ತೋಟಗಾರಿಕೆ ಇಲಾಖೆಯಿಂದ ಜೇನುತುಪ್ಪಕ್ಕೆ ಬ್ರ್ಯಾಂಡ್ ಹೆಸರು ಅಭಿವೃದ್ಧಿ.
ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸಲು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಜೇನುತುಪ್ಪಕ್ಕೆ ತೋಟಗಾರಿಕೆ ಇಲಾಖೆಯು ಬ್ರ‍್ಯಾಂಡ್ ಹೆಸರು ಅಭಿವೃದ್ಧಿಪಡಿಸಿ, TRADE MARK REGISTRY ಯಿಂದ ಅಧಿಕೃತವಾಗಿ ಅನುಮೋದನೆ ಪಡೆಯಲಾಗಿದ್ದು, ಅದರಂತೆ ಕನ್ನಡದಲ್ಲಿ ಝೇಂಕಾರ ಮತ್ತು ಆಂಗ್ಲ ಭಾಷೆಯಲ್ಲಿ jhenkara ಎಂಬ ನಾಮಾಂಕಿತದೊಂದಿಗೆ ಜೇನುತುಪ್ಪ ಉತ್ಪಾದಕರು ಮತ್ತು ಸಂಗ್ರಾಹಕರು ಷರತ್ತು ಮತ್ತು ನಿಬಂಧನೆಗಳೊಂದಿಗೆ ಸದರಿ ಬ್ರ‍್ಯಾಂಡ್ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಜೇನುತುಪ್ಪ […]
ಕಾರ್ಕಳ ಎಂ. ಪಿ. ಎಂ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಉಡುಪಿ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿ
ಕಾರ್ಕಳ: ಕಾರ್ಕಳ ಎಂ. ಪಿ. ಎಂ ಸ್ಮಾರಕ ಸರಕಾರಿ ಪ್ರ.ದರ್ಜೆ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಧರ್ಮಸ್ಥಳ ರತ್ನವರ್ಮ ಹೆಗಡೆ ಮೆಮೆರಿಯಲ್ ಟ್ರೋಪಿ 2024-25 ನೇ ಸಾಲಿನ ಉಡುಪಿ ವಲಯದ ಪುರುಷರ ಕಬಡ್ಡಿ ಪಂದ್ಯಾವಳಿ ಡಿ. 04 ರಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಕಳ ಎಂಪಿಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಅವರು ಮಾತನಾಡಿ, ಸರಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳಂತೆ ಸಶಕ್ತವಾಗಿ ಕ್ರೀಡಾಕೂಟ ನಡೆಸುವಲ್ಲಿ ಯಶಸ್ವಿಯಾಗಿದೆ. […]
ಉಡುಪಿ:ರೈತ ಮಹಿಳೆಯರಿಂದ ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳ ನಿಯಮಿತ ಬೆಂಗಳೂರು ಇವರ ವತಿಯಿಂದ, ಜಿಲ್ಲೆಯಲ್ಲಿರುವ ಪ.ಜಾತಿ, ಪ.ಪಂಗಡ ಹಾಗೂ ಸಾಮಾನ್ಯ ವರ್ಗದ ಅರ್ಹ ರೈತ ಮಹಿಳೆಯರಿಗೆ 5 ವಾರದ 20 ಹಿತ್ತಲ ಕೋಳಿಮರಿಗಳನ್ನು ವಿತರಿಸಿ, ಅವರ ಆದಾಯ ಹೆಚ್ಚಿಸುವ ಕಾರ್ಯಕ್ರಮ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ. ಆಸಕ್ತ ಅರ್ಹ ರೈತ ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಪಶುವೈದ್ಯ ಸಂಸ್ಥೆ ಅಥವಾ ತಾಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ […]
ನಿಮ್ಮ ಸಂಗಾತಿಯನ್ನು ಸುಲಭವಾಗಿ ಒಲಿಸಿಕೊಳ್ಳುವುದೇಗೆ? ಹೀಗೆ ಮಾಡಿದ್ರೆ ಒಲಿಯದೇ ಇರಲು ಸಾಧ್ಯವಿಲ್ಲ!
ನಿಮ್ಮ ಗಂಡ/ಹೆಂಡತಿ ಇರಬಹುದು, ಗೆಳೆಯ/ ಗೆಳತಿಯೇ ಇರಬಹುದು. ಅವ್ರನ್ನ ಒಲಿಸಿಕೊಳ್ಳೋಕೆ, ಇನ್ನೂ ಹೆಚ್ಚು ಹೆಚ್ಚು ಪ್ರೀತಿಸೋಕೆ ನಾವೇನು ಮಾಡ್ಬೋದು ನೋಡೋಣ ಬನ್ನಿ… ಪ್ರೀತಿಯ ಅಪ್ಪುಗೆ, ಸಿಹಿಮುತ್ತು, ದಿನದಲ್ಲಿ ಒಂದಷ್ಟು ಸಮಯ ಪ್ರೀತಿಯ ಮಾತು, ಕಾಳಜಿಯ ಆರೈಕೆ ಇವುಗಳನ್ನ ಖಂಡಿತಾ ನಿಮ್ಮ ಸಂಗಾತಿ ಬಯಸುತ್ತಾರೆ. ದೈಹಿಕ ಸುಖಕ್ಕಾಗಿ ಮಾತ್ರ ಸಂಗಾತಿಯಾಗಿರದೇ ಮಾನಸಿಕ ಸ್ಥೈರ್ಯ ನೀಡೋದೂ ನಿಮ್ಮ ಆದ್ಯ ಕರ್ತವ್ಯ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾದ್ರೆ ನೀವು ಅವರನ್ನು ಒಲಿಸಿಕೊಳ್ಳೋದು ಬಹಳಾ ಸುಲಭ. ಒಂದು ಸಂಬಂಧದಲ್ಲಿ ಸಂಗಾತಿಗಳ ನಡುವಿನ ನಂಬಿಕೆ […]
ಉಡುಪಿ:ಕುರಿ / ಮೇಕೆ ಘಟಕ ಅನುಷ್ಠಾನ : ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಉಡುಪಿ ವತಿಯಿಂದ ಗಿರಿಜನ ಉಪಯೋಜನೆಯಡಿ ಗ್ರಾಮೀಣ ಭಾಗದ ಪರಿಶಿಷ್ಠ ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನದೊಂದಿಗೆ 10+1 ಕುರಿ/ಮೇಕೆ ಘಟಕ ಪೂರೈಕೆ ಯೋಜನೆಯನ್ನು ಅನುಷ್ಟಾನಗೊಳಿಸಲು ಪರಿಶಿಷ್ಠ ಪಂಗಡದ 18 ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು, ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರುಗಳನ್ನು ಹಾಗೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಇಲ್ಲದೇ ಇರುವ ಜಿಲ್ಲೆ /ತಾಲೂಕು ಗಳಲ್ಲಿಯೂ ಸಹ […]