ಉಡುಪಿ:ತ್ರಿಶಾ ಸ್ಕಾಲರ್ ಶಿಪ್ ಪರೀಕ್ಷೆ: ಡಿ.11 ರಂದು ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಉಚಿತ ಸ್ಕಾಲರ್ ಶಿಪ್ ಪರೀಕ್ಷೆ

ಉಡುಪಿ:ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೂ ಒತ್ತು ನೀಡುತ್ತಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿರುವ ತ್ರಿಶಾ ಸಂಸ್ಥೆಯ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ “ತ್ರಿಶಾ ಸ್ಕಾಲರ್ ಶಿಪ್ ಪರೀಕ್ಷೆ” (TST) ಉಚಿತವಾಗಿ ಆನ್ಲೈನ್ ಮೂಲಕ ಡಿಸೆಂಬರ್ 11 ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಅನುಭವ ಪಡೆಯಲು ಬಯಸುವ ವಾಣಿಜ್ಯ ವಿಭಾಗದಲ್ಲಿ ಪ್ರಸ್ತುತ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿರುವ ಆಸಕ್ತ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು. ಈ ಪರೀಕ್ಷೆಯು […]

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಪ್ರತ್ಯಕ್ಷವಾದ ಕಾಡಾನೆ;ಜನರಲ್ಲಿ ಆತಂಕ ಸೃಷ್ಟಿ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲೇ ಕಾಡಾನೆ ಓಡಾಟ ನಡೆಸಿದ ಘಟನೆ ರವಿವಾರ ಸಂಜೆ ವೇಳೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಸಮೀಪದ ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಈ ಒಂಟಿ ಸಲಗ ಆಗಮಿಸಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಯನ್ನು ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯ ವ್ಯಾಸಮಂದಿರ ಬಳಿಯಿಂದ ಸುಬ್ರಹ್ಮಣ್ಯ ಮಠದ ಸಮೀಪದ ಮೂಲಕ ಸಂಚರಿಸಿ, ಮತ್ತೆ ಅರಣ್ಯ ಭಾಗಕ್ಕೆ ತೆರಳಿದೆ. ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಕಾಡಾನೆ […]

ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಪಲ್ಟಿ; ಅಪಘಾತದಲ್ಲಿ ಐಪಿಎಸ್ ಅಧಿಕಾರಿ ಮೃತ್ಯು

ಹಾಸನ: ಟಯರ್‌ ಸ್ಫೋಟಗೊಂಡ ಪರಿಣಾಮ ಪೊಲೀಸ್‌ ಜೀಪ್‌ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು ಸಾವಿಗೀಡಾದ ಘಟನೆ ಹಾಸನದಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಮಧ್ಯಪ್ರದೇಶ ಮೂಲದ ಹರ್ಷವರ್ಧನ ಎಂದು ಗುರುತಿಸಲಾಗಿದೆ. ಮೈಸೂರಿನ ಕೆಪಿಎನಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಹರ್ಷವರ್ಧನ ಅವರು ಹಾಸನ ಜಿಲ್ಲೆಗೆ ನಿಯೋಜನೆ ಗೊಂಡಿದ್ದರು. ಭಾನುವಾರ ಸಂಜೆ ವರದಿ ಮಾಡಿಕೊಳ್ಳಲು ಹೊಳೆನರಸೀಪುರ ಕಡೆಯಿಂದ ಜೀಪ್‌ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದರು. ಇನ್ನೇನು ಕೆಲವೇ […]

ಉಡುಪಿ: ವಕ್ಫ್ ಮಹಾಮಾರಿಯಿಂದ ಹಿಂದೂ ಸಮಾಜ ಕತ್ತಲೆಗೆ: ಶ್ರೀಕಾಂತ ಕಾಮತ್

ಉಡುಪಿ: ಕಾಂಗ್ರೆಸ್ ನೇತೃತ್ವದ ಸರಕಾರ ಬಂದಾಗಲೆಲ್ಲಾ ವಕ್ಪ್ ಎನ್ನುವ ಮಹಾಮಾರಿ ಎಲ್ಲೆಡೆಯೂ ವಕ್ಕರಿಸಿಕೊಳ್ಳುತ್ತಿದೆ.ವಕ್ಫ್ ದೇಶದ ಏಕತೆಯನ್ನು ನುಚ್ಚುನೂರು ಮಾಡಿದೆ. ಬುದ್ಧಿಜೀವಿಗಳೇ ಹೂಡಿದ ವ್ಯವಸ್ಥಿತ ಪಿತೂರಿ ಇದಾಗಿದೆ ಎಂದು‌ ಹೀರೆಬೆಟ್ಟ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಕಾಮತ್ ರೈತಮೋರ್ಚಾ ಉಡುಪಿ ಜಿಲ್ಲೆ ಇವರು ತಿಳಿಸಿದ್ದಾರೆ. ವಕ್ಫ್ ಎನ್ನುವ ವ್ಯವಸ್ಥೆ ಹಿಂದೂ ಸಮಾಜವನ್ನು ಕತ್ತಲೆಗೆ ದೂಡಿದೆ. ಇದು ಕಾಂಗ್ರೆಸ್ ಜನತೆಗೆ ಎಸೆದ ದ್ರೋಹವಾಗಿದೆ. ಈ ಮೋಸದ ಕಾನೂನನ್ನು ,ವಿದೇಯಕವನ್ನು ಹಿಂದೂಸಮಾಜ ಗಂಭೀರವಾಗಿ ಪರಿಗಣಿಸುವ ಮೂಲಕ ತಮ್ಮ ತಮ್ಮ ಜಮೀನು ಪಹಣಿಗಳನ್ನ ಪರಿಶೀಲಿಸಬೇಕಿದೆ […]