ಶ್ರೇಷ್ಠ ಪಾಕ ತಜ್ಞ , ಯಕ್ಷಗಾನ ಪ್ರೇಮಿ ಹೆಬ್ಬಾರಬೆಟ್ಟು ಶ್ರೀ ಮಹೇಶ್ ಭಟ್ ನಿಧನ
ಉಡುಪಿ:ಶ್ರೇಷ್ಠ ಪಾಕ ತಜ್ಞ , ಯಕ್ಷಗಾನ ಪ್ರೇಮಿ, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಹಾಗೂ ಶಾರದಾ ಸ್ಪೋರ್ಟ್ಸ್ ಕ್ಲಬ್ ನ ಸಕ್ರಿಯ ಸದಸ್ಯ , ಜನಾನುರಾಗಿ ಹೆಬ್ಬಾರಬೆಟ್ಟು ಶ್ರೀ ಯುತ ಮಹೇಶ ಭಟ್(31) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ನ.27 ರಂದು ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದವಾಗುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ 🙏
ಕಾಂಗ್ರೆಸ್ ಎಂದೂ ಸಂವಿಧಾನದ ಪರವಾಗಿ ಇರಲಿಲ್ಲ: ಮಾಜಿ ಸಚಿವ ಎನ್. ಮಹೇಶ್
ಉಡುಪಿ: ಕಾಂಗ್ರೆಸ್ ಎಂದೂ ಸಂವಿಧಾನದ ಪರ ಇಲ್ಲ. ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುತ್ತಲೇ ಬಂದಿದೆ. ಅಂದು ಜವಹಾರ್ ಲಾಲ್ ನೆಹರೂ, ಇಂದು ಸಿದ್ದರಾಮಯ್ಯ ಅವರು ಎಸ್ಸಿ ಎಸ್ಟಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು. ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್‌ನಲ್ಲಿ ಆಯೋಜಿಸಿದ ಸಂವಿಧಾನ ಸಮ್ಮಾನ ಹಾಗೂ ಸಂವಿಧಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹಾಗೂ ಸಂವಿಧಾನ ಜತೆ ಜತೆಗೆ ಹೋಗಬೇಕಿತ್ತು. ಆದರೆ, ಸಂವಿಧಾನ […]
ಬಾಂಗ್ಲಾದೇಶದಲ್ಲಿ ಇಸ್ಕಾನ್ ನಾಯಕನ ಬಂಧನ ಅತ್ಯಂತ ಖಂಡನೀಯ
ಉಡುಪಿ: ಬಾಂಗ್ಲಾದೇಶದಲ್ಲಿ ಇಸ್ಕಾನ್ ಧಾರ್ಮಿಕ ನಾಯಕನ ಬಂಧನ ಅತ್ಯಂತ ಖಂಡನೀಯ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಸಮರ್ಥನಿಯವಲ್ಲ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸ್ವಾಮೀಜಿ, ಬಾಂಗ್ಲಾ ಜಾತ್ಯಾತೀತ ರಾಷ್ಟ್ರವಾಗಿ ಹಿಂದೂ ಧರ್ಮದ ಮೇಲೆ ಈ ರೀತಿಯ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ. ಇಸ್ಕಾನ್ ಧಾರ್ಮಿಕ ನಾಯಕನನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಈ ಕುರಿತಂತೆ ಭಾರತ ಸರಕಾರವು ಪರಿಣಾಮಕಾರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಉಡುಪಿ: ಡಿ.1ರಂದು ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024′
ಉಡುಪಿ: ಉಡುಪಿಯ ಲೊಂಬಾರ್ಡ್ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಯ 101ನೇ ವಾರ್ಷಿಕೋತ್ಸವ ಹಾಗೂ ಉಡುಪಿ ರನ್ನರ್ ಕ್ಲಬ್‌ನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಡಿ.1ರಂದು ‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024’ ಅನ್ನು ಮಲ್ಪೆ ಸೀವಾಕ್ ನಲ್ಲಿ ಆಯೋಜಿಸಲಾಗಿದೆ ಎಂದು ಮಿಷನ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮ್ಯಾರಥಾನ್ ಮಲ್ಪೆಯ ಸೀ-ವಾಕ್‌ನಿಂದ ಬೆಳಿಗ್ಗೆ 5 ಗಂಟೆಗೆ ಆರಂಭಗೊಳ್ಳಲಿದೆ. ಸೀ-ವಾಕ್‌ನಿಂದ ಪಡುಕೆರೆ ಮಾರ್ಗವಾಗಿ ಉದ್ಯಾವರ-ಮಟ್ಟು ತನಕ ತಲುಪಿ ಬಳಿಕ ಅಲ್ಲಿಂದ ಹಿಂದಿರುಗಿ […]
ವಿಯೆಟ್ನಾಂ ಇಂಡಿಯಾ ಅಂತರಾಷ್ಟ್ರೀಯ ಐಕಾನಿಕ್ ಪ್ರಶಸ್ತಿಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಣೇಶ ಮೊಗವೀರ ಆಯ್ಕೆ.
ಉಡುಪಿ: ಏಷ್ಯನೆಟ್ ಸುವರ್ಣ ಹಾಗೂ ಕನ್ನಡ ಪ್ರಭ ಪತ್ರಿಕೆಯವರು ಕೊಡಮಾಡುವ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲ ಗಣೇಶ ಮೊಗವೀರ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ವಿಶೇಷ ಕೊಡುಗೆಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ದಿನಾಂಕ:28-11-2024ರಂದು ವಿಯೆಟ್ನಾಂ ನಲ್ಲಿ ನಡೆಯಲಿರುವ ಅದ್ದೂರಿಯ ಸಮಾರಂಭದಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.