ನಡೆದಾಡುವ ಪರಿಸರ ಮಾತೆ, ತುಳಸೀ ಗೌಡ ಇನ್ನಿಲ್ಲ: ಹಸಿರಿನಲ್ಲಿ ಕೊನೆಯುಸಿರೆಳೆದ ಹಿರಿಯ ಜೀವ

ನಡೆದಾಡುವ ಪರಿಸರ ಮಾತೆ, ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ವೃಕ್ಷಮಾತೆ, ನಡೆದಾಡುವ ಜ್ಞಾನಕೋಶ ಎಂದೇ ಖ್ಯಾತರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಗಟ್ಟಲೇ ಗಿಡಗಳಿಗೆ ಜೀವ ನೀಡಿ ಮರವಾಗಿಸಿದ್ದರು. ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮರಗಳ ಜೊತೆಗೆ ನಿತ್ಯ ಬದುಕುತ್ತಿದ್ದ, ಅವುಗಳನ್ನು ಮಕ್ಕಳಂತೆ […]

ಮೆಹೆಂದಿಗೂ ಇದೆ ಒಳ್ಳೆಯ ಬೇಡಿಕೆ:ಮೆಹೆಂದಿ ಕೋರ್ಸ್ ಕಲಿಯೋದಕ್ಕೆ ಸುವರ್ಣಾವಕಾಶ,ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ ಮೆಹೆಂದಿ ಕೋರ್ಸ್

ಇಂದಿನ ದಿನಮಾನದಲ್ಲಿ ಸೌಂದರ್ಯ ಮತ್ತು ನಮ್ಮ ದೇಹದ ಆರೋಗ್ಯಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡುತ್ತಿದ್ದಾರೆ. ಇದು ಇಂದಿನ ಅಗತ್ಯತೆ ಕೂಡಾ ಹೌದು. ಈ ನಿಟ್ಟಿನಲ್ಲಿ ಸೌಂದರ್ಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಮಣಿಪಾಲಿನ ಒರೇನ್ ಇಂಟರ್ನ್ಯಾಷನಲ್ ಸಂಸ್ಥೆಗೆ ಇದೀಗ ಇಪ್ಪತ್ತೆದು ವರ್ಷದ ಸಂಭ್ರಮ. ಈ ಪ್ರಯುಕ್ತ ಮೆಹಂದಿ ಕಲಾವಿದರಿಗೆ, ಕಲಾವಿದರಾಗಲು ಆಸಕ್ತಿ ಹೊಂದಿರುವವರಿಗೆ ಸುವರ್ಣಾವಕಾಶ ನೀಡುತ್ತಿದೆ ಈ ಸಂಸ್ಥೆ. ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ(MSDC) ಸಹಯೋಗದಲ್ಲಿ ಸ್ಕಾಲರ್ ಶಿಪ್ ಆಫರ್ ಇದ್ದು, “ಮೆಹಂದಿ ವಿನ್ಯಾಸದ ಡಿಪ್ಲೋಮೋ ಕೋರ್ಸ್” ಬಹಳ […]

ಅಲೆವೂರು ಫ್ರೆಂಡ್ಸ್ ಕ್ರಿಕೆಟ್ ತಂಡದ ಪ್ರಾಯೋಜಕ ರಾಜಾ ಅಲೆವೂರು ನಿಧನ

ಉಡುಪಿ: ಸ್ಥಳೀಯ ಕ್ರಿಕೆಟ್ ವಲಯಗಳಲ್ಲಿ ಗೌರವಾನ್ವಿತ ವ್ಯಕ್ತಿ ಮತ್ತು ಪ್ರಾದೇಶಿಕ ತಂಡಗಳ ಪ್ರಾಯೋಜಕರಾದ ರಾಜಾ ಕೊಡಂಚ ಅಲೆವೂರು ಅವರು ಡಿಸೆಂಬರ್ 16 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು. ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ ತಂಡಗಳಿಗೆ ಪ್ರಾಯೋಜಕರಾಗಿ ಬೆಂಬಲವಾಗಿ ನಿಂತಿದ್ದರು. ಹಲವಾರು ಸ್ಥಳೀಯ ತಂಡಗಳ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ‌ ಯುವಕ ಆಟಗಾರರಿಗೆ ಟೂರ್ನ್ ಮೆಂಟ್ ಗಳಲ್ಲಿ ಆಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಅಲೆವೂರು ಫ್ರೆಂಡ್ಸ್, ಬೀಡಿನಗುಡ್ಡೆ ಫ್ರೆಂಡ್ಸ್, ಆಕಾಶ್ ಅಲೆವೂರು ಮತ್ತು SFC […]

ಜ.10ರಂದು ಬಹ್ರೇನ್ ನಲ್ಲಿ “ಎನ್ ಆರ್ ಐ ಪೋರಮ್ ಕರ್ನಾಟಕ- ಬಹ್ರೇನ್” ಉದ್ಘಾಟನೆ

ಉಡುಪಿ: ಕರ್ನಾಟಕ ಸರ್ಕಾರದೊಂದಿಗೆ ಹೊಸದಾಗಿ ಸ್ಥಾಪಿಸಲಾದ ಮತ್ತು ಕರ್ನಾಟಕ ಸರ್ಕಾರ-ನೋಂದಾಯಿತ ಘಟಕ “ಎನ್ ಆರ್ ಐ ಪೋರಮ್ ಕರ್ನಾಟಕ- ಬಹ್ರೇನ್” (NEKB) ಜನವರಿ 10ರಂದು ಬಹ್ರೇನ್ ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಎನ್ ಆರ್ ಐ ಪೋರಮ್ ಕರ್ನಾಟಕ- ಬಹ್ರೇನ್ ಅಧ್ಯಕ್ಷ ರಾಜಕುಮಾರ್ ತಿಳಿಸಿದರು. ಈ ಕುರಿತು ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಹ್ರೇನ್ ಇಂಡಿಯನ್ ಕ್ಲಬ್ ಮೈದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ. […]

ಉಡುಪಿ: ಡಿ.19ರಂದು ರೋಬೋಸೋಫ್ಟ್ ನಿಂದ ಜಿಪಂಗೆ 6 ಎಲೆಕ್ಟ್ರಿಕ್ ಆಟೋ ಹಸ್ತಾಂತರ

ಉಡುಪಿ: ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಸ್ವಲ್ಪಮಟ್ಟಿಗೆ ಸುಲಭವಾಗಿಸುವ ನಿಟ್ಟಿನಲ್ಲಿ ಉಡುಪಿಯ ರೋಬೋಸೋಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿಎಸ್ ಆರ್ ನಿಧಿಯ ಮೂಲಕ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಖರೀದಿಸಿ ಉಡುಪಿ ಜಿಲ್ಲಾ ಪಂಚಾಯತ್ ಗೆ ನೀಡಲು ನಿರ್ಧರಿಸಿದೆ. ಅದರಂತೆ ಇದೇ ಡಿಸೆಂಬರ್ 19 ರಂದು ಬೆಳಿಗ್ಗೆ 10.30ಕ್ಕೆ 6 ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ಉಡುಪಿ ಜಿಲ್ಲಾ ಪಂಚಾಯತ್ ಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೇಜರ್ ಶ್ಯಾಮ್ ರಾಜ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ […]