ನಾಳೆ ಉಡುಪಿಯಲ್ಲಿ ‘ಚೋಯ್ಸ್ ಗೋಲ್ಡ್’ ಚಿನ್ನಾಭರಣದ ನೂತನ ವಿಶಾಲ ಮಳಿಗೆ ಶುಭಾರಂಭ; ಉದ್ಘಾಟನೆ ದಿನ ಗ್ರಾಹಕರಿಗೆ ಆಫರ್’ಗಳ ಸುರಿಮಳೆ
ಉಡುಪಿ: ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಸಾಂಪ್ರದಾಯಿಕ ಆಭರಣಗಳಿಗೆ ಹೆಸರುವಾಸಿಯಾಗಿರುವ ‘ಚೋಯ್ಸ್ ಗೋಲ್ಡ್’ ಚಿನ್ನಾಭರಣದ 7ನೇ ವಿಶಾಲವಾದ ನೂತನ ಮಳಿಗೆ ನಾಳೆ(ಡಿಸೆಂಬರ್ 2ರಂದು) ಉಡುಪಿಯ ಜಾಮಿಯಾ ಮಸೀದಿ ರಸ್ತೆಯ ಮಾರುತಿ ವೀಥಿಕಾದ ವಿ.ಕೆ.ಪ್ಯಾರಡೈಸ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ.ಮಂಗಳೂರು, ಮುಡಿಪು, ವಿಟ್ಲಾ, ಮಜರ್ಪಲ್ಲ(ಕೇರಳ) , ಸೀತಂಗೋಳಿ(ಕೇರಳ), ಸೇರಿದಂತೆ 6 ಕಡೆಗಳಲ್ಲಿ ತನ್ನ ವಿಶಾಲವಾದ ಮಳಿಗೆಯನ್ನು ಹೊಂದಿರುವ ‘ಚೋಯ್ಸ್ ಗೋಲ್ಡ್’, ಇದೀಗ ಉಡುಪಿಯ ಗ್ರಾಹಕರಿಗೆ 100%ರಷ್ಟು 916 BIS-HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣ, […]
ಕನ್ನಡದ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು.
ಕನ್ನಡದ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶೋಭಿತಾ ಶಿವಣ್ಣ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರದವರು ಜೀ ಕನ್ನಡದ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಶೋಭಿತಾ ಶಿವಣ್ಣ ಕಳೆದ ವರ್ಷ ಮದುವೆ ಮಾಡಿಕೊಂಡಿದ್ದು, ಕಿರುತೆರೆಯಿಂದ ದೂರವಾಗಿ ಹೈದರಾಬಾದ್ ನಲ್ಲಿ ವಾಸವಾಗಿದ್ದರು. ಆದರೆ, ಮಧ್ಯರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ […]
ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ನ್ಯಾಸ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಆಯ್ಕೆ
2024 ನವೆಂಬರ್ ತಿಂಗಳ 27 ರಂದು ಮಥುರಾ ಬೃಂದಾವನದಲ್ಲಿ ನಡೆದ ಅಂತರಾಷ್ಟ್ರೀಯ ಧರ್ಮ ಸಂಸದ್‌ನಲ್ಲಿ ಕರ್ನಾಟಕದ ಸಂತರ ಪರವಾಗಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಭಾಗವಹಿಸಿದರು. ಗುರೂಜಿಯವರು ಸನಾತನ ಹಿಂದೂ ಧರ್ಮದ ಜಾಗೃತಿ ಹಾಗೂ ಸಂಘಟನಾ ಸೇವೆಗಳನ್ನು ಆಧಾರವಾಗಿ ಇಟ್ಟು ಗುರೂಜಿಯವರನ್ನು ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ನ್ಯಾಸ್‌ನ ಕರ್ನಾಟಕದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಖಚಿತ ಪತ್ರವನ್ನು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಮಹೇಂದರ್ ಪ್ರತಾಪ್ ಸಿಂಗ್ ರವರು ಕಳುಹಿಸಿರುತ್ತಾರೆ ಎಂದು ಮಠದ ಪ್ರಕಟನೆ […]
ಜಿಲ್ಲಾ ಪ್ರಗತಿ ಪರಿಶೀಲನೆ ಅಲ್ಲ, ಕಾಂಗ್ರೆಸ್ ಪರಿಶೀಲನಾ ಸಭೆ
ಉಡುಪಿ: ಜಿಲ್ಲೆಯ ಬಗ್ಗೆ ಆಸಕ್ತಿಯೇ ಇಲ್ಲದ, ಸ್ಪಷ್ಟತೆ ಇಲ್ಲದ, ಅಭಿವೃದ್ಧಿ ಬಗ್ಗೆ ದಿಕ್ಸೂಚಿ ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವರು ಬರೋಬ್ಬರಿ 11 ತಿಂಗಳ ಬಳಿಕ ನಡೆಸಿದ ತ್ರೈಮಾಸಿಕ ಕೆಡಿಪಿ ಸಭೆ ಖೇಧಕರ. ಇದು ಜಿಲ್ಲೆಯಲ್ಲಿ ಯಾವುದೇ ಪ್ರಗತಿಯೇ ಇಲ್ಲದೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಾಗಿದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐವರು ಬಿಜೆಪಿ ಶಾಸಕರ ಪರವಾಗಿ ಸುನಿಲ್ ಕುಮಾರ್ […]
ಶಂಕರನಾರಾಯಣ: ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು
ಉಡುಪಿ: ಡ್ಯಾಂಗೆ ಈಜಲು ಹೋಗಿದ್ದ ಇಬ್ಬರು ಬಾಲಕರು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಬೆಳ್ವೆ ಸಮೀಪದ ಗುಮ್ಮಲ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ಶ್ರೀಶ (13) ಹಾಗೂ ಜಯಂತ್ (19) ಎಂದು ಗುರುತಿಸಲಾಗಿದೆ. ಶ್ರೀಶ ಹೆಬ್ರಿಯ ಎಸ್‌ಆರ್‌ಎಸ್ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯಾಗಿದ್ದನು.ಒಟ್ಟು ನಾಲ್ಕು ಮಂದಿ ಬಾಲಕರು ರಜೆಯ ಹಿನ್ನೆಲೆಯಲ್ಲಿ ಮನೆ ಸಮೀಪದ ಡ್ಯಾಂಗೆ ಈಜಲು ಹೋಗಿದ್ದರು. ಈ ವೇಳೆ ಶ್ರೀಶ ಹಾಗೂ ಜಯಂತ್ ಅಕಸ್ಮಿಕ ವಾಗಿ […]