ಡಾಕ್ಟರ್ ಆಗಬೇಕೆನ್ನೋ ಕನಸು ಕಂಡಿದ್ದ ಎಸ್ ಎಂ‌ ಕೃಷ್ಣ ಕೊನೆಗೆ ಆದದ್ದೇ ಬೇರೆ :ಎಸ್ ಎಂ ಕೃಷ್ಣ ಆತ್ಮಚರಿತ್ರೆಯಲ್ಲೇನಿದೆ?

ಮೇ 1, 1932 ರಲ್ಲಿ ಏಳು ಹೆಣ್ಣು ಮಕ್ಕಳ ನಂತರ ಎಂಟನೆಯವರಾಗಿ ಜನಿಸಿದವರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (SM Krishna) ತಮ್ಮ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು ಪೂರೈಸಿದ್ದರು. ಬಾಲ್ಯದಲ್ಲಿ ತುಂಟ ಕೃಷ್ಣನಾಗಿದ್ದ ಇವರು ಗುರುಗಳಿಂದ ಸದಾ ಶಿಕ್ಷೆ, ಪೆಟ್ಟುಗಳನ್ನು ಪಡೆಯುತ್ತಿದ್ದರಂತೆ. ಅಲ್ಲಿನ ಸಂಸ್ಕಾರಗಳೇ ಅವರ ಜೀವನ ಈ ಮಟ್ಟದಲ್ಲಿ ಬೆಳೆಯಲು ಕಾರಣ ಎಂದು ಹೇಳಬಹುದು. ಪಠ್ಯ ಚಟುವಟಿಕೆಗಳ ಜೊತೆಯಲ್ಲಿ, ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲೂ ಇವರು ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದರು‌. ಪ್ರೌಢಶಾಲಾ ದಿನಗಳಲ್ಲೂ ಎಸ್.ಎಂ.ಕೃಷ್ಣ ಇದ್ರೆ […]

ಮಾಜಿ ಸಿಎಂ ಎಸ್ಎಂ‌ ಕೃಷ್ಣ ನಿಧನಕ್ಕೆ ಪೇಜಾವರ ಶ್ರೀ ಸಂತಾಪ

ಉಡುಪಿ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ವಿಧಿವಶರಾಗಿರುವ ವಿಷಯ ತಿಳಿದು ತೀವ್ರ ಖೇದವಾಗಿದೆ .‌ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಳಮಟ್ಟದಿಂದ ಬಹಳ ಎತ್ತರದವರೆಗೆ ಬೆಳೆದು ಅನೇಕ ಮಹತ್ವದ ಸ್ಥಾನಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನನ್ಯತೆಯನ್ನು ಕೃಷ್ಣ ಅವರು ಸಂಪಾದಿಸಿದ್ದು ಉಲ್ಲೇಖನೀಯ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿಯೂ ಉತ್ತಮ ಕಾರ್ಯನಿರ್ವಹಿಸಿದ್ದು ಬೆಂಗಳೂರನ್ನು ಮಾಹಿತಿ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಬೆಳೆಸಿ ಸಾವಿರಾರು ಪ್ರತಿಭಾವಂತ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡಿ ಜೀವನದ […]

ನಾಳೆಯ ನಡೆಯಲಿದ್ದ ಮಂಗಳೂರು ವಿ.ವಿ.ಪದವಿ ಪರೀಕ್ಷೆ ಮುಂದೂಡಿಕೆ

ಮಂಗಳೂರು: ನಾಳೆ ನಡೆಯಬೇಕಿದ್ದ ಮಂಗಳೂರು ವಿ.ವಿ ಪರೀಕ್ಷೆಯನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ‌.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ನೀಡಲಾದ ಸರಕಾರಿ ರಜೆಯ ಕಾರಣದಿಂದ ಮುಂದೂಡಲಾಗಿದೆ. ಮಂಗಳೂರು ವಿವಿ ಪರೀಕ್ಷೆಗಳು ನಾಳೆಯಿಂದ ಆರಂಭಗೊಳ್ಳಬೇಕಿತ್ತು. ಇದೀಗ ನಾಳೆಯ ಪರೀಕ್ಷೆಯನ್ನು‌ ಮುಂದೂಡಲಾಗಿದ್ದು.ದಿನಾಂಕವನ್ನು ಸದ್ಯದಲ್ಲಿಯೇ ವಿಶ್ವವಿದ್ಯಾನಿಲಯ ಘೋಷಿಸಲಿದೆ ಎಂದು ವಿವಿ ತಿಳಿಸಿದೆ.

ಪೆರ್ಡೂರು ರಾಜ್ಯಮಟ್ಟದ ಸಂಗೀತ ಸ್ಪರ್ಧೆ.

ಹೆಬ್ರಿ: ಗ್ರಾಮೀಣ ಪ್ರತಿಭೆಗಳು ಅನಾವರಣ ಗೊಳ್ಳಬೇಕಾದರೆ ವೇದಿಕೆ ಮತ್ತು ಅವಕಾಶ ಅತಿ ಅಗತ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ತೆರೆ ಮರೆಯಲ್ಲಿರುವ ಗ್ರಾಮೀಣ ಪ್ರತಿಭೆ ಗಳಿಗೆ ನಿರಂತರವಾಗಿ ವೇದಿಕೆ ಕಲ್ಪಿಸುವುದರ ಜತೆಗೆ ಇಂದು ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಕಾಪು ತಹಸೀಲ್ದಾರರು ಹಾಗೂ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರತಿಭಾ ಆರ್. ಹೇಳಿದರು. ಅವರು ಪೆರ್ಡೂರು ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದಲ್ಲಿ ಪೆರ್ಡೂರು ಬಂಟರ ಸಂಘ (ರಿ […]

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ನಿಧನ: ಕರ್ನಾಟಕದಲ್ಲಿ ಮೂರು ದಿನ ಶೋಕಾಚರಣೆ – ನಾಳೆ ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ಎಸ್ಎಂ ಕೃಷ್ಣ ಅವರ ನಿಧನ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ. ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ. ಇದೇ ವೇಳೆ ಬುಧವಾರ (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಡಿಸೆಂಬರ್ 10 ರಿಂದ ಡಿಸೆಂಬರ್ 12ರವರೆಗೆ ಶೋಕಾಚರಣೆಗೆ ಘೋಷಣೆ ಮಾಡಲಾಗಿದೆ. ಮೂರು ದಿನಗಳ ಕಾಲ ರಾಜ್ಯ […]