ಉಡುಪಿ:ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ : ನಿಷೇಧಾಜ್ಞೆ ಜಾರಿ
ಉಡುಪಿ: 2023 ರ ಡಿಸೆಂಬರ್ ಮಾಹೆಯಿಂದ 2025 ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಜಿಲ್ಲೆಯ ಕುಂದಾಪುರ ತಾಲೂಕಿನ 45-ಗಂಗೊಳ್ಳಿ ಗ್ರಾಮ ಪಂಚಾಯತಿಯ 33 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸುವಂತೆ ವೇಳಾಪಟ್ಟಿಯನ್ನು ನಿಗಧಿಪಡಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು, ಆಯೋಗದ ನಿರ್ದೇಶನದಂತೆ ಡಿಸೆಂಬರ್ 8 ರಂದು ಮತದಾನ ನಡೆಯಲಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ, ಭಾರತೀಯ ನಾಗರಿಕ ಸುರಕ್ಷಾ […]
ಉಡುಪಿ:ವ್ಯಕ್ತಿ ನಾಪತ್ತೆ
ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುದಿ ಗ್ರಾಮದ ಕೊಂಡಾಡಿ ದರ್ಖಾಸು ನಿವಾಸಿ ವಾಸು ನಾಯ್ಕ್ (58) ಎಂಬ ವ್ಯಕ್ತಿಯು 2024 ರ ಏಪ್ರಿಲ್ 18 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆ ಪಿ.ಎಸ್.ಐ ಮೊ.ನಂ: 9480805452 ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕರ […]
ಮಣಿಪಾಲ: ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆ ಶವವಾಗಿ ಪತ್ತೆ; ಚಿರತೆ ದಾಳಿ ನಡೆಸಿರುವ ಶಂಕೆ.!
ಉಡುಪಿ: ಮಣಿಪಾಲ ಸರಳೇಬೆಟ್ಟುವಿನ ನೆಹರು ನಗರದಲ್ಲಿ ಗುರುವಾರ ಸಂಜೆ ಹಸುಗಳಿಗೆ ಹುಲ್ಲು ತರಲೆಂದು ಗುಡ್ಡಕ್ಕೆ ತೆರಳಿದ್ದ ವೃದ್ಧೆಯೋರ್ವರು ಇಂದು ಬೆಳ್ಳಿಗ್ಗೆ ಮನೆಯ ಎದುರಿನ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹ ಮೇಲೆ ಗಾಯದ ಕುರುಹುಗಳಿದ್ದು, ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಸರಳೇಬೆಟ್ಟುವಿನ ನೆಹರು ನಗರ ನಿವಾಸಿ ಪುಷ್ಪಾ ನಾಯ್ಕ್ (66) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ಹಸುಗಳಿಗೆ ಹುಲ್ಲು ತರಲು ಮನೆಯ ಎದುರಿನ ಗುಡ್ಡಕ್ಕೆ ತೆರಳಿದ್ದರು. ಬಳಿಕ ಎಷ್ಟೇ ಹೊತ್ತಾದರೂ ಮನೆಗೆ ವಾಪಾಸು […]
ಡಿ.1ರಂದು ರಾಜಾಂಗಣದಲ್ಲಿ ‘ಭರತಮುನಿ ಜಯಂತ್ಯುತ್ಸವ’
ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಉಡುಪಿ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆಯು 22ನೇ ವರ್ಷದ “ಭರತಮುನಿ ಜಯಂತ್ಯುತ್ಸವ”ವನ್ನು ಇದೇ ಡಿ.1ರಂದು ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಿದೆ ಎಂದು ರಾಧಾಕೃಷ್ಣ ನೃತ್ಯ ನಿಕೇತನದ ನೃತ್ಯಗುರು ವಿದುಷಿ ವೀಣಾ ಮುರಳೀಧರ ಸಾಮಗ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಕೃಷ್ಣಮಠದ ಎದುರಿನಿಂದ ನಾಟ್ಯ ಶಾಸ್ತ್ರಗ್ರಂಥ, ನಟರಾಜ ಹಾಗೂ ಗಣ್ಯರನ್ನು ಒಳಗೊಂಡು ಕುಂಭ ಕಲಶದೊಂದಿಗೆ ರಾಜಾಂಗಣಕ್ಕೆ ಮೆರವಣಿಗೆ ಆಗಮಿಸಲಿದೆ. ಬೆಳಿಗ್ಗೆ 10ಗಂಟೆಗೆ ಪರ್ಯಾಯ ಪುತ್ತಿಗೆ […]
ಉಡುಪಿ: ಹಿರಿಯ ನಟಿ ಮಾಲಾಶ್ರೀ, ಪುತ್ರಿ ಕೃಷ್ಣಮಠಕ್ಕೆ ಭೇಟಿ -ದೇವರ ದರ್ಶನ
ಉಡುಪಿ: ಕನ್ನಡ ಚಿತ್ರರಂಗದ ಕನಸಿನ ಕನ್ಯ ಮಾಲಾಶ್ರೀ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಆಗಮಿಸಿದ್ದಾರೆ. ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು. ಮಾಲಾಶ್ರೀ ಜೊತೆ ಪುತ್ರಿ ಆರಾಧನಾ ಕೂಡ ಮಠಕ್ಕೆ ಬಂದಿದ್ದರು. ಈ ಪರ್ಯಾಯದಲ್ಲಿ ಕೋಟಿ ಬಾರಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.