ಡಿ.10 ರಿಂದ 15: ಮೂಡಬಿದಿರೆ ವಿದ್ಯಾಗಿರಿಯಲ್ಲಿ 30ನೇ ವರ್ಷದ ‘ಆಳ್ವಾಸ್ ವಿರಾಸತ್’ ಸಾಂಸ್ಕೃತಿಕ ಉತ್ಸವ.
ವಿದ್ಯಾಗಿರಿ: ಮೂಡಣದ ಬಿದಿರೆಯ ನಾಡಲ್ಲಿ ಮೂರು ದಶಕಗಳ ಹಿಂದೆ ಬೆಳಗಿದ ಸಾಂಸ್ಕೃತಿಕ ಬೆಳಕು ಜನಮಾನಸವ ಬೆಸೆದುಕೊಂಡಿದ್ದು, ಈಗ ಮೂವತ್ತರ ಹರುಷ. ಈ ಸಾಂಸ್ಕೃತಿಕ ಬೆಳಕಿನ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ 30ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ. ಇಂದಿನಿಂದ (ಡಿ.10) ಭಾನುವಾರದ ವರೆಗೆ (ಡಿ.15) ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ. ಈ ಬಾರಿ ಡಿ.10 ರಿಂದ 14ರ ವರೆಗೆ ಮೇಳಗಳ […]
ಅಂಬಲಪಾಡಿ ಜಂಕ್ಷನ್ ನಲ್ಲಿ ಎಲಿವೇಟೆಡ್ ಪ್ಲೆ ಓವರ್ ನಿರ್ಮಾಣಗೊಳ್ಳಲಿ -ರಮೇಶ್ ಕಾಂಚನ್
ಉಡುಪಿ ಅಂಬಲಪಾಡಿಯ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮೋದನೆ ನೀಡಿರುವುದನ್ನು ಪುನರ್ ಪರಿಶೀಲಿಸಿ ಇಲ್ಲಿಗೆ ಸೂಕ್ತವಾದ ಎಲಿವೇಟೆಡ್ ಪ್ಲೆ ಓವರ್ ನಿರ್ಮಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆಗ್ರಹಿಸಿದ್ದಾರೆ. ಉಡುಪಿ, ಕುಂದಾಪುರದಲ್ಲಿ ಈ ಹಿಂದೆ ನಿರ್ಮಿಸಲ್ಪಟ್ಟ ಅಂಡರ್ ಪಾಸ್ ನಿಂದ ಪ್ರಯಾಣಿಕರು, ಸಾರ್ವಜನಿಕರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ಅಂಡರ್ ಪಾಸ್ ಸಂಪರ್ಕದ ಸರ್ವಿಸ್ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆಅಡಚಣೆ […]
ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಗ್ರಾಮ ಪಂಚಾಯತ್
ಉಡುಪಿ: ಗ್ರಾ.ಪಂ. ಎಚ್ಚರಿಕೆಯ ಹೊರತಾಗಿಯೂ ಡ್ರೈನೇಜ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಪಡುಬಿದ್ರಿ ಗ್ರಾ.ಪಂ.ಬಿಸಿ ಮುಟ್ಟಿಸಿದೆ. ವ್ಯಾಪಾರಸ್ಥರನ್ನು ತೆರವುಗೊಳಿಸಿ ಮುಂದೆ ತಪ್ಪು ಪುನರಾವರ್ತನೆ ಆದಲ್ಲಿ ದಂಡ ನೀಡಬೇಕಾದೀತು ಎಂದು ಗ್ರಾ.ಪಂ. ಪಿಡಿಒ ಮಂಜುನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಹಲವರು ಮಳೆನೀರು ಹರಿದು ಹೋಗುವ ಡ್ರೈನೇಜ್ ಮೇಲ್ಭಾಗದಲ್ಲಿ ಸಾಮಾಗ್ರಿಗಳನ್ನಿಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರು.ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಈ ಬಗ್ಗೆ ತಿಂಗಳ ಹಿಂದೆಯೇ ವ್ಯಾಪಾರಿಗಳಿಗೆ ಗ್ರಾ.ಪಂ. ಎಚ್ಚರಿಕೆ ನೀಡಿತ್ತು.ಎಚ್ಚರಿಕೆಗೆ ಕ್ಯಾರೇ ಎನ್ನದ ಕೆಲ ವ್ಯಾಪಾರಿಗಳು ಡ್ರೈನೇಜ್ ದಾಟಿ ರಸ್ತೆಗಂಟಿಕೊಂಡೇ […]
ಉಡುಪಿ: ಡಿ.14ರಂದು ಆಟಿಸಂ ಸೊಸೈಟಿಯಿಂದ “ಕಲಾಸೌರಭ-3′ ಕಾರ್ಯಕ್ರಮ
ಉಡುಪಿ: ಉಡುಪಿ ಆಟಿಸಂ ಸೊಸೈಟಿಯ ಆಶ್ರಯದಲ್ಲಿ ‘ಕಲಾಸೌರಭ-3’ ಕಾರ್ಯಕ್ರಮವನ್ನು ಇದೇ ಡಿ. 14ರಂದು ಬೆಳಿಗ್ಗೆ 9ರಿಂದ 4.30ರವರೆಗೆ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಆಟಿಸಂ ಸೊಸೈಟಿಯ ಅಧ್ಯಕ್ಷೆ ಅಮಿತಾ ಪೈ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಸುಧಾರಿತ ಆಟಿಸಂ ಆರೈಕೆ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಿ, ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ ಆರೈಕೆಯನ್ನು ಆಟಿಸಂ ಇರುವ ಮಕ್ಕಳಿಗೆ ನೀಡುವುದು ನಮ್ಮ ಉದ್ದೇಶವಾಗಿದೆ. 16 ವಿಶೇಷ ಶಾಲೆಗಳಿಂದ 350ಕ್ಕೂ ಹೆಚ್ಚಿನ ಮಕ್ಕಳು […]
ಬ್ರಹ್ಮಾವರ: ಕಂಬಳದ ವಿಧಿವಿಧಾನ ಪೂರೈಸಿ ಬದುಕಿನ ಪಯಣ ಮುಗಿಸಿದ 90ರ ಹಿರಿಯ ಜಯರಾಮ ಹೆಗ್ಡೆ
ಉಡುಪಿ: ಉಡುಪಿಯ ಬ್ರಹ್ಮಾವರ ಸಮೀಪದ ಚೇರ್ಕಾಡಿಯಲ್ಲಿ ಅಪರೂಪದ ವಿದ್ಯಮಾನ ಸಂಭವಿಸಿದೆ. ಚೇರ್ಕಾಡಿಯಲ್ಲಿ ಕಳೆದ ಎರಡು ದಿನಗಳ ಕಾಲ ಸಾಂಪ್ರದಾಯಿಕ ಕಂಬಳ ವರ್ಷಂಪ್ರತಿಯಂತೆ ನಡೆಯಿತು. ಕಂಬಳ ನಡೆಯುವಾಗ ಗುತ್ತಿನ ಮನೆತನದ ಹಿರಿಯರು ಮುಖ್ಯಸ್ಥರಾಗಿ ಎಲ್ಲವನ್ನು ನಿರ್ವಹಿಸುವ ಪರಿಪಾಠ ಇದೆ . ತಮ್ಮ ಅತ್ಯಂತ ಇಳಿ ವಯಸ್ಸಿನಲ್ಲಿ ಗುತ್ತಿನ ಮನೆಯ ಎಲ್ಲಾ ಕೆಲಸಗಳನ್ನು ನಿರ್ವಹಿಸಿದ ಚೇರ್ಕಾಡಿ ಜಯರಾಮ ಹೆಗ್ಡೆ ಎನ್ನುವವರು ಕೊನೆಯುಸಿರೆಳೆದಿದ್ದಾರೆ. ಕಂಬಳ ಮುಗಿಯುವವರೆಗಿನ ಎಲ್ಲಾ ವಿಧಿ ವಿಧಾನಗಳಲ್ಲಿ ಅವರು ಭಾಗವಹಿಸಿದ್ದರು. ಕೊನೆಯದಾಗಿ ತೆಂಗಿನಕಾಯಿಯನ್ನು ಒಡೆದು ಮನೆ ಸೇರಿದ್ದರು. ಮನೆಗೆ […]