ಕಾರ್ಕಳ: ಯುವತಿಯ ಅಪಹರಣ, ಅತ್ಯಾಚಾರ ಪ್ರಕರಣ; ಮೂವರಿಗೆ ಜಾಮೀನು.

ಕಾರ್ಕಳ: ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಆರೋಪಿಗಳಾಗಿರುವ ಮೂವರಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಸಂತ್ರಸ್ತೆಯನ್ನು ಅಪಹರಿಸಿದ ಬಳಿಕ ಆರೋಪಿಗಳು ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ ವಿವರ:ಇನ್‌ಸ್ಟಾಗ್ರಾಮ್ ಸ್ನೇಹಿತನೊಬ್ಬ 21 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ಆಗಸ್ಟ್ 24 ರಂದು ಉಡುಪಿ ಜಿಲ್ಲೆಯ ಕಾರ್ಕಳ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿ ಅನ್ಯ ಧರ್ಮದವನಾಗಿದ್ದ ಆಗಿದ್ದರಿಂದ ಕೋಮು ತಿರುವು ಪಡೆದಿತ್ತು. ಕಾರ್ಕಳ […]
ಪಡುಬಿದ್ರಿ: ಮಹಿಳೆಯ ನೈಟಿಗೆ ಆಕಸ್ಮಿಕ ಬೆಂಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು.

ಉಡುಪಿ: ತಾಲೂಕಿನ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿ ಆಕಸ್ಮಿಕದಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಹೆಜಮಾಡಿ ಗ್ರಾಮದ ಸುನಂದ(42) ಎಂದು ಗುರುತಿಸಲಾಗಿದೆ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಇವರು, ನ.10ರಂದು ಬೆಂಕಿ ಕಡ್ಡಿ ಗೀರಿದಾಗ ನೈಟಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ. ಇದರಿಂದ ಅವರ ಕಾಲಿನಿಂದ ಕುತ್ತಿಗೆಯವರೆಗೆ ಸುಟ್ಟಗಾಯಗಳು ಆಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರು, ಡಿ.5ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರಿ […]
ಕಾರ್ಕಳ: ಶ್ರೀ ಕ್ಷೇತ್ರ ವರಂಗ ಜೈನ ಮಠ ಧಾರ್ಮಿಕ ಯಾತ್ರಾ ಕ್ಷೇತ್ರ.

ಉಡುಪಿ: ಹೆಬ್ರಿ ತಾಲೂಕಿನಲ್ಲಿರುವ ಜೈನರ ಪವಿತ್ರ ಕ್ಷೇತ್ರ ಇಲ್ಲಿಯ ಬಸದಿಗಳು ಮತ್ತು ಸ್ಮಾರಕಗಳು ಈತಿಹಾಸಿಕವಾಗಿ ಹುಂಚದ ಶ್ರೀ ಹೊಂಬುಜ ಜೈನ ಮಠದ ಶಾಖಾ ಮಠವಾಗಿರುವ ಶ್ರೀ ವರಂಗ ಜೈನ ಮಠದ ಅಧೀನ, ಆಡಳಿತ ಮಂಡಳಿ ಮತ್ತು ಸುಪರ್ದಿಯಲ್ಲಿದೆ. ಕಳೆದ ಶತಮಾನದ ಹಿಂದಿನವರೆಗೂ ಜೈನ ಮಠವು ಜೈನಾಚಾರ್ಯರ ನೆಲೆಯಾಗಿ, ಧರ್ಮ-ಜ್ಞಾನಗಳ ಕೇಂದ್ರವಾಗಿದ್ದು, ಇಂತಹ ಇತಿಹಾಸ ಪ್ರಸಿದ್ಧಿ ವರಂಗ ಕ್ಷೇತ್ರದ ಪರಿಚಯ ಇನ್ನಿತರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರವಾಸಿ ತಾಣ ಎಂದು ಪ್ರಕಟಿಸಿರುವುದರಿಂದ ಎಲ್ಲಾ ರೀತಿಯ ಜನರು ಇಲ್ಲಿಗೆ […]
ಪುಷ್ಪಾ 2 ಸಿನೆಮಾ ಪ್ರದರ್ಶನ ವೇಳೆ ಮಹಿಳೆ ಸಾವು; ಮೃತ ಕುಟುಂಬಕ್ಕೆ 25 ಲಕ್ಷ ರೂ. ನೆರವು ಘೋಷಿಸಿದ ಅಲ್ಲು ಅರ್ಜುನ್

ಹೈದರಾಬಾದ್: ‘ಪುಷ್ಪಾ 2 ಸಿನಿಮಾ ಪ್ರದರ್ಶನದ ವೇಳೆ ಉಸಿರುಗಟ್ಟಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ ಶುಕ್ರವಾರ 25 ಲಕ್ಷ ರೂ. ನೆರವು ಘೋಷಣೆ ಮಾಡಿದ್ದಾರೆ. ಈ ಕುರಿತ ವಿಡಿಯೊವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನಟ, ‘ಈ ದುರ್ಘಟನೆ ಬಹಳ ಬೇಸರ ತರಿಸಿದೆ. ಮೃತರ ಕುಟುಂಬದವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ’ ಎಂದು ಅವರು ಹೇಳಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಬುಧವಾರ ಪ್ರೀಮಿಯರ್ ಶೋ ವೇಳೆ ಜನದಟ್ಟಣೆ ಹೆಚ್ಚಿದ ಪರಿಣಾಮ […]
ಕುಂದಾಪುರ: ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಕುಂದಾಪುರ: ತಾಲೂಕಿನ ಅಸೋಡು ಸಮೀಪದ ರೈಲಿಗೆ ತಲೆ ಕೊಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ರೈಲ್ವೇ ಹಳಿಯಲ್ಲಿ ಸಂಭವಿಸಿದೆ. ಮೃತಪಟ್ಟವರು ಕಾಳಾವರ ಸಮೀಪದ ನಿವಾಸಿ ಪ್ರಭಾಕರ ಶೆಟ್ಟಿ ಎಂದು ತಿಳಿದು ಬಂದಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದ್ದು, ಕುಂದಾಪುರ ಗ್ರಾಮಾಂತರ ಠಾಣಾ ಎಸ್‌ಐ ಭೀಮಾಶಂಕರ್ ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ.