ಕಾರ್ಕಳ: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

ಉಡುಪಿ: ಇಲ್ಲಿನ ನಿಟ್ಟೆ ಗ್ರಾಮದ ಅರಂತಬೆಟ್ಟು ದರ್ಕಾಸ್ ಬಳಿಯ ಮನೆಯೊಂದರ ಬಾವಿಗೆ ಆಹಾರ ಅರಸಿಕೊಂಡು ಬಂದಿದ್ದ ಚಿರತೆ ಮರಿ ಬಿದ್ದಿದ್ದು, ಸ್ಥಳೀಯರ ಸಹಕಾರದಿಂದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ರಾತ್ರಿ ಮನೆಯ ಬಳಿ ಕೋಳಿ ಇರುವುದನ್ನು ಗಮನಿಸಿದ್ದ ಚಿರತೆ ಅದನ್ನು ಹಿಡಿದು ತಿನ್ನಲು ಓಡುವ ಭರದಲ್ಲಿ ತೆರೆದ ಬಾವಿಗೆ ಬಿದ್ದಿದೆ. ಮುಂಜಾನೆ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬೋನು ಮತ್ತು ಬಲೆಯನ್ನು ಇರಿಸಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಒಂದು ವರ್ಷದ ಮರಿ […]

ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ 2024-25:ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್

ಪರ್ತ್:‌ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ 2024-25ರಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಪರ್ತ್‌ ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತವು ನಾಲ್ಕೇ ದಿನಗಳಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ನೀಡಿದ 534 ರನ್‌ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ 238 ರನ್‌ ಗಳಿಗೆ ಅಲೌಟಾಯಿತು. ಈ ಮೂಲಕ ಬುಮ್ರಾ ಪಡೆ 295 ರನ್‌ ಅಂತರದ ಬೃಹತ್‌ ಗೆಲುವು ಪಡೆಯಿತು. ಮೂರನೇ ದಿನದಾಟದ ಅಂತ್ಯಕ್ಕೆ ಕೇವಲ 12 […]

ಎಮ್.ಐ.ಟಿ.(MIT)ಯ ಸೀನಿಯರ್ ಟೆಕ್ನಿಷಿಯನ್ ಮುಂಡ್ಕಿನಜೆಡ್ಡು ರವೀಂದ್ರ ಆಚಾರ್ಯ ನಿಧನ

ಚೇರ್ಕಾಡಿ ಮುಂಡ್ಕಿನಜೆಡ್ಡು ನಿವಾಸಿ ಎಂಐಟಿ ಯ(MIT) ಸೀನಿಯರ್ ಟೆಕ್ನಿಷಿಯನ್ ರವೀಂದ್ರ ಆಚಾರ್ಯ (55) ಅವರು ನವೆಂಬರ್ 24 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಮತ್ತು ಪುತ್ರನನ್ನು ಅಗಲಿದ್ದಾರೆ. ಇವರು ಬಾರ್ಕೂರು ಕಾಳಿಕಾಂಬ ದೇವಸ್ಥಾನ ಕೂಡುವಳಿಕೆಯ ಚೇರ್ಕಾಡಿ ಗ್ರಾಮ‌ ಮೋಕ್ತೆಸರರಾಗಿದ್ದರು. ಮುಂಡ್ಕಿನಜೆಡ್ಡು ಗೋಪಾಲಕೃಷ್ಣ ಭಜನಾ ಮಂದಿರದ ಮತ್ತು ಶಾರದಾ ಸ್ಪೋರ್ಟ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ರಾಗಿದ್ದು, ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಮೇಕಪ್ ತರಬೇತುದಾರ’ಹುದ್ದೆಗೆ ನೇಮಕಾತಿ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಮೇಕಪ್ ತರಬೇತುದಾರ’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ: ಮೇಕಪ್ ತರಬೇತುದಾರಅರ್ಹತೆ: ಡಿಪ್ಲೊಮಾ ಇನ್ ಪ್ರೊಫೆಷನಲ್ ಮೇಕಪ್ಅನುಭವ: ಮೇಕಪ್ ತರಬೇತುದಾರರಾಗಿ ಕನಿಷ್ಠ 1/2 ವರ್ಷಗಳ ಬೋಧನಾ ಅನುಭವ ಹಾಗೂ ಇಂಗ್ಲಿಷ್ ಮತ್ತು ಕನ್ನಡ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591427761

ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ನ.26 ರಂದು “ಹೇರ್ ಸ್ಟೈಲಿಂಗ್” ಕಾರ್ಯಾಗಾರ.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ನ.26(ಮಂಗಳವಾರ) ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ “ಹೇರ್ ಸ್ಟೈಲಿಂಗ್” ಕುರಿತು ಕಾರ್ಯಾಗಾರ ನಡೆಯಲಿದೆ. ಸೀಮಿತ ಸೀಟುಗಳು ಮಾತ್ರ ಲಭ್ಯಿಇವೆ. (ಒಂದು ಬ್ಯಾಚ್‌ನಲ್ಲಿ 5 ಸದಸ್ಯರು ಮಾತ್ರ) ಶೀಘ್ರದಲ್ಲೇ ನೋಂದಾಯಿಸಿ. ನೋಂದಣಿ ಶುಲ್ಕ ₹500/-(ಬೇಕಾಗುವ ಉತ್ಪನ್ನಗಳನ್ನು ಸಂಸ್ಥೆಯಿಂದ ಒದಗಿಸಲಾಗುವುದು.) ಆಸಕ್ತರು ಸಂಪರ್ಕಿಸಿ:ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068/8123163935 ಓರೇನ್ ಇಂಟರ್ನ್ಯಾಷನಲ್,ಎಂಎಸ್ ಡಿಸಿ ಕಟ್ಟಡ, 3 ನೇ ಮಹಡಿ […]