ಮಣಿಪಾಲ: ಕೆಟ್ಟುನಿಂತ ಟ್ಯಾಂಕರ್ ಗೆ ಬೈಕ್ ಡಿಕ್ಕಿ; ಯುವಕ ಮೃತ್ಯು

ಉಡುಪಿ: ಕೆಟ್ಟುನಿಂತಿದ್ದ ಟ್ಯಾಂಕರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ. 8 ರಂದು ಭಾನುವಾರ ಸಂಜೆ ಪರ್ಕಳ ಎಸ್ ಬಿಐ ಬ್ಯಾಂಕ್ ಬಳಿ ಸಂಭವಿಸಿದೆ. ಮೃತಪಟ್ಟ ಬೈಕ್ ಸವಾರನನ್ನು ಶೆಟ್ಟಿಬೆಟ್ಟು ದೇವು ಪೂಜಾರಿ ಪುತ್ರ ಸೃಜನ್ ಸಾಗರ್(22) ಎಂದು ಗುರುತಿಸಲಾಗಿದೆ. ಟೈಯರ್ ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ನೀರಿನ ಟ್ಯಾಂಕ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮಣಿಪಾಲ ಠಾಣಾ […]

ಬೇಕರಿ ಕೆಲಸಕ್ಕೆ ಜನ ಬೇಕಾಗಿದ್ದಾರೆ

ಉಡುಪಿ:ಕೊಕ್ಕರ್ಣೆಯಲ್ಲಿ ಬೇಕರಿ ಕೆಲಸಕ್ಕೆ ಆಲ್ ರೌಂಡರ್ ಕೆಲಸಗಾರರು ಬೇಕಾಗಿದ್ದಾರೆ.ವೇತನ:15,000 ರಿಂದ 20,000.ಊಟ ಮತ್ತು ವಸತಿ ವ್ಯವಸ್ಥೆ ಇದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7975295685

ಉಡುಪಿ: ಇಂದು (ಡಿ.8) ತೋನ್ಸೆ ಪಡುಮನೆಯ ಕಂಬಳ ಮಹೋತ್ಸವ

ತೋನ್ಸೆ ಪಡುಮನೆತನದ ಅನುವಂಶಿಕವಾಗಿ ನಡೆದು ಬಂದವರ್ಷಾವಧಿ ಕಂಬಳ ಮಹೋತ್ಸವವು ಇಂದು (ಡಿ.8) ಮಧ್ಯಾಹ್ನ 1 ಗಂಟೆಯಿಂದ ತೋನ್ಸೆ ಪಡುಮನೆ ಕಂಬಳಪರಿಯಲ್ಲಿ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ತೋನ್ಸೆ ಗ್ರಾಪಂ‌ ಅಧ್ಯಕ್ಷೆ ಕುಸುಮ ರವೀಂದ್ರ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ತೋನ್ಸೆ ಪಡುಮನೆಯ ಶುಭರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಗಂಟೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದ್ದು, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬಹುಮಾನ ವಿತರಣೆ ಮಾಡಲಿದ್ದಾರೆ. ಸ್ಪರ್ಧಾ ವಿವರ1. ಹಗದ ಓಟ ಹಿರಿಯ (4 ಹಲ್ಲಿನ ಮೇಲಟ್ಟು)ಪ್ರಥಮ ಬಹುಮಾನ […]

ಹೆಬ್ರಿ: ಎಸ್. ಆರ್ ಕಾಲೇಜಿನಲ್ಲಿ “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ ಮತ್ತು ಒತ್ತಡ ನಿರ್ವಹಣೆ”ಯ ಕುರಿತು ಚಿಂತನೆ

ಹೆಬ್ರಿ: ಪ್ರತಿದಿನ ಹೊಸ ಹೊಸ ತಂತ್ರಜ್ಞಾನಗಳು ಹುಟ್ಟಿಕೊಳ್ಳುತ್ತವೆ ಇವುಗಳು ಬದುಕಿಗೆ ಪೂರಕವಾಗುವಂತೆ ನಾವು ಹೊಂದಿಕೊಂಡು ಬದುಕಬೇಕು. ಯಾಂತ್ರಿಕ ಜೀವನದಲ್ಲಿ ಬುದ್ಧಿವಂತಿಕೆ, ಪ್ರಶ್ನಿಸುವಿಕೆಯ ಜೊತೆಗೆ ಒತ್ತಡವನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದು ಎಸ್.ಆರ್ ಪದವಿ ಪೂರ್ವ ಕಾಲೇಜು ಮತ್ತು ನಕ್ಸಲ್ ನಿಗ್ರಹ ದಳದ ವತಿಯಿಂದ ನಡೆದ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆ, ತಾರ್ಕಿಕತೆ ಮತ್ತು ಒತ್ತಡ ನಿರ್ವಹಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಎ.ಹೆಚ್ ಸಾಗರ್ ರವರು ಮಾತನಾಡಿದರು. ಎಸ್.ಆರ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹೆಚ್. ನಾಗರಾಜ್ […]

ಕಾರ್ಕಳ: ವಿಷ ಸೇವಿಸಿ ಯುವಕ ಆತ್ಮಹತ್ಯೆ

ಕಾರ್ಕಳ: ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ಮನನೊಂದು ನ.26 ರಂದು ಮನೆಯ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಾಳ ಗ್ರಾಮದ ಲಕ್ಷ್ಮೀ ಎಂಬವರ ಮಗ ಉಮೇಶ(21) ಎಂಬವರು ತೀವ್ರವಾಗಿ ಅಸ್ವಸ್ಥಗೊಂಡು ಡಿ.6ರಂದು ರಾತ್ರಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.