ಕಾರ್ಕಳ ರಂಗಾಯಣದಲ್ಲಿ ಕಾಡಿದಳು “ಸುಬ್ಬಮ್ಮ”ಈ ನಾಟಕ ನೋಡುವ ಅವಕಾಶ ಸಿಕ್ಕರೆ ಮಿಸ್ ಮಾಡ್ಕೊಬೇಡಿ!
ಬರಹ: ಸುವರ್ಚಲಾ ಬಿ.ಸಂ. ಒಂದಷ್ಟು ದಿನ ತಣ್ಣಗಿದ್ದ ಕಾರ್ಕಳದ ಯಕ್ಷರಂಗಾಯಣ ಈಗ ಹೊಸ ನಿರ್ದೇಶಕರಾದ ವೆಂಕಟರಮಣ ಐತಾಳ್ ನೇತೃತ್ವದಲ್ಲಿ ಮತ್ತೆ ಸದ್ದುಮಾಡತೊಡಗಿದೆ. ಕಾರ್ಕಳದ ರಂಗಾಸಕ್ತರ ಮನದಣಿಸಲು “ತಿಂಗಳ ನಾಟಕ” ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳು ಬೇರೆ ಬೇರೆ ತಂಡಗಳನ್ನು ಕರೆಸಿ ನಾಟಕ ಮಾಡಿಸುವ ಮೂಲಕ ಮೊದಲ ಹೆಜ್ಜೆಯನ್ನಿಟ್ಟಿದೆ. ನವೆಂಬರ್ ತಿಂಗಳ ಕೊನೆಯ ದಿನ ತಣ್ಣನೆ ಮುಸ್ಸಂಜೆಯಲಿ ನಕ್ಷತ್ರಗಳ ಬೆಳಕಿನಲಿ ಪ್ರಸ್ತುತಿಯಾದ ನಾಟಕ ಕುವೆಂಪು ಅವ್ರ ಕಾನೂರು ಹೆಗ್ಗಡತಿ ಕಾದಂಬರಿಯ ಮುಖ್ಯಪಾತ್ರ ಸುಬ್ಬಮ್ಮಳನ್ನು ಬಿಂಬಿಸುವ ಏಕವ್ಯಕ್ತಿ ನಾಟಕ “ಸುಬ್ಬಮ್ಮ”. […]
ಉಡುಪಿ: ಪುಸ್ತಕ ಓದುವ ಸಂಸ್ಕೃತಿ ಮುಂದುವರಿಯಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ
ಉಡುಪಿ: ಡಿಜಿಟಲ್ ಮಾಧ್ಯಮಗಳಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೈಯಲ್ಲಿ ಪುಸ್ತಕ ಹಿಡಿದು ಓದುವಾಗ ಲಭಿಸುವ ಸಂತಸ ಮೊಬೈಲ್ ನೋಡಿ ಓದುವಾಗ ಲಭಿಸದು. ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರೂ ಸಹ ಪುಸ್ತಕ ಓದುವ ಮೂಲಕ ಸಂಸ್ಕೃತಿ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆಶಯ ವ್ಯಕ್ತಪಡಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ‘ಮನೆಯೇ ಗ್ರಂಥಾಲಯ’ ಅಭಿಯಾನದ 125ನೇ ಕೇಂದ್ರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲಾಡಳಿತದಲ್ಲಿ ಎಲ್ಲ […]
ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ : ಯಶ್ ಪಾಲ್ ಸುವರ್ಣ
ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೇರೂರಿನಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತರಗತಿ ಕೊಠಡಿಗಳ ಶಿಲಾನ್ಯಾಸ ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೆರವೇರಿಸಿದರು. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಅವರು, ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಶಾಲೆಯ ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಮನವಿಯ ಮೇರೆಗೆ 2 ಕೊಠಡಿಗಳನ್ನು 20 ಲಕ್ಷ ವೆಚ್ಚದಲ್ಲಿ ಶಾಸಕರ ನಿಧಿ ಹಾಗೂ ದಾನಿಗಳ ಸಹಕಾರದಿಂದ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ “ಆಶಾ ನಿಲಯ” ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ
ಬಂಟಕಲ್:ಬಂಟಕಲ್ ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜಿನ “ಆಸರೆ” ಸಮಾಲೋಚನ ಘಟಕದ ವತಿಯಿಂದ ಉಡುಪಿಯ “ಆಶಾನಿಲಯ” ವಿಶೇಷ ಚೇತನ ಮಕ್ಕಳ ಶಾಲೆಗೆ ದಿನಾಂಕ 30 ನವೆಂಬರ್ 2024 ರಂದು ಭೇಟಿ ನೀಡಿದರು. ಈ ಭೇಟಿಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷಚೇತನ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ತಿಳಿದುಕೊಂಡರು. ಆಶಾ ನಿಲಯದ ಮಕ್ಕಳಿಗಾಗಿ ವಿದ್ಯಾರ್ಥಿಗಳು ನೃತ್ಯ, ಸಂಗೀತ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಕ್ಕಳನ್ನು ರಂಜಿಸಿದರು. ಈ […]
ಉಡುಪಿ:ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ‘ಚೋಯ್ಸ್ ಗೋಲ್ಡ್’ನ 7ನೇ ಶಾಖೆ ಉಡುಪಿಯಲ್ಲಿ ಶುಭಾರಂಭ.
ಉಡುಪಿ: ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ ‘ಚೋಯ್ಸ್ ಗೋಲ್ಡ್’ ಚಿನ್ನಾಭರಣದ 7ನೇ ವಿಶಾಲವಾದ ನೂತನ ಮಳಿಗೆ ಸೋಮವಾರ ಉಡುಪಿಯ ಜಾಮಿಯಾ ಮಸೀದಿ ರಸ್ತೆಯ ಮಾರುತಿ ವೀಥಿಕಾದ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಚಿನ್ನ, ವಜ್ರ, ಬೆಳ್ಳಿ, ವಾಚ್‌ಗಳ ಅಗಾಧ ಸಂಗ್ರಹದೊಂದಿಗೆ ಆರಂಭಿಸಿರುವ ‘ಚೋಯ್ಸ್ ಗೋಲ್ಡ್’ ನಗರದ ಹೃದಯ ಭಾಗದಲ್ಲಿ ಆರಂಭಗೊಳ್ಳುವ ಮೂಲಕ ಉಡುಪಿ ಜನರಿಗೆ ಕೈಗೆಟುಕುವ ದರದಲ್ಲಿ ಚಿನ್ನಾಭರಣಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಸ್ವರ್ಣ ಪ್ರಿಯರನ್ನು ಆಕರ್ಷಿಸುವ ರೀತಿಯಲ್ಲಿ ವಿನೂತನವಾಗಿ ರೂಪುಗೊಂಡಿರುವ ವಿಶಾಲವಾದ ನೂತನ […]