ಉಡುಪಿ ನಗರ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಅಕ್ರಮ ಚಟುವಟಿಕೆ ಆರೋಪ; ಪೊಲೀಸರಿಂದ ತಡರಾತ್ರಿ ದಿಢೀರ್ ಕಾರ್ಯಾಚರಣೆ
ಉಡುಪಿ: ಉಡುಪಿ ನಗರ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ನಗರ ಪೊಲೀಸರು ಮಂಗಳವಾರ ರಾತ್ರಿ ದಿಢೀರ್ ಕಾರ್ಯಾಚರಣೆ ನಡೆಸಿದರು. ಉಡುಪಿ ನಗರ ಠಾಣೆಯ ಇನ್ಸ್ ಪೆಕ್ಟರ್ ರಾಮಚಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ರೌಂಡ್ಸ್ ಹಾಕಿದ ಪೊಲೀಸರು ತಡರಾತ್ರಿ ಓಡಾಡುತ್ತಿದ್ದ ಜನರಿಗೆ ಎಚ್ಚರಿಕೆ ನೀಡಿದರು. ರಾತ್ರಿಯಾಗುತ್ತಿದ್ದಂತೆ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣದ ಸುತ್ತಮುತ್ತ ಮಂಗಳಮುಖಿಯರ ಕಾಟ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ […]
ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ CADD ಸೆಂಟರ್ ನಲ್ಲಿ ವಿವಿಧ ಕೋರ್ಸ್ಗಳು ಪ್ರಾರಂಭ.
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಘಟಕ) ಮಣಿಪಾಲದಲ್ಲಿ CADD ಸೆಂಟರ್ ದೊಂದಿಗೆ ವಿವಿಧ ಕೋರ್ಸ್‌ಗಳನ್ನು ನೀಡಲಾಗುತ್ತದೆ. ▪️ AutoCAD▪️ SketchUp▪️ Revit▪️ Revit MEP▪️ 3ds Max 🔹 Start to end Industry specific, skill based course.🔹 World-class course reference guides.🔹 Internationally recognised certificates.🔹Curriculum inducted with most industry needs. (ಒಂದರಿಂದ ಮೂರು ತಿಂಗಳವರೆಗೆ ಹೊಂದಿಕೊಳ್ಳುವ ಸಮಯಗಳು ಸಿಗಲಿದೆ.) ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📍CADD […]
ರೈತರಿಗೆ ಗುಡ್ ನ್ಯೂಸ್ – ಅಡಿಕೆ ರೇಟ್ ನಲ್ಲಿ ಭರ್ಜರಿ ಏರಿಕೆ
ಪುತ್ತೂರು: ಹೊಸ ವರ್ಷದ ಆಗಮನಕ್ಕೆ ಕೆಲವು ದಿನಗಳು ಬಾಕಿ ಇರುವ ಬೆನ್ನಲ್ಲೇ ರಬ್ಬರ್, ಕಾಳುಮೆಣಸು, ಅಡಿಕೆ ಧಾರಣೆ ಏರುಮುಖದತ್ತ ದಾಪುಗಾಲಿಟ್ಟಿರುವುದು ಬೆಳೆಗಾರರಿಗೆ ಖುಷಿ ತಂದಿದೆ. ಸಿಂಗಲ್‌ಚೋಲ್‌ಗೆ ಮತ್ತಷ್ಟು ಬೇಡಿಕೆಚಾಲಿ ಅಡಿಕೆ ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಧಾರಣೆ ನಿರೀಕ್ಷೆಯಂತೆ 450 ಗಡಿ ದಾಟಿ ಮುನ್ನುಗಿದೆ. ಕ್ಯಾಂಪ್ಲೋ ಧಾರಣೆ 440 ರೂ.ನಲ್ಲಿದೆ. ಡಿ. 3ರಂದು ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ 450ರಿಂದ 455 ರೂ. ತನಕ ಧಾರಣೆ ಕಂಡು ಬಂದಿದೆ. ಹೊಸ ಅಡಿಕೆ ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿದೆ. […]
ಉಡುಪಿ: ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು.
ಉಡುಪಿ: ಜಿಲ್ಲಾಸ್ಪತ್ರೆಯ ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಅಜ್ಜರಕಾಡುವಿನಲ್ಲಿ ಡಿ.2ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಮೂಡುಬೆಳ್ಳೆ ಗ್ರಾಮದ ಸಂತೋಷ್(46) ಎಂದು ಗುರುತಿಸ ಲಾಗಿದೆ. ಇವರು ನಿರ್ಮಾಣ ಹಂತದಲ್ಲಿರುವ ಸರಕಾರಿ ಆಸ್ಪತ್ರೆಗೆ ವಾಟರ್ ಪ್ರೂಫಿಂಗ್ ಕೆಲಸಕ್ಕೆ ಹೋಗಿದ್ದು, ಕಟ್ಟಡದ ಆರನೇ ಅಂತಸ್ಥಿನ ಮೇಲಿರುವ ಟ್ಯಾಂಕಿಗೆ ವಾಟರ್ ಪ್ರೂಫಿಂಗ್ ಮಾಡಲು ತೆರಳಿದ್ದರು. ಆ ಕೆಲಸವನ್ನು ಮುಗಿಸಿ ವಾಪಸ್ಸು ಕೆಳಗಡೆ ಬರಲು 6ನೇ ಅಂತಸ್ಥಿನ ಮೇಲೆ ಅಳವಡಿ ಸಿದ ಪಾಲಿ ಕಾರ್ಮರ್ ಶೀಟ್‌ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಅವುಗಳ […]
ಕುಂದಾಪುರ: ಯುವಕ ನಾಪತ್ತೆ.
ಕುಂದಾಪುರ: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆ ನಿಗದಿಯಾಗಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಕೊಟೇಶ್ವರ ಗ್ರಾಮದ ಜಯಲಕ್ಷ್ಮೀ ಎಂಬವರು ಕಾರ್ತಿಕ್(28) ಎಂಬವರನ್ನು ಮದುವೆ ಮಾತುಕತೆ ಮಾಡಿಕೊಂಡು ಡಿ.5ರಂದು ಮದುವೆ ಆಗುವುದಾಗಿ ನಿಶ್ಚಯಿಸಿದ್ದರು. ಅದರಂತೆ ಜು.16ರಂದು ಮದುವೆ ನೊಂದಣಿ ಮಾಡಿಕೊಂಡಿದ್ದರು. ನ.27ರಂದು ಅಪರಾಹ್ನ ವೇಳೆ ಕಾರ್ತಿಕ್, ಜಯಲಕ್ಷ್ಮೀಗೆ ಕರೆ ಮಾಡಿ, ತಾನು ಕೋಟೇಶ್ವರದಲ್ಲಿದ್ದು ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇದೆ ಎಂದು ಹೇಳಿ ಹೋಗಿದ್ದರು. ನಂತರ ಅವರು ವಾಪಾಸ್ಸು ಬಾರದೇ ಮೊಬೈಲ್ ಸ್ವಿಚ್‌ಆಫ್ ಮಾಡಿ […]