ಮಲ್ಪೆ: ಅರಬಿ ಸಮುದ್ರದಲ್ಲಿ ಭಾರೀ ಗಾಳಿ; ದಡ ಸೇರಿದ ಮೀನುಗಾರಿಕಾ ದೋಣಿಗಳು

ಉಡುಪಿ: ಫೆಂಗಲ್ ಚಂಡಮಾರುತದ ಪರಿಣಾಮ ಅರಬಿ ಸಮುದ್ರದಲ್ಲಿ ಗಾಳಿ ಒತ್ತಡ ಮತ್ತು ಅಲೆಗಳ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಡೆಸಲಾಗದೆ ದೋಣಿಗಳು ದಡ ಸೇರಿವೆ. ಬಲವಾದ ಗಾಳಿಗೆ ಸಮುದ್ರ ಮಧ್ಯೆ ದೊಡ್ಡಗಾತ್ರದ ಅಲೆಗಳು ಬರುತ್ತಿರುವುದರಿಂದ ಪರ್ಸಿನ್, ಸಣ್ಣಟ್ರಾಲ್ ಬೋಟ್ ಹಾಗೂ ನಾಡದೋಣಿಗಳು ಮೀನುಗಾರಿಕೆ ನಡೆಸಲಾಗದೆ ದಡ ಸೇರಿವೆ. ಕೆಲವು ಆಳಸಮುದ್ರದ ಬೋಟುಗಳು ಕಾರವಾರ ಸಹಿತ ಸಮೀಪದ ಬಂದರನ್ನು ಪ್ರವೇಶಿಸಿವೆ. ಈಗಾಗಲೇ ಮೀನುಗಾರಿಕೆ ಮುಗಿಸಿ ಬಂದ ಬೋಟುಗಳು ಮತ್ತೆ ಸಮುದ್ರಕ್ಕೆ ಇಳಿದಿಲ್ಲ. ಸೋಮವಾರ ಮಲ್ಪೆ ಬಂದರಿನಲ್ಲಿ ಶೇ. 100 […]

ಡಿ.6ರಂದು ಶೀರೂರು ಮಠದ ಬಾಳೆ ಮುಹೂರ್ತ

ಉಡುಪಿ: ಉಡುಪಿ ಅಷ್ಟಮಠಗಳಲ್ಲೊಂದಾದ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಶ್ರೀ ಕೃಷ್ಣಪೂಜಾ ಪರ್ಯಾಯದ ಮೊದಲ ಮುಹೂರ್ತ “ಬಾಳೆ ಮುಹೂರ್ತ’ ಡಿ. 6ರಂದು ಬೆಳಗ್ಗೆ 7 ಗಂಟೆಗೆ ಪೂರ್ಣ ಪ್ರಜ್ಞ ಕಾಲೇಜಿನ ಹಿಂಭಾಗದ ಶ್ರೀ ಶೀರೂರು ಮಠದ ತೋಟದಲ್ಲಿ ನಡೆಯಲಿದೆ ಎಂದು ಮಠದ ದಿವಾನ್ ಉದಯ ಕುಮಾರ್ ಸರಳತ್ತಾಯ ತಿಳಿಸಿದರು. ಶೀರೂರು ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀವೇದವರ್ಧನ ತೀರ್ಥರ ಪ್ರಥಮ ಶ್ರೀಕೃಷ್ಣ ಪೂಜಾ ಪರ್ಯಾಯ 2026ರ ಜ.18ರಿಂದ 2028 ಜ.17ರವರೆಗೆ ನಡೆಯಲಿದೆ. ಇದಕ್ಕೆ […]

ಉಡುಪಿ:ಜಾಗೃತಿ ವಹಿಸುವುದರಿಂದ ಮಾತ್ರ ಹೆಚ್.ಐ.ವಿ ಯಿಂದ ದೂರವಿರಲು ಸಾಧ್ಯ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಜನಸಾಮಾನ್ಯರು ಹೆಚ್.ಐ.ವಿ ರೋಗದ ಹರಡುವಿಕೆ, ಅದರಿಂದಾಗುವ ಉಂಟಾಗುವ ಪರಿಣಾಮಗಳಬಗ್ಗೆ ಅರಿವು ಹೊಂದಿ, ಅಗತ್ಯ ಎಲ್ಲಾ ರೀತಿಯಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಿದ್ದಲ್ಲಿ ಮಾತ್ರ ಈ ರೋಗದಿಂದ ದೂರವಿರಲು ಸಾಧ್ಯ.ಇದಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಸೋಮವಾರ ನಗರದ ಅಂಬಲಪಾಡಿ ಪ್ರಗತಿಸೌಧ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, […]

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು-ಆರೂರು ಸುಕೇಶ್ ಶೆಟ್ಟಿ ನ್ಯಾಯವಾದಿ,ಉಡುಪಿ.

ಗೆಲ್ಲುವ ಪ್ರಕರಣಗಳ ಸಂಖ್ಯೆಯ ಆಧಾರದಲ್ಲಿ ವಕೀಲರ ಯಶಸ್ಸನ್ನು ಅಳೆಯಲಾಗುವುದಿಲ್ಲ. ಅವರುಗಳು ಸಮಾಜಕ್ಕೆ ನೀಡಿದ ಕೊಡುಗೆಯು ಮುಖ್ಯ. ಬಡವರು, ದಮನಿತರ ಪರವಾಗಿ ನ್ಯಾಯಕ್ಕಾಗಿ ಸ್ವಾರ್ಥವಿಲ್ಲದೇ ಹೋರಾಡಿದವನೇ ನಿಜವಾಗಿಯೂ ಯಶ್ವಸಿ ವಕೀಲ. ಈ ಮಾತುಗಳನ್ನು ಕರಿಕೋಟು ಹಾಕಿದ ಆರಂಭದ ದಿನಗಳಲ್ಲಿ ನನ್ನ ಗುರುಗಳು ನನಗೆ ಹೇಳುತ್ತಿದ್ದ ನೆನಪು. ಅನೇಕರಿಗೆ ಇಂದಿಗೂ ನ್ಯಾಯವಾದಿ ಹಾಗು ವಕೀಲ ವೃತ್ತಿಯ ಬಗೆಗೆ ತಪ್ಪು ಕಲ್ಪನೆಗಳಿರುವುದು ನಗ್ನ ಸತ್ಯ. ಇವೆಲ್ಲದರ ಜೊತೆಗೆ ಕಾನೂನು ಕ್ಷೇತ್ರದ ಆಳ, ಅಗಲ, ಅವಕಾಶಗಳ ಬಗೆಗೆ ಸಾರ್ವಜನಿಕರಿಗೆ, ಯುವಪೀಳಿಗೆಯ ವಕೀಲರಿಗೆ, ವಕೀಲರಾಗಲು […]

ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿ ಕಾರ್ಯಾಗಾರ : ಸಮಾರೋಪ ಸಮಾರಂಭ

ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ರಾಜ್ಯ ಶಾಸ್ತ್ರವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರೇರಣಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಕುರಿತು ಉಚಿತ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು ರವಿವಾರ ಅಜ್ಜರಕಾಡು ನಗರ ಕೇಂದ್ರ ಗ್ರಂಥಾಲಯ ಇಲ್ಲಿಯ ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ನಡೆಯಿತು. […]