ಕೃಷಿಕರ ಶ್ರಮವನ್ನು ನೀವು ಒಂದಿನನಾದ್ರೂ ನೆನೆದಿದ್ದೀರಾ?: ಇವೆಲ್ಲಾ ಸಂಗತಿಗಳನ್ನು ಮರೆಯದಿರೋಣ

ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳಾ ಕಷ್ಟವಿದೆ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ…

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮ.

ಮೂಡುಬಿದಿರೆ: ವ್ಯಕ್ತಿತ್ವ ರಚನಾ ವ್ಯವಸ್ಥೆಯೇ ಶಿಸ್ತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತನ್ನು ಅಳವಡಿಸಲು ಕಲಿಸುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗುಬ್ಬಿಗೂಡು ರಮೇಶ್ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗಿತ್ವದಲ್ಲಿ ೩೦ ನೇ ಆಳ್ವಾಸ್ ವಿರಾಸತ್ ಸಂಧರ್ಭದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ರೋವರ್ಸ್-ರೇಂಜರ್ಸ್ […]

ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್‌ ಗೆ ಪ್ರತಿಷ್ಠಿತ ಮಿಸೆಸ್‌ ಅರ್ಥ್ ಇಂಟರ್‌ನ್ಯಾಶನಲ್‌ ಟೂರಿಸಂ -2024 ಅವಾರ್ಡ್

ಉಡುಪಿ: ಉಡುಪಿಯ ಖ್ಯಾತ ಮಧುಮೇಹ ತಜ್ಞೆ ಡಾ. ಶೃತಿ ಬಲ್ಲಾಳ್‌ ಅವರು ಫಿಲಿಫೈನ್ಸ್‌ನ ಮನಿಲಾದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಮಿಸೆಸ್‌ ಅರ್ಥ್ ಇಂಟರ್‌ನ್ಯಾಶನಲ್‌ ಟೂರಿಸಂ -2024 ಕಿರೀಟ ಗೆದ್ದುಕೊಂಡಿದ್ದಾರೆ.ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಶೃತಿ ಸ್ವತಃ ತಮ್ಮ ಅನುಭವ ಹಂಚಿಕೊಂಡರು. ಮಂಗಳೂರಿನ ಪಾತ್‌ವೇ ಎಂಟರ್‌ಪ್ರೈಸಸ್‌ನಿಂದ ಸೌಂದರ್ಯ ಸ್ಪರ್ಧೆಗೆ ತಾವು ಕಾಲಿಟ್ಟಿದ್ದು, ಮಂಗಳೂರು ವಲಯ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡೆ. ನಂತರ ಬೆಂಗಳೂರಿನಲ್ಲಿ ಆಗಸ್ಟ್‌ ತಿಂಗಳಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಿಸೆಸ್‌ ಇಂಡಿಯಾ ಅರ್ತ್‌ ಇಂಟರ್‌ನ್ಯಾಶನಲ್ […]

ಕುದುರೆಮುಖ: ಬೆಂಕಿ ಹೊತ್ತಿಕೊಂಡು ಸುಟ್ಟುಕರಕಲಾದ ಉಡುಪಿಯ ಟೂರಿಸ್ಟ್ ವಾಹನ

ಉಡುಪಿ: ಟೂರಿಸ್ಟ್ ವಾಹನ‌ವೊಂದು (ಟಿಟಿ) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ‌ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ಶನಿವಾರ ಸಂಭವಿಸಿದೆ‌. ಉಡುಪಿಯ ಟೂರಿಸ್ಟ್ ವಾಹನದಲ್ಲಿ ಕಾರ್ಕಳ ಮಾಳ ಮಾರ್ಗವಾಗಿ ಕುದುರೆಮುಖದ ಮೂಲಕ ಕಳಸದ ಕಡೆಗೆ ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು. ಕುದುರೆಮುಖ ಸಮೀಪಿಸುತ್ತಿದ್ದಂತೆ ಟೂರಿಸ್ಟ್ ವಾಹನದಲ್ಲಿ ಏಕಾಏಕಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನ ತುಂಬಾ ವ್ಯಾಪಿಸಿದೆ‌. ಅದೃಷ್ಟವಶಾತ್ ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿಯ ಕೆನ್ನಾಲಗೆ […]

ಡಿ.16ರಿಂದ ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಆರಂಭ

ಉಡುಪಿ: ಡಿ.16ರಿಂದ ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ ಸಾಹು ತಿಳಿಸಿದ್ದಾರೆ. ಉಡುಪಿ ಅಂಬಲಪಾಡಿಯ ವಸಂತ ಮಂಟಪದಲ್ಲಿ ಇಂದು‌ ನಡೆದ ಅಂಬಲಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. 1.2 ಕಿ.ಮೀ ಉದ್ದದ ಮೇಲ್ಸೇತುವೆ ಜತೆ ಅಂಡರ್ಪಾಸ್ ಕಾಮಗಾರಿ ನಡೆಯಲಿದೆ. 18 ತಿಂಗಳ ಪ್ರಾಜೆಕ್ಟ್ ಇದಾಗಿದ್ದು, 23.53 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಕಾರ್ಲಾ ಕನ್ಸ್ ಕನ್ಟ್ರಕ್ಷನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ ಮಾಹಿತಿ ನೀಡಿದರು. […]