ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಲಕ್ಷ್ಮಿ ನಿವಾಸ’ ಖ್ಯಾತಿಯ (ಚಿನ್ನುಮರಿ) ಚಂದನಾ

ಬೆಂಗಳೂರು: ರಾಜಾ ರಾಣಿ’, ಹೂ ಮಳೆ ಮತ್ತು ಲಕ್ಷ್ಮಿ ನಿವಾಸ ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಬಿಗ್ ಬಾಸ್ ಸ್ಪರ್ಧಿ ಚಂದನಾ ಅನಂತಕೃಷ್ಣ ಇಂದು (ನವೆಂಬರ್ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಚಂದನಾ ಅನಂತಕೃಷ್ಣ ಮತ್ತು ಪ್ರತ್ಯಕ್ಷ್‌ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ದಿನಾಂಕ ಫಿಕ್ಸ್‌ ಆಗುವವರೆಗೂ ತಮ್ಮ ಪ್ರೀತಿ ವಿಚಾರವನ್ನು ಸೀಕ್ರೆಟ್‌ ಆಗಿಟ್ಟಿದ್ದರು. ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಇರುವ ಗುರು ನರಸಿಂಹ ಕಲ್ಯಾಣ ಮಂದಿರಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಸಿನಿಮಾ ಹಾಗೂ ಕಿರುತೆರೆ ಸ್ನೇಹಿತರು ಮದುವೆಯಲ್ಲಿ ಭಾಗಿಯಾಗಿದ್ದಾರೆ. […]

BSNL ಗ್ರಾಹಕರಿಗೆ ಸಿಹಿ ಸುದ್ದಿ:ಜಿಯೋ, ಏರ್‌ಟೆಲ್‌ಗೆ ಶಾಕ್ ಕೊಟ್ಟ BSNL; ಕೇವಲ 97 ರೂ.ಗೆ ಪ್ರತಿ ದಿನ 2GB ಡೇಟಾ, ಅನ್‌ಲಿಮಿಟೆಡ್ ಕಾಲ್;

BSNL ರೂ.100 ಕ್ಕಿಂತ ಕಡಿಮೆ ಬೆಲೆಯಲ್ಲಿ 5 ಪ್ರಿಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತದೆ. ಈ ಪ್ಲಾನ್‌ಗಳು ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳು ಮತ್ತು ಇತರ ಪ್ರಯೋಜನಗಳನ್ನು ಒಳಗೊಂಡಿವೆ. BSNL ಪ್ರಿಪೇಯ್ಡ್ ಪ್ಲಾನ್‌ಗಳು: ಖಾಸಗಿ ಕಂಪನಿಗಳು ತಮ್ಮ ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆಯನ್ನು ಏರಿಸುತ್ತಿರುವಾಗ, ಸರ್ಕಾರಿ ಸ್ವಾಮ್ಯದ BSNL ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದೆ. ರೂ.100 ಬಜೆಟ್‌ನಲ್ಲಿ ಪ್ರಿಪೇಯ್ಡ್ ಪ್ಲಾನ್ ಹುಡುಕುತ್ತಿದ್ದರೆ, BSNL ಮಾತ್ರ ಹಲವು ಆಯ್ಕೆಗಳನ್ನು ನೀಡುತ್ತದೆ. BSNL ನ ರೂ.100 ಕ್ಕಿಂತ ಕಡಿಮೆ ಬೆಲೆಯ 5 […]

ಹೊಸದಿಲ್ಲಿ(IPL 2024):ನನಗೆ ಪ್ರೀತಿ, ಬೆಂಬಲ, ಗೌರವ ಕೊಡಿ ಸಾಕು: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

ಹೊಸದಿಲ್ಲಿ: ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕನಾಗಿದ್ದ ಕೆಎಲ್‌ ರಾಹುಲ್‌ ಅವರು ಮುಂದಿನ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡಲಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್‌ ಹರಾಜಿನಲ್ಲಿ ಕೆಎಲ್‌ ರಾಹುಲ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪಡೆದುಕೊಂಡಿದೆ. ಅದಕ್ಕಾಗಿ ಫ್ರಾಂಚೈಸಿಯು 14 ಕೋಟಿ ರೂ ಖರ್ಚು ಮಾಡಿದೆ. ಮೂರು ವರ್ಷಗಳ ನಂತರ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದಿಂದ ಬೇರ್ಪಟ್ಟಿದ್ದಾರೆ. ಅದರ ನಂತರ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರು ವೈಯಕ್ತಿಕ ಗುರಿಗಳಿಗಿಂತ ತಂಡಕ್ಕೆ ಆದ್ಯತೆ ನೀಡುವ […]

ಹೈದರಾಬಾದ್: ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು ಎಂಬ ಪ್ರಶ್ನೆಗೆ ನಾಗಾರ್ಜುನ್ ಸ್ಪಷ್ಟನೆ

ಹೈದರಾಬಾದ್:‌ ಅಕ್ಕಿನೇನಿ ನಾಗಾರ್ಜುನ್‌ (Akkineni Nagarjuna) ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗ ಚೈತನ್ಯ – ಶೋಭಿತಾ ವಿವಾಹಕ್ಕೆ ಅಕ್ಕಿನೇನಿ ಕುಟುಂಬ ಸಜ್ಜಾಗಿದೆ. ಆತ್ಮೀಯರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುವ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ (Sobhita Dhulipala) ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ಅನ್ನಪೂರ್ಣ ಸ್ಟುಡಿಯೋಸ್ ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಈ ನಡುವೆ ಇತ್ತೀಚೆಗೆ ನಾಗಚೈತನ್ಯ ಸಹೋದರ […]

ಉಡುಪಿ:ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಡಿಸೆಂಬರ್ 1ರಂದು ದೀಪೋತ್ಸವ ಸಂಭ್ರಮ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಡಿಸೆಂಬರ್ ತಿಂಗಳ ಒಂದನೆಯ ತಾರೀಕು ಭಾನುವಾರದಂದು ಕಾರ್ತಿಕ ಅಮಾವಾಸ್ಯೆಯ ಪರ್ವಕಾಲದಲ್ಲಿ ರಂಗ ಪೂಜಾ ಸಹಿತ ದೀಪೋತ್ಸವ ಮಹೋತ್ಸವವೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರಲಿದೆ… ಅಂದು ಸಂಜೆ ಗಂಟೆ ಆರರಿಂದ ದೀಪೋತ್ಸವ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ದೀಪ ಪ್ರಜ್ವಲನೆಯ ನಂತರ ಕ್ಷೇತ್ರದಲ್ಲಿ ರಾತ್ರಿಯ ಕಲ್ಪೋಕ್ತ ಪೂಜಾ ಸಹಿತ ರಂಗ ಪೂಜೆ,ಪ್ರಸಾದ ವಿತರಣೆ ನೆರವೇರಲಿದೆ. ಈ ದೀಪೋತ್ಸವ […]