ಕಾರ್ಕಳ: ಹಾಳಾದ ಬೀಡಿ ಎಲೆ ವಿತರಣೆ: ಬೀಡಿ ಕಾರ್ಮಿಕರಿಂದ ಪ್ರತಿಭಟನೆ, ಕಂಪೆನಿಗೆ ಮುತ್ತಿಗೆ

ಉಡುಪಿ: ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಹಾಗೂ ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘಗಳ (ಸಿಐಟಿಯು) ನೇತೃತ್ವದಲ್ಲಿ ಇಂದು ಕಾರ್ಕಳದಲ್ಲಿ ಪ್ರತಿಭಟನೆ ನಡೆಸಿ ಕಂಪನಿಗೆ ಮುತ್ತಿಗೆ ಹಾಕಲಾಯಿತು. ಹಲವು ಸಮಯದಿಂದ ಬೀಡಿ ಎಲೆ ಹಾಳಾಗಿದ್ದು, ಸರಿಪಡಿಸಲು ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರೂ ಎಚ್ಚೆತ್ತುಕೊಳ್ಳದ ಕಂಪನಿಯ ವಿರುದ್ಧ ಇಂದು ಸಂಘದ ಮುಖಂಡರು ಹಾಗೂ ಕಾರ್ಮಿಕರು ಸೇರಿ ಪ್ರತಿಭಟನೆ ನಡೆಸಿದರು. ಬಳಿಕ ಕಂಪನಿಗೆ ಮುತ್ತಿಗೆ ಹಾಕಲಾಯಿತು. ಈ ವೇಳೆ ಸಮಜಾಯಿಷಿ ನೀಡಿದ ಕಂಪನಿಯ ಮ್ಯಾನೇಜರ್ , ಹಳೇ ಬೀಡಿ […]

ಉಡುಪಿ: ಉಪಚುನಾವಣೆಯಲ್ಲಿ ಭರ್ಜರಿ ಗೆಲುವು; ಕಾಂಗ್ರೆಸ್‌ನಿಂದ ವಿಜಯೋತ್ಸವ

ಉಡುಪಿ: ರಾಜ್ಯದ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದು, ಉಡುಪಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂದೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಭಟ್ಟರು.ಈ ವೇಳೆ ಮಾತನಾಡಿದ ಮುಖಂಡ ರಮೇಶ್ ಕಾಂಚನ್, ರಾಜ್ಯದಲ್ಲಿ ಉಪಚುನಾವಣೆ ಸಂದರ್ಭ ಬಿಜೆಪಿ ಎಲ್ಲ ರೀತಿಯ ಅಪಪ್ರಚಾರವನ್ನು ನಡೆಸಿತು. ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಅಪ ಪ್ರಚಾರ ನಡೆಸಿದರೂ ಕೂಡ ರಾಜ್ಯದ […]

ಡಾ| ಜೀವನ್ ರಾಂ ಸುಳ್ಯ ಅವರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ -2025

ಉಡುಪಿ: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿ -2025 ಕ್ಕೆ ಈ ಬಾರಿ ಕನ್ನಡ ರಂಗಭೂಮಿಯ ಪ್ರಸಿದ್ಧ ರಂಗನಿರ್ದೇಶಕ, ನಟ, ರಂಗ ಶಿಕ್ಷಕ, ಸಂಘಟಕ ಡಾ| ಜೀವನ್ ರಾಂ ಸುಳ್ಯ ಅವರು ಆಯ್ಕೆಯಾಗಿದ್ದಾರೆ. ಇದೇ ಬರುವ ಜನವರಿ ತಿಂಗಳಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪತ್ರ, ಫಲಕ ಹಾಗೂ ರೂಪಾಯಿ 25,000 ನಗದಿನೊಂದಿಗೆ ಗೌರವಿಸಲಾಗುವುದು ಎಂದು ಸಂಸ್ಕೃತಿ […]

ಉಡುಪಿ: ದಿವ್ಯಾಂಗರಿಗಾಗಿ ವಿಶೇಷ ಕುರ್ಚಿ ರೂಪುಗೊಳಿಸಿದ ವಿದ್ಯಾರ್ಥಿನಿ; ಭಾರೀ ಮೆಚ್ಚುಗೆ

ಉಡುಪಿ: ಕಾವಡಿ ಫ್ರೌಡಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಸಂಜನಾ, ದಿವ್ಯಾಂಗ ಮತ್ತು ಅಶಕ್ತರಿಗಾಗಿ ಕುರ್ಚಿಯೊಂದನ್ನು ರೂಪಿಸಿದ್ದು ಎಲ್ಲರ ಗಮನ ಸೆಳೆದಿದೆ. ಈಕೆಯ ಮನೆಯಲ್ಲಿ ತೀರ ಬಡತನ ಇದೆ. ತಂದೆ ಆರ್ಮುಗಂ,ಕೂಲಿ ಕೆಲಸ ಮಾಡಿದರೆ ,ತಾಯಿ ಜಯಲಕ್ಷ್ಮೀ ಗೃಹಿಣಿ. ಕಾಲು ನೆಲಕ್ಕೆ ಊರಲಾಗದವರಿಗೆ ನಡೆದಾಡುವುದು ಕೂಡ ಕಷ್ಟ. ಇನ್ನು ದಿವ್ಯಾಂಗರಿಗೆ ಶೌಚಸಹಿತ ನಿತ್ಯ ಜೀವನವನ್ನು ನಿರ್ವಹಿಸುವುದು ಕಷ್ಟ.ಇಂಥವರಿಗಾಗಿಯೇ ಸಂಜನಾ ಸ್ವಂತ ಪರಿಶ್ರಮದಿಂದ ಕುರ್ಚಿಯೊಂದನ್ನು ತಯಾರಿಸಿದ್ದಾರೆ. ಈ ಕುರ್ಚಿಯನ್ನು ನಿರ್ಮಿಸಲು ಈಕೆಗೆ ನಾಲ್ಕು ಸಾವಿರ ಖರ್ಚು ತಗಲಿದೆಯಂತೆ. ಕುರ್ಚಿಯಲ್ಲಿ ಬೆನ್ನಿಗೆ […]

ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅವರಿಗೆ ‘ಶಾರದಾ ಕೃಷ್ಣ’ ಪ್ರಶಸ್ತಿ

ಉಡುಪಿ: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ನೀಡುವ ‘ಶಾರದಾ ಕೃಷ್ಣ’ ಪ್ರಶಸ್ತಿ -2025ಕ್ಕೆ ಪ್ರಸಿದ್ಧ ರಂಗನಿರ್ದೇಶಕ ಡಾ. ಜೀವನ್ ರಾಂ ಸುಳ್ಯ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನವರಿ ತಿಂಗಳಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, […]