ಜೇಸಿಐ ವತಿಯಿಂದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಅವರಿಗೆ ಸನ್ಮಾನ

ಕುಂದಾಪುರ- ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ನಡೆದ ಅಧ್ಯಕ್ಷರ ವರದಿ ಕಾರ್ಯಕ್ರಮ ದಲ್ಲಿ ಜೇಸಿಐ ಕುಂದಾಪುರ ಸಿಟಿಯ ಪೂರ್ವಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು 2024ರ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಅವರಿಗೆ ಕುಂದಾಪುರ ಜೇಸಿ ಭವನದ ಮೊಹಮ್ಮದ್ ಅನ್ವರ್ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ರಾದ ಜೇಸಿ ಕೆ ಕಾರ್ತಿಕೇಯ ಮದ್ಯಾಸ್ತ್ಯ ವಲಯ 15ರ ನಿಯೋಜಿತ ಅಧ್ಯಕ್ಷ ಜೇಸಿ ಅಭಿಲಾಷ್ ಬಿ ಏ, ವಲಯ 15ರ ಪೂರ್ವ ವಲಯಾಧ್ಯಕ್ಷ ಜೇಸಿ ಅಲನ್ ರೋಹನ್ ವಾಜ್, […]
ಮಂಗಳೂರು-ಕಾರ್ಕಳ ರಸ್ತೆಗಿಳಿಯಿತು ಸರಕಾರಿ ಬಸ್ಸು: ಜನತೆಯಿಂದ ಭರ್ಜರಿ ಸ್ವಾಗತ: ಇಲ್ಲಿದೆ ಬಸ್ ವೇಳಾಪಟ್ಟಿ!

ಮಂಗಳೂರು-ಕಾರ್ಕಳ: ಕಾರ್ಕಳ-ಮಂಗಳೂರು ದಾರಿಯಲ್ಲಿ ಸರಕಾರಿ ಬಸ್ಸು ಓಡಾಡಬೇಕು ಎನ್ನುವುದು ಇಲ್ಲಿನ ಜನರ, ವಿದ್ಯಾರ್ಥಿಗಳ ಬಹು ವರ್ಷಗಳ ಕನಸಾಗಿತ್ತು. ಗ್ಯಾರಂಟಿ ಯೋಜನೆ ಬಂದ ಮೇಲಂತೂ ಸರಕಾರಿ ಬಸ್ಸನ್ನು ಈ ದಾರಿಯಲ್ಲಿ ಬಿಡಲೇಬೇಕು ಎನ್ನುವ ಆಗ್ರಹ ಜಾಸ್ತಿಯಾಗಿತ್ತು. ಈಗ ಸರಕಾರಿ ಬಸ್ಸಿನ ಕನಸು ಈಡೇರಿದೆ. ಡಿ.12 ಗುರುವಾರದಿಂದ ಕಾರ್ಕಳ-ಮೂಡುಬಿದಿರೆ ದಾರಿಯಲ್ಲಿ ಸರಕಾರಿ ಬಸ್ಸು ಸಂಚಾರ ಆರಂಭಿಸಿದ್ದು ಜನತೆ ಹರ್ಷರಾಗಿದ್ದಾರೆ.ಇಷ್ಟು ದಿನ ಖಾಸಗಿ ಬಸ್ ಗಳ ಒತ್ತಡದಿಂದ ಸರಕಾರಿ ಬಸ್ಸು ರಸ್ತೆಗಿಳಿಯದೇ ಜನರು ಸಮಸ್ಯೆ ಅನುಭವಿಸಿದ್ದರು. ಖಾಸಗಿ ಬಸ್ಸು ಮಾಲೀಕರು ಶಾಸಕರಿಗೆ, […]
ಕಾರ್ಕಳ: ಮನೆಯ ಯಜಮಾನರ ಗೂಗಲ್‌ಪೇ ಪಿನ್ ನಂಬರ್ ಗಮನಿಸಿ ಲಕ್ಷಾಂತರ ರೂ. ವಂಚನೆ; ದೂರು ದಾಖಲು.

ಕಾರ್ಕಳ: ಹೋಂನರ್ಸ್ ಸೇವೆಗೆ ಬಂದಿದ್ದ ಯುವಕನೋರ್ವ ಮನೆಯ ಯಜಮಾನರ ಮೊಬೈಲ್ ಬಳಕೆ ವೇಳೆ ಗೂಗಲ್ ಪೇ ಪಿನ್ ಕದ್ದು 9.80 ಲಕ್ಷ ರೂ. ವಂಚನೆ ಮಾಡಿದ ಬಗ್ಗೆ ಕಸಬಾ ಗ್ರಾಮದ ಶಶಿಧರ್ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಶೆಟ್ಟಿ ಆರೋಪಿ. ಕಸಬಾ ಗ್ರಾಮದ ಶಶಿಧರ್ ಅವರ ಕೋರಿಕೆ ಯಂತೆ ಅಲೈಟ್‌ಕೇರ್ ಸಂಸ್ಥೆಯ ರತ್ನಾಕರ್ ಅವರು ಹೋಮ್ ನರ್ಸ್ ಆಗಿ ಕಾರ್ತಿಕ್‌ನನ್ನು ನೇಮಿಸಿದ್ದು, ಅವರನ್ನು ಈ ಪ್ರಕರಣದಲ್ಲಿ 2ನೇ […]
ಉಡುಪಿ: ಮಹಿಳೆ ನಾಪತ್ತೆ; ದೂರು ದಾಖಲು

ಉಡುಪಿ: ಉಡುಪಿ ನಗರ ಠಾಣಾ ವ್ಯಾಪ್ತಿಯ ನಿವಾಸಿ ಹನುಮಂತಮ್ಮ (24) ಎಂಬ ಮಹಿಳೆ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ. ಡಿ. 8ರಂದು ಪತಿ ಹಣ್ಣು ವ್ಯಾಪಾರಕ್ಕೆಂದು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದಾಗ ಮನೆಗೆ ಬೀಗ ಹಾಕಿದ್ದು, ಆಕೆ ಮನೆಯಲ್ಲಿರಲಿಲ್ಲ. ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಬರುತ್ತಿದ್ದು, ನೆರೆಮನೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರಕಿಲ್ಲ. ಮಹಿಳೆಯ ಪತಿ ಈ ಬಗ್ಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಕಾರ್ಕಳ ಕುಕ್ಕುಂದೂರು ನಿವಾಸಿ ಮೃತ್ಯು.

ಕಾರ್ಕಳ: ಕುಕ್ಕುಂದೂರು ಗ್ರಾಮದ ಬಸ್ರಿ ನಿವಾಸಿ ಶಮನ್ ಶೆಟ್ಟಿ (21) ಅವರು ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎ ಓದುತ್ತಿದ್ದ ಶಮನ್ ಡಿ. 10ರಂದು ರಾತ್ರಿ ಸುಮಾರು 11 ಗಂಟೆಗೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಜಾರ್ಕಳ ಕುಕ್ಕುಂದೂರು ಬಸ್ರಿ ನಿವಾಸಿ ಸಿರಿಯಣ್ಣ ಶೆಟ್ಟಿಯವರ ಪುತ್ರ. ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.