ಮಣಿಪಾಲ: ಡಿಸೆಂಬರ್ 4 ರಿಂದ MSDCಯಲ್ಲಿ ‘ವರ್ಚುವಲ್ ರಿಯಾಲಿಟಿ’ ಕೋರ್ಸ್ ಪ್ರಾರಂಭ.
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಘಟಕ), ವರ್ಚುವಲ್ ರಿಯಾಲಿಟಿ ಸೆಂಟರ್’ನಲ್ಲಿ ‘ವರ್ಚುವಲ್ ರಿಯಾಲಿಟಿ’ ಕೋರ್ಸ್ ಡಿಸೆಂಬರ್ 4ರಿಂದ ಪ್ರಾರಂಭವಾಗಲಿದೆ. (ಒಂದರಿಂದ ಮೂರು ತಿಂಗಳವರೆಗೆ ಹೊಂದಿಕೊಳ್ಳುವ ಸಮಯಗಳು ಇವೆ.) ಆರ್ಕಿಟೆಕ್ಚರಲ್ ಮತ್ತು ಇಂಟೀರಿಯರ್ ದೃಶ್ಯೀಕರಣ/ನಿರ್ಮಾಣ ಉದ್ಯಮಕ್ಕಾಗಿ ವರ್ಚುವಲ್ ರಿಯಾಲಿಟಿ ಕುರಿತು ಸಮಗ್ರ ಕೋರ್ಸ್ ಇದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:9448159810ವರ್ಚುವಲ್ ರಿಯಾಲಿಟಿ ಸೆಂಟರ್, ಎಂಎಸ್ ಡಿಸಿ ಕಟ್ಟಡ, ಈಶ್ವರ್ ನಗರ, ಮಣಿಪಾಲ
ಕುಂದಾಪುರ: ತೆಂಗಿನ ಮರದಿಂದ ಬಿದ್ದು ಯುವಕ ಮೃತ್ಯು
ಕುಂದಾಪುರ: ಯಡಮೊಗ್ಗೆ ಗ್ರಾಮದ ತಟ್ಟೆಗುಳಿ ಎಂಬಲ್ಲಿ ತೆಂಗಿನ ಮರದಿಂದ ಅಕಸ್ಮಿಕವಾಗಿ ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಯಡಮೊಗ್ಗೆ ಗ್ರಾಮದ ಕುಶಲ (38) ಎಂದು ಗುರುತಿಸಲಾಗಿದೆ. ಇವರು ನ.21ರಂದು ತಟ್ಟೆಗುಳಿ ರಾಮ ಎಂಬವರ ತೋಟದಲ್ಲಿ ತೆಂಗಿನ ಮರದಿಂದ ಕಾಯಿಯನ್ನು ಕೊಯ್ದು, ಹೆಡೆಯನ್ನು ಮುರಿಯುತ್ತಿರುವಾಗ ಆಕಸ್ಮಿಕವಾಗಿ ಕೈತಪ್ಪಿ ಕೆಳಕ್ಕೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನ.29 ರಂದು ಬೆಳಗ್ಗೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ […]
ಉಡುಪಿ: ಪತ್ನಿ ನಿಧನದ ಬೆನ್ನಲ್ಲೇ ಆಘಾತದಿಂದ ಪತಿ ಮೃತ್ಯು
ಉಡುಪಿ: ಪತ್ನಿ ಮೃತಪಟ್ಟ ಒಂದು ದಿನದಲ್ಲೇ ಅವರ ಪತಿ ಕೂಡ ಆಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಲಾರೆನ್ಸ್ ಡೆಸಾ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಗುರುವಾರ ಅಸೌಖ್ಯದಿಂದಾಗಿ ಮನೆಯಲ್ಲೇ ಮೃತಪಟ್ಟಿದ್ದರು. ಪತ್ನಿಯ ಸಾವಿನಿಂದ ಆಘಾತಕ್ಕೊಳಗಾದ ಪತಿ ಲಾರೆನ್ಸ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇವರೂ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ […]
ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಲಕ್ಷದೀಪೋತ್ಸವ ಹಾಗೂ ಬೀದಿ ಉರುಳು ಸೇವೆ ಆರಂಭ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು(ನ.30) ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಲಕ್ಷದೀಪೋತ್ಸವ ನೆರವೇರಲಿದೆ. ಶ್ರೀ ದೇವರ ಚಂದ್ರ ಮಂಡಲ ರಥೋತ್ಸವ ನಡೆಯಲಿದ್ದು, ಈ ಸಂದರ್ಭ ದೇಗುಲ ಸಹಿತ ಗೋಪುರದ ಬಳಿಯಿಂದ ಕಾಶಿಕಟ್ಟೆ ತನಕ ಹಾಗೂ ಆದಿ ಸುಬ್ರಹ್ಮಣ್ಯ ದೇಗುಲ ಪರಿಸರದಲ್ಲಿ ಲಕ್ಷದೀಪಗಳು ಬೆಳಗಲಿವೆ. ಸುಮಾರು 120 ತಂಡಗಳಿಂದ ಅಖಂಡ ಕುಣಿತ ಭಜನೆ ಸೇವೆ ನೆರವೇರಲಿದೆ. ಸಂಜೆ 6ರಿಂದ ರಾತ್ರಿ 8ರ ತನಕ ಕುಣಿತ ರಥೋತ್ಸವದ ಮೊದಲು ಭಜನೆ ನಡೆಯಲಿದೆ. ರಾಜಗೋಪುರದ ಬಳಿಯಿಂದ ರಥಬೀದಿ ಮತ್ತು ಅಡ್ಡಬೀದಿಯಲ್ಲಿ […]
ಅಂಚೆ ಇಲಾಖೆಯಲ್ಲಿದೆ ನಿಮ್ಮ ಪ್ರತಿಭೆ ಪರೀಕ್ಷಿಸುವ ಸ್ಪರ್ಧೆ-ಕೂಡಲೇ ಪತ್ರ ಬರೀರಿ
ಹಿಂದೊಂದು ಕಾಲ ಇತ್ತು, ಅಂಚೆ ಅಣ್ಣ ಮನೆ ಬಾಗಿಲಿಗೆ ಬಂದು ನಿಮಗೊಂದು ಪತ್ರ ಬಂದಿದೆ ಅಂದ್ರೆ ಮನೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಅದೇನೋ ಕುತೂಹಲ, ತೆರೆದು ಓದಿ ಮುಗ್ಸೋವರೆಗೂ ಕಾಯುವ ತಾಳ್ಮೆ ಇರ್ತಿರ್ಲಿಲ್ಲ. ಆದ್ರೆ ಈಗ ಪತ್ರ ಬರವಣಿಗೆ ಕಡಿಮೆಯಾದ್ರೂ ಎಲ್ಲೋ ಮೂಲೆಯಲ್ಲಿ ಪತ್ರ ಬರೆಯುವವರು ಇನ್ನೂ ಕೆಲವೊಬ್ರು ಸಿಗ್ತಾರೆ ಅನ್ನೋದೇ ಸಣ್ಣ ಖುಷಿ. ನಿಮ್ಗೂ ಪತ್ರ ಬರೆಯೋ ಆಸಕ್ತಿ ಇದ್ರೆ ಖಂಡಿತಾ ಇಲ್ನೋಡಿ… ಅಂಚೆ ಇಲಾಖೆಯವ್ರು ನಿಮ್ಮನ್ನ ಪ್ರೋತ್ಸಾಹಿಸಲಿಕ್ಕೆ ಅಂತನೇ “ಢಾಯಿ ಆಖರ್” ಅನ್ನೋ ಸ್ಪರ್ಧೆ […]