ತಡ ಮಾಡದೇ ಬನ್ನಿ ಕೌಶಲ್ಯದ ಮೂಲಕ ಉದ್ಯೋಗ ಪಡೆಯಿರಿ:ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿದೆ ಉದ್ಯೋಗಾಧಾರಿತ ಕೋರ್ಸ್
ಕ್ಷಣ ಕ್ಷಣಕ್ಕೂ, ಪ್ರತಿದಿನವೂ ತಂತ್ರಜ್ಞಾನ ಬದಲಾವಣೆಯ ಹಾದಿ ಹಿಡಿದಿರುವ ಈ ಆಧುನಿಕ ಕಾಲಘಟ್ಟದಲ್ಲಿ ನಾವೆಷ್ಟೇ ಅಪ್ಡೇಟ್ ಇದ್ರೂ, ಸಾಲುವುದಿಲ್ಲ. ಇಂತಹದ್ದರಲ್ಲಿ ನಮ್ಮಲ್ಲಿರುವ ಕೌಶಲ್ಯ, ಬದಲಾವಣೆಗೆ ತೆರೆದುಕೊಂಡು ಅಳವಡಿಸಿಕೊಳ್ಳುವ ಗುಣ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯುವಜನತೆಯನ್ನು ಕೌಶಲ್ಯಯುಕ್ತ ರನ್ನಾಗಿಸಲು ಬಹುವಾಗಿ ಶ್ರಮಿಸುತ್ತಿದೆ ಮಣಿಪಾಲಿನ “ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ”( MSDC). ಈ ಸಂಸ್ಥೆ ಚೆನ್ನೈನ CADD ಕೇಂದ್ರದ ಸಹಯೋಗದೊಂದಿಗೆ, ಈ ಕಾಲದ ತುರ್ತಿಗೆ ಅನುಗುಣವಾಗಿ ಎರಡು ಕೋರ್ಸ್ಗಳನ್ನು ನೀಡುತ್ತಿದೆ. “EV ತಂತ್ರಜ್ಞಾನದಲ್ಲಿ ಕಾರ್ಯನಿರ್ವಾಹಕ ಡಿಪ್ಲೊಮಾ” ಇದು 6 ತಿಂಗಳುಗಳು […]
ನಾಡಿನ ಸಮಸ್ತ ವಕೀಲ ಬಾಂಧವರಿಗೆ ವಕೀಲ ದಿನಾಚರಣೆಯ ಪ್ರಯುಕ್ತ ಶುಭ ಕೋರುವವರು
ಪ್ರವಾಸಿಗರಿಗೂ ತಟ್ಟಿದ ಸೈಕ್ಲೋನ್ ಎಫೆಕ್ಟ್: ಮಲ್ಪೆ ಬೀಚ್ ವೀಕ್ಷಣೆಗೆ ಬಂದ ಪ್ರವಾಸಿಗರಿಗೆ ನಿರಾಸೆ
ಉಡುಪಿ: ಫೆಂಗಲ್ ಚಂಡಮಾರುತದ ಎಫೆಕ್ಟ್ ಉಡುಪಿ ಜಿಲ್ಲೆಗೆ ಬರುವ ಪ್ರವಾಸಿಗರಿಗೂ ತಟ್ಟಿದೆ. ಸೈಕ್ಲೋನ್ ನಿಂದ ಸಮುದ್ರದ ಅಲೆಗಳು ಅಬ್ಬರಿಸುತ್ತಿವೆ. ಹೀಗಾಗಿ ಮಲ್ಪೆ ಬೀಚ್ ಆಗಮಿಸಿದ ಪ್ರವಾಸಿಗರು ದೂರದಲ್ಲೇ ನಿಂತು ವೀಕ್ಷಣೆ ಮಾಡುತ್ತಿದ್ದಾರೆ. ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹೀಗಾಗಿ ಮಲ್ಪೆ ಬೀಚ್ ನಲ್ಲಿ ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಗಳು ಎಚ್ಚರಿಕೆ ನೀಡುತ್ತಿದ್ದಾರೆ. ಮಲ್ಪೆ ಬೀಚಿಗೆ ಬಂದವರನ್ನು ಬಂದ ದಾರಿಯಲ್ಲಿಯೇ ವಾಪಸ್ಸು ಕಳುಹಿಸಲಾಗುತ್ತುದೆ. ಮಲ್ಪೆ ಬೀಚ್ ವೀಕ್ಷಣೆಗೆ ಬಂದ ಪ್ರವಾಸಿಗರು ನಿರಾಸೆಯಿಂದ ವಾಪಸ್ಸು ಹೋಗುತ್ತಿದ್ದಾರೆ.
ಉಡುಪಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ, ಹಿಂದೂ ಮುಖಂಡರ ಬಂಧನ ಖಂಡಿಸಿ ನಾಳೆ (ಡಿ.4) ಪ್ರತಿಭಟನೆ
ಉಡುಪಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ಹಾಗೂ ಸ್ವಾಮೀಜಿ, ಹಿಂದೂ ಮುಖಂಡರ ಬಂಧನ ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಡಿ.4ರಂದು ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ರಾಧಾಕೃಷ್ಣ ಮೆಂಡನ್ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಪ್ರತಿಭಟನಾ ಜಾಥ ಆರಂಭಗೊಳ್ಳಲಿದೆ. ಜಾಥವು ಕೋರ್ಟ್ ರಸ್ತೆ, ಕೆ.ಎಮ್.ಮಾರ್ಗ, ಸರ್ವೀಸ್ ರಸ್ತೆ, ಸಿಟಿ ಬಸ್ ನಿಲ್ದಾಣ, […]
ಬ್ರಹ್ಮಾವರ: ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿ
ಉಡುಪಿ: ಫೆಂಗಲ್ ಚಂಡಮಾರುತ ಭಾರೀ ಅನಾಹುತಗಳನ್ನು ಉಂಟು ಮಾಡಿದೆ. ಸೋಮವಾರ ಸಂಜೆ ಪ್ರಾರಂಭಗೊಂಡ ಮಳೆ ಉಡುಪಿ ಜಿಲ್ಲೆಯಲ್ಲಿ ಈಗಲೂ ಮುಂದುವರೆದಿದೆ. ನಿನ್ನೆಯ ಅಬ್ಬರದ ಮಳೆಗೆ ಸಿಡಿಲು ಬಡಿದು ಮನೆಗೆ ಹಾನಿಯುಂಟಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಸೊಣಗಾರ ಬೆಟ್ಟು ಎಂಬಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ನೀಲಾವರ ಸಮೀಪದ ಸೊಣಗಾರಬೆಟ್ಟು ರಾಧು ಶೆಡ್ತಿಯವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್‌ಉಪಕರಣಗಳಿಗೆ ಹಾನಿಯುಂಟಾಗಿದ್ದು, ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಇನ್ನು ರಾತ್ರಿಯಿಂದ ಹಲವೆಡೆ ವಿದ್ಯುತ್ […]