ಮೀನುಗಾರಿಕೆ ಸಚಿವರೊಂದಿಗೆ ಮಲ್ಪೆ ಮೀನುಗಾರರ ನಿಯೋಗದ ಸಭೆ

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನ ಹಲವು ಸಮಸ್ಯೆ ಹಾಗೂ ಮೀನುಗಾರಿಕೆ ಸಂಬಂಧಿಸಿದ ಹಲವು ತುರ್ತು ಬೇಡಿಕೆಗಳ ಬಗ್ಗೆ ಕರ್ನಾಟಕದ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಮಾಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮಲ್ಪೆ ಮೀನುಗಾರ ಸಂಘದ ನಿಯೋಗ ಸಭೆ ನಡೆಸಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮಲ್ಪೆ ಮಹಿಳಾ ಮೀನುಗಾರ ಸಂಘದ ಒಣ ಮೀನು ವ್ಯಾಪಾರಕ್ಕೆ ನಿವೇಶನ ಮಂಜೂರು, ಬಂದರಿನಲ್ಲಿ ಸುಗಮ ಮೀನುಗಾರಿಕೆಗೆ […]

ಸಾಸ್ತಾನ ಟೋಲ್ ಗೇಟ್ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಉಡುಪಿ: ಸಾಸ್ತಾನ ಟೋಲ್ ಗೇಟ್ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಸ್ತೆಗಳು ಸೂಕ್ತ ನಿರ್ವಹಣೆ ಇಲ್ಲದೆ ಟೋಲ್ ಪೀಕಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವಿಸ್ ರಸ್ತೆ ಇಲ್ಲ, ಹೆದ್ದಾರಿಯಲ್ಲಿ ಹೊಂಡ ಬಿದ್ದಿದೆ, ಶಾಲಾ ಕಾಲೇಜು ವಾಹನಗಳಿಗೂ ಟೋಲ್ ಸಂಗ್ರಹಕ್ಕೆ ಸಿದ್ಧತೆ ನಡೆದಿದೆ. ಹೆದ್ದಾರಿ ಅಭಿವೃದ್ಧಿಯಿಂದ ಪ್ರಾಣಹಾನಿಯಾಗುತ್ತಿದ್ದು, ಯಾವುದೇ ಮನವಿಗಳಿಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಿವಿಗೊಡುತ್ತಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು. ಹೆದ್ದಾರಿಯಲ್ಲಿ ಯಾವುದೇ ದಾರಿದೀಪ ವ್ಯವಸ್ಥೆ ಇಲ್ಲ. ಚರಂಡಿಗಳ ಹೂಳೆತ್ತದೆ […]

ಚಿತ್ರದುರ್ಗ: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಪೋಷಕರಿಂದಲೇ ಅಳಿಯನ ಕೊಲೆ

ಚಿತ್ರದುರ್ಗ :ಚಿತ್ರದುರ್ಗ ತಾಲೂಕಿನ ಕೋಣನೂರಿನಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿಯ ಪೋಷಕರು ಮತ್ತು ಸಂಬಂಧಿಕರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತ ಯುವಕನಿಗೆ ಇದು ಎರಡನೇ ವಿವಾಹವಾಗಿತ್ತು. ಪ್ರೇಮ ವಿವಾಹ ಹಿನ್ನೆಲೆಯಲ್ಲಿ ಕೋಣನೂರಲ್ಲಿ ಯುವಕನ ಭೀಕರ ಕಗ್ಗೊಲೆಯಾಗಿದೆ. ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೋಣನೂರು ಗ್ರಾಮದ 40 ವರ್ಷದ ವ್ಯಕ್ತಿ ಮಂಜುನಾಥ್‌ ಕೊಲೆಯಾದ ವ್ಯಕ್ತಿ. ಯುವತಿ ಪೋಷಕರು ಹಾಗೂ ಸಂಬಂಧಿಕರಿಂದ ವ್ಯಕ್ತಿಯ ಹತ್ಯೆಯಾಗಿದೆ […]

ಕಾರಿನ ಸನ್‌ರೂಫ್‌ ಮೇಲೆ ಪಟಾಕಿ ಸಿಡಿಸಿದ ಯುವಕರು : ಮದ್ವೆ ದಿಬ್ಬಣದ ಕಾರು ಬೆಂಕಿಗಾಹುತಿ;ಇಬ್ಬರಿಗೆ ಗಾಯ

ಸಹ್ರಾನ್‌ಪುರ: ಕೆಲ ದಿನಗಳ ಹಿಂದಷ್ಟೇ ಕಾರಿನ ಸನ್‌ರೂಫ್‌ ಮೇಲೆ ಕೋತಿಯೊಂದು ಬಿದ್ದ ಪರಿಣಾಮ ಸನ್‌ರೂಫ್ ಮುರಿದು ಕೋತಿ ಕಾರಿನೊಳಗೆ ಬಿದ್ದು ಎದ್ದು ಹೋದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಬುದ್ಧಿಗೇಡಿ ಯುವಕರಿಬ್ಬರು ಕಾರಿನ ಸನ್‌ರೂಫ್ ಮೇಲೆ ಪಟಾಕಿ ಇಟ್ಟು ಬೆಂಕಿ ಕೊಟ್ಟ ಪರಿಣಾಮ ಈಗ ಇಡೀ ಕಾರೇ ಬೆಂಕಿಗಾಹುತಿಯಾಗಿದೆ. ಸಂಬಂಧಿಕರ ಮದ್ವೆ ಖುಷಿಯಲ್ಲಿದ್ದ ಯುವಕರು ಕಾರಿನ ಸನ್‌ರೂಫ್‌ ಮೇಲೆಯೇ ಪಟಾಕಿ ಶಾಟ್ಸ್‌ಗಳನ್ನು ಇಟ್ಟು ಸ್ಪೋಟಿಸಿದ್ದು, ಇದರಿಂದ ಇಡೀ ಕಾರೇ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ […]

ಕಳತ್ತೂರಿನಲ್ಲಿ ವಿನಯ್ ಕುಮಾರ್ ಸೊರಕೆ ಅವರಿಗೆ ಸನ್ಮಾನ ಕಾರ್ಯಕ್ರಮ.

ಕಳತ್ತೂರು:ಕೆ ಪಿ ಸಿ ಸಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಕಾಪು ದ್ವಾದಶಿ ಪಬ್ಲಿಸಿಟಿಯ 2 ನೇ ಶಾಖೆಗೆ ಕಳತ್ತೂರು ಪುಂಚಲಕಾಡು ಗ್ರಾಮದಲ್ಲಿ ಉದಯವಾಣಿ ಪತ್ರಿಕೆಯ ಜಾಹೀರಾತು ಗ್ರಾಮೀಣ ಕಚೇರಿಗೆ ಭೇಟಿ ನೀಡಿ ಸಂಸ್ಥೆಗೆ ಶುಭಕೋರಿದರು. ಕರ್ನಾಟಕದ ಕರಾವಳಿ ಪ್ರದೇಶ ಅತೀ ಹೆಚ್ಚು ಪ್ರಸಾರವಾಗುವ ಗ್ರಾಮಾಂತರ ಜನರ ಮನೆ ಮನೆಗೆ ತಲುಪುವ ಏಕೈಕ ಪತ್ರಿಕೆ ಉದಯವಾಣಿ ಪುಟ್ಟ ಗ್ರಾಮ ಪುಂಚಲಕಾಡುವಿನಲ್ಲಿ ಶಾಖೆಯು ತೆರೆದಿದ್ದು ತುಂಬಾ ಸಂತೋಷವಾಯಿತು ಇನ್ನಷ್ಟು ಸಂಸ್ಥೆಯು ಬೆಳೆಯಲಿ […]