ಜ.07-09 ರವರೆಗೆ ರಾಷ್ಟ್ರೀಯ ಸಮ್ಮೇಳನ

ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಎಕ್ಸ್ಪ್ಲೋರಿಂಗ್ ನೇರ‍್ಸ್ ಫಾರ್ಮಸಿ: ಪೊಟೆನ್ಶಿಯಲ್ ಆಫ್ ಮೆಡಿಶನಲ್ ಅಂಡ್ ಆರೋಮ್ಯಾಟಿಕ್ ಪ್ಲಾನ್ಟ್÷್ಸ ಅಂಡ್ ಧೇರ್ ಕನ್ಸರ್‌ವೇಷನ್ ವಿಷಯದ ಮೇಲೆ 2025 ರ ಜನವರಿ 7 ರಿಂದ 9 ರ ವರೆಗೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅಕಾಡೆಮಿಯ ಕಚೇರಿಯಾದ ಬೆಂಗಳೂರಿನ ವಿದ್ಯಾರಣ್ಯಪುರ ಜಿ.ಕೆ.ವಿ.ಕೆ ಆವರಣದ ತೋಟಗಾರಿಕಾ ವಿಜ್ಞಾನಗಳ ಕಾಲೇಜು ಮಹಾದ್ವಾರದ ಪಕ್ಕ ಪ್ರೊ.ಯು.ಆರ್ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಪ್ರತಿಷ್ಠಿತ ಸಂಸ್ಥೆಗಳ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದು, […]
ಮಣಿಪಾಲ: ಡಿ.10 ರಂದು ಓರೇನ್ ಇಂಟರ್ನ್ಯಾಷನಲ್ ನಲ್ಲಿ ‘ವುಲ್ಫ್ ಕಟ್’ ನೋಡಿ ಕಲಿಯಿರಿ ಉಚಿತ ಕಾರ್ಯಾಗಾರ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಘಟಕ) ಓರೇನ್ ಇಂಟರ್ನ್ಯಾಷನಲ್ ‘ವುಲ್ಫ್ ಕಟ್’ಅಡ್ವಾನ್ಸ್ ಹೇರ್ ಕಟ್ ನೋಡಿ ಕಲಿಯಿರಿ ಉಚಿತ ಕಾರ್ಯಾಗಾರ ಡಿ.10 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12:30ವರೆಗೆ ನಡೆಯಲಿದೆ. ಕಲಿಕೆಯ ಫಲಿತಾಂಶಗಳು:▪️ ಕೂದಲಿಗೆ ಪರಿಮಾಣ ಮತ್ತು ಚಲನೆಯನ್ನು ಸೇರಿಸುವ ಲೇಯರ್ಡ್, ಟೆಕ್ಸ್ಚರ್ಡ್ ನೋಟವನ್ನು ಹೇಗೆ ರಚಿಸುವುದು ಎಂಬುದನ್ನು ಭಾಗವಹಿಸುವವರು ಅರ್ಥಮಾಡಿಕೊಳ್ಳುವರು. ಯಾರು ಭಾಗವಹಿಸಬಹುದು:▪️ ಎಲ್ಲರಿಗೂ ತೆರೆದಿರುತ್ತದೆ, ವಿಶೇಷವಾಗಿ ಸಲೂನ್ ಕಲಾವಿದರಿಗೆ. ಆಸಕ್ತರು ಸಂಪರ್ಕಿಸಿ:ಓರೇನ್ ಇಂಟರ್ನ್ಯಾಷನಲ್, ಎಂಎಸ್ ಡಿಸಿ ಕಟ್ಟಡ, […]
ಮಣಿಪಾಲ: ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಉಡುಪಿ: ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಮಣಿಪಾಲ ಹೆರ್ಗ ಗ್ರಾಮದ ಸಣ್ಣಕ್ಕಿಬೆಟ್ಟು ಕಲಾಭೂಮಿ ಕಟ್ಟಡದ ಹಿಂಭಾಗದ ಹಾಡಿಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದಿದೆ. ಮೃತದೇಹ ಗುರುತು ಹಿಡಿಯಲಾಗದಷ್ಟು ಕೊಳೆತು ಹೋಗಿದೆ. ವ್ಯಕ್ತಿ ಮರದ ಕೊಂಬೆಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಶಂಕೆವ್ಯಕ್ತವಾಗಿದೆ. ವ್ಯಕ್ತಿ ಮೃತಪಟ್ಟು 20 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಮಣಿಪಾಲದ ಪೋಲಿಸ್ ಠಾಣೆಯ ಎ.ಎಸ್.ಐ ನಾಗೇಶ್ ನಾಯ್ಕ್, ಹೆಡ್ ಕಾನ್ಸ್ಟೇಬಲ್ ಸುಧಾಕರ್, ಸಿಬ್ಬಂದಿ ಸಂಗೀತ ಕಾನೂನು ಪ್ರಕ್ರಿಯೆ ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ […]
ಕುಂದಾಪುರ: ಯುವಕ ನಾಪತ್ತೆ

ಕುಂದಾಪುರ: ಉಡುಪಿ ಖಾಸಗಿ ಬಸ್ಸಿನ ಚೆಕಿಂಗ್ ಕಛೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯ ಮೀನಾಕ್ಷಿ ಎಂಬವರ ಮಗ ಸುಧೀಂದ್ರ(40) ಎಂಬವರು ಡಿ.4ರಂದು ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದ.ಕ.ಜಿಲ್ಲೆಯಲ್ಲಿ ಎರಡು ಹೊಸ ಸೇತುವೆ ನಿರ್ಮಾಣ: ದಿನೇಶ್ ಗುಂಡೂರಾವ್

ಮಂಗಳೂರು:ದ.ಕ.ಜಿಲ್ಲೆಯಲ್ಲಿ ಎರಡು ಹೊಸ ಸೇತುವೆ ನಿರ್ಮಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾ ಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮಂಗಳೂರು-ಚೆರ್ವತ್ತೂರು ಜಿಲ್ಲಾ ಮುಖ್ಯರಸ್ತೆಯ (ಕೋಟೆಪುರದಿಂದ ಬೋಳಾರದವರೆಗೆ) ನೇತ್ರಾವತಿ ನದಿಗೆ ಅಡ್ಡಲಾಗಿ 200 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. ಅದಲ್ಲದೆ ಬಂಟ್ವಾಳ ತಾಲೂಕಿನ ಸಜಿಪ ನಡು ಮತ್ತು ತುಂಬೆ ಗ್ರಾಮದ ಮಧ್ಯೆ ನೇತ್ರಾವತಿ ನದಿಗೆ ಅಡ್ಡಲಾಗಿ 60 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.