ಉಡುಪಿ: ಡಿ.14ರಂದು ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತೀಯ ಸಮ್ಮೇಳನ

ಉಡುಪಿ: ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತೀಯ ಸಮ್ಮೇಳನ “ಬೆಸುಗೆ” ಡಿ. 14ರ ಶನಿವಾರ ಸಂಜೆ 4ಗಂಟೆಗೆ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಲಯನ್ಸ್ ಜಿಲ್ಲೆ 317ಸಿ ಪ್ರಾಂತ್ಯ 1ರ ಪ್ರಾಂತ್ಯಾಧ್ಯಕ್ಷ ಉಮರ್ ವಿ. ಎಸ್ ತಿಳಿಸಿದರು. ಉಡುಪಿ ಪತ್ರಿಕಾಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಜಿಲ್ಲೆಯಿಂದ 500ಕ್ಕೂ ಅಧಿಕ ಪ್ರತಿನಿಧಿಗಳು ಮತ್ತು ಆಹ್ವಾನಿತ ಗಣ್ಯರು ಭಾಗವಹಿಸುವ […]

ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ‘ಆಳ್ವಾಸ್ ವಿರಾಸತ್-2024’ ಪ್ರಶಸ್ತಿ ಪ್ರದಾನ ಗವಾಯಿಗಳಿಗೆ ಪ್ರಶಸ್ತಿ ಅರ್ಪಿಸಿದ ಭಕ್ತಿ ಸ್ವರ ಮಾಂತ್ರಿಕ

ವಿದ್ಯಾಗಿರಿ (ಮೂಡುಬಿದಿರೆ): `ಬಡವರು, ದೀನ ದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಣೆ’ ಎಂದು ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಭಾವುಕರಾದರು. ಇಲ್ಲಿನ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಬುಧವಾರ ಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘30ನೇ ವರ್ಷದ ಆಳ್ವಾಸ್ ವಿರಾಸತ್’ನಲ್ಲಿ ಪ್ರತಿಷ್ಠಿತ ‘ಆಳ್ವಾಸ್ ವಿರಾಸತ್-2024’ ಪ್ರಶಸ್ತಿಯನ್ನು ಸ್ವೀಕರಿಸಿದ ಅವರು ಮನದುಂಬಿ ಮಾತನಾಡಿದರು. ಶಿಸ್ತು, ಸಂಯಮ, ಸಮಯ ಬಹಳ ದೊಡ್ಡದು. ಅದನ್ನು ತೋರಿಸಿದ […]

ತಕ್ಷಣ ಬೇಕಾಗಿದ್ದಾರೆ

ಉಡುಪಿ:ಉದ್ಯೋಗದ ಹುಡುಕಾಟದಲ್ಲಿರುವ ಯುವಕ ಯುವತಿಯರಿಗೆ ಸುವರ್ಣಾವಕಾಶ. ಉಡುಪಿ, ಕುಂದಾಪುರ, ಬ್ರಹ್ಮಾವರ, ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪೆನಿ ಆಫೀಸು, ಶೋರೂಂ ಫ್ಯಾಕ್ಟರಿ, ಹೋಟೆಲ್ ಇನ್ನಿತರ ಖಾಸಗಿ ಸಂಸ್ಥೆಗಳಲ್ಲಿ SSLC, PUC, ITI, DIPLOMA, DEGREE ಇನ್ನಿತರ ಎಲ್ಲಾ ರೀತಿಯ ವಿದ್ಯಾರ್ಹತೆ ಅನುಗುಣವಾಗಿ ಅತ್ಯುತ್ತಮ ವೇತನ ಮತ್ತು PF, ESI ಸೌಲಭ್ಯದೊಂದಿಗೆ ಉದ್ಯೋಗಗಳಿಗಾಗಿ ಸಂಪರ್ಕಿಸಿ: 9481347563,9481347653

ಜಾನಪದ- ಶಾಸ್ತ್ರೀಯದ ಸ್ಪಂದನ, ಸಾಹಸ- ಹೆಜ್ಜೆಗಳ ಸಮ್ಮಿಲನ ವಿರಾಸತ್: ರಂಗೇರಿಸಿದ ನೃತ್ಯ, ಕಸರತ್ತಿನ ಗಮ್ಮತ್ತು

ವಿದ್ಯಾಗಿರಿ: ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಭಕ್ತಿ ಗಾನ ಸುಧೆಯಲ್ಲಿ ಮಿಂದ ಪ್ರೇಕ್ಷಕರನ್ನು ನರ್ತನ ಲೋಕಕ್ಕೆ ಕೊಂಡೊಯ್ದದ್ದು, ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ.ಉತ್ತರದ ಹಿಂದೂಸ್ಥಾನಿಗೆ ಶ್ರೋತೃಗಳಾಗಿದ್ದ ವಿರಾಸತ್ ಪ್ರೇಕ್ಷಕರು ಪಶ್ಚಿಮದ ಜಾನಪದಕ್ಕೆ ವೀಕ್ಷಕರಾದರು. ದೇಶದ ಪಶ್ಚಿಮ ತೀರದ ಗುಜರಾತ್‌ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ ಮಾಡುತ್ತಾ ನರ್ತಿಸುವ ಜಾನಪದ ನೃತ್ಯವೇ ಗಾರ್ಭ. ಗುಜರಾತ್‌ನ ರಂಗ್ ಮಲಹರ್ ತಂಡ ಸದಸ್ಯರು ಸಾಂಪ್ರದಾಯಿಕ ವಸ್ತ್ರ ತೊಟ್ಟು ಹೆಜ್ಜೆ ಹಾಕಿದಾಗ, […]

ಉಡುಪಿ:ತ್ರಿಶಾ ಚಾಂಪಿಯನ್ಸ್ ಟೆಸ್ಟ್ : ಡಿ. 19 ರಂದು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪರೀಕ್ಷೆ

ಉಡುಪಿ:ಶಿಕ್ಷಣದ ಗುರಿ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಹಾಗೂ ನೈತಿಕ ಮೌಲ್ಯಗಳ ಅರಿವು ಮೂಡಿಸುವುದಾಗಿದೆ. ಈ ನಿಟ್ಟಿನಲ್ಲಿ ಕಳೆದ 26 ವರ್ಷಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ “ತ್ರಿಶಾ ಚಾಂಪಿಯನ್ಸ್ ಟೆಸ್ಟ್” ಅನ್ನುವ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಪರೀಕ್ಷೆಯು ಉಚಿತವಾಗಿದ್ದು ಆನ್ಲೈನ್ ಮೂಲಕ ಡಿಸೆಂಬರ್ 19 ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಬಹು ಆಯ್ಕೆ ಮಾದರಿಯಲ್ಲಿದ್ದು ಗಣಿತ, ಲಾಜಿಕಲ್ ರೀಸನಿಂಗ್, ಇಂಗ್ಲೀಷ್, ಸಾಮಾನ್ಯ ಜ್ಞಾನ […]