ಕಾರ್ಕಳ: ಹೊಂಗನಸು ಕನ್ನಡ ಪುಸ್ತಕ ಬಿಡುಗಡೆ.
ಕಾರ್ಕಳ: ಶಿರ್ಲಾಲು ನಾಲ್ಕೂರು ನರಸಿಂಗ ರಾವ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ಪ್ರಭಂದಕ ಆರ್.ರಮೇಶ್ ಪ್ರಭು ರವರ ಕ್ರಿಯೇಟಿವ್ ಪುಸ್ತಕಮನೆ ಮುದ್ರಿಸಿದ ಹೊಂಗನಸು ಕವನ ಸಂಕಲನ ಪುಸ್ತಕ ಬಿಡುಗಡೆಯನ್ನು ಸಮ್ಮೇಳನ ಅಧ್ಯಕ್ಷ ಪ್ರೋ.ಕೆ.ಗುಣಪಾಲ್ ಕಡಂಬ, ಜ್ಞಾನಸುಧ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಸುಧಾಕರ್ ಶೆಟ್ಟಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದೇರ್ಶಕಿ ಶ್ರೀಮತಿ […]
ಉಡುಪಿ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ಪ್ರಕರಣ ದಾಖಲು
ಉಡುಪಿ, ಡಿ.7: ಮಾಜಿ ಸಚಿವ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ವಿರುದ್ಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಕ್ಷದ ನಾಯಕರಾದ ವಿನಯ ಕುಮಾರ್ ಸೊರಕೆ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ, ಅದರ ಪ್ರೊಫೈಲ್‌ಗೆ ವಿನಯ ಕುಮಾರ್ ಸೊರಕೆ ಅವರ ಫೋಟೋವನ್ನು ದುರ್ಬಳಕೆ ಮಾಡಿದ್ದಾರೆ. ಈ ಮೂಲಕ ಸೊರಕೆ ಅವರ ವೈಯಕ್ತಿಕ ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ […]
ಬಾಲಕಿ ನಾಪತ್ತೆ
ಮಂಗಳೂರು : ಮಂಗಳೂರಿನ ಕೊಟ್ಟಾರ ಚೌಕಿ ಮಾಲೆಮಾರ್ ಕೆನರಾ ಬ್ಯಾಂಕ್ ಹಿಂದುಗಡೆ, ಮರಿಯಾ ಎಂಬವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ (17) ಎಂಬ ಬಾಲಕಿಯು ನ.30 ರಂದು ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದ ಬಾಲಕಿಯ ಮಾಹಿತಿ ದೊರಕಿದರೆ ಕಾವೂರು ಪೊಲೀಸ್‌ಠಾಣೆ ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಉಡುಪಿ: ಜಿಲ್ಲಾ ಮಟ್ಟದ ಚುನಾವಣಾ ಸಾಕ್ಷರತಾ ಸ್ಪರ್ಧೆ
ಉಡುಪಿ: ಡಿ.07 ರಂದು ಉಡುಪಿ ಜಿಲ್ಲಾ ಲೀಡ್ ಕಾಲೇಜಾದ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಇಲ್ಲಿ ಉಡುಪಿ ಜಿಲ್ಲಾ ಮಟ್ಟದ ಚುನಾವಣಾ ಸಾಕ್ಷರತಾ ದಿನ -2025 ಸ್ಪರ್ಧೆಗಳು ಜರಗಿದವು. ಜಿಲ್ಲೆಯ ಏಳೂ ತಾಲೂಕುಗಳ ವಿಜೇತರುಗಳು ಇದರಲ್ಲಿ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಪಂಚಾಯತ್ ನ ಪ್ರಥಮ ದರ್ಜೆ ಸಹಾಯಕರಾದಂತಹ ಅನಂತ ಕೃಷ್ಣ ರವರು ಕಾರ್ಯಕ್ರಮ ಉದ್ಘಾಟಿಸಿ ಸರ್ವರಿಗೂ ಶುಭ ಹಾರೈಸಿದರು. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಸೋಜನ್ […]
ಕುಂದಾಪುರ: ಕೋಡಿ ಬೀಚ್ ನಲ್ಲಿ ಈಜಲು ಇಳಿದ ಮೂವರು ಸಹೋದರರು ನೀರುಪಾಲು; ಓರ್ವನ ಸ್ಥಿತಿ ಗಂಭೀರ
ಉಡುಪಿ: ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಯುವಕರು ಸಮುದ್ರ ಪಾಲಾದ ಘಟನೆ ಕುಂದಾಪುರ ಕೋಡಿ ಬೀಚಿನಲ್ಲಿ ಶನಿವಾರ ಸಂಜೆ ನಡೆದಿದೆ. ಅಂಪಾರು ನಿವಾಸಿ ದಾಮೋದರ್ ಪ್ರಭು ಎಂಬುವರ ಮಗ ಧನರಾಜ್ (23) ಮೃತಪಟ್ಟಿದ್ದಾರೆ. ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರ ಸಹೋದರನ ಪುತ್ರ ದರ್ಶನ್ (18) ಸಮುದ್ರ ಪಾಲಾಗಿದ್ದು ಇದುವರೆಗೆ ಪತ್ತೆ ಆಗಿರುವುದಿಲ್ಲ. ಮೂರು ಜನರು ಸಹೋದರರಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್ ಎನ್‌ಐಟಿಕೆ ಇಂಜಿನಿಯರಿಂಗ್ ಕಾಲೇಜಿನ […]