಂದರಲ್ಲಿ ನಿರೂಪಕ, ನಿಮ್ಮ ದಾಖಲೆಯನ್ನು ಯಾರಾದರೂ ಮುರಿಯಬಹುದಾ? ಆ ನಂಬಿಕೆ ನಿಮಗಿದ್ಯಾ ಎಂದು ಕೇಳಿದಕ್ಕೆ, ಖಂಡಿತ ನಂಗೆ ಆ ನಿರೀಕ್ಷೆ ಇದೆ. ಅಂತಹ ಪ್ರತಿಭೆ ಈಗಿನ […]
ಉಡುಪಿ- ದಕ್ಷಿಣ ಕನ್ನಡ ಉಭಯ ಜಿಲ್ಲಾಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟಕ್ಕೆ ತೆರೆ
ಉಡುಪಿ:ದಿನಾಂಕ 14 ಹಾಗೂ 15ನೇ ಡಿಸೆಂಬರ್ 2024ರಂದು ಟೀಮ್ ಡೋಂಟ್ ಲುಕ್ ಬ್ಯಾಕ್ ನ ಸಾರಥ್ಯದಲ್ಲಿ ನಡೆದ “ಬಲ್ಲಾಳ್ ಕಪ್”, ಉಡುಪಿ ಹಾಗೂ ದಕ್ಷಿಣ ಕನ್ನಡ ಉಭಯ ಜಿಲ್ಲಾ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಕ್ರೀಡಾಕೂಟವು ಉಡುಪಿಯ ಕಿನ್ನಿಮೂಲ್ಕಿಯ ವೀರಭದ್ರ ಕಲಾಭವನದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಪಟುವಾದ ಕಮಲಾಕ್ಷ ಬಿ. ರವರು ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ಬಲ್ಲಾಳ್ ಕಪ್ ನ ರೂವಾರಿಯಾಗಿರುವ ಮುರುಳೀಧರ ಬಲ್ಲಾಳ್ ರವರು ಪವರ್ ಲಿಫ್ಟಿಂಗ್ ಇಂಡಿಯಾದ ಅಧ್ಯಕ್ಷರಾದ […]
ಉಡುಪಿ: ಸ್ಥಳಾಂತರಗೊಂಡ ಸುಪ್ರೀತ ಎಂಟರ್‌ಪ್ರೈಸಸ್, ರಾಜರಾಜೇಶ್ವರಿ ಜೆರಾಕ್ಸ್ ಸೆಂಟರ್, ಪಂಚಾಮೃತ ಎಂಟರ್‌ಪ್ರೈಸಸ್ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನೂತನ ಅನೆಕ್ಸ್ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುವು ಮಾಡುವ ಸದುದ್ದೇಶದಿಂದ ಸದ್ರಿ ನ್ಯಾಯಾಲಯದ ಆವರಣದಲ್ಲಿಯೇ ಇನ್ನೊಂದು ಕಟ್ಟಡಕ್ಕೆ ಸ್ಥಳಾಂತರಗೊಂಡ ಶ್ರೀ ಶೇಖರ್ ಡಿ. ಶೆಟ್ಟಿಯವರ ಸುಪ್ರೀತ ಎಂಟರ್‌ಪ್ರೈಸಸ್, ಶ್ರೀ ನವೀನ್‌ಚಂದ್ರರವರ ರಾಜರಾಜೇಶ್ವರಿ ಜೆರಾಕ್ಸ್ ಸೆಂಟರ್ ಹಾಗೂ ತಾರನಾಥ್ ಹೆಗ್ಡೆಯವರ ಪಂಚಾಮೃತ ಎಂಟರ್‌ಪ್ರೈಸಸ್ ನ ಅಂಗಡಿಗಳನ್ನು ತಾರೀಕು: 16-12-2024 ರಂದು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶ್ರೀ ಕಿರಣ್ ಎಸ್. ಗಂಗಣ್ಣನವರ್ ರವರು ದೀಪ ಬೆಳಗಿಸಿ […]