ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ: ನ.23 ರಂದು ‘ಬಿಲ್ಡಿಂಗ್ ಇಂಡಸ್ಟ್ರಿಯಲ್ಲಿ ವರ್ಚುವಲ್ ರಿಯಾಲಿಟಿ ಅಪ್ಲಿಕೇಶನ್‌ಗಳು’ ಕುರಿತು ಉಚಿತ ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಘಟಕ), ವರ್ಚುವಲ್ ರಿಯಾಲಿಟಿ ಸೆಂಟರ್’ನಲ್ಲಿ ‘ಬಿಲ್ಡಿಂಗ್ ಇಂಡಸ್ಟ್ರಿಯಲ್ಲಿ ವರ್ಚುವಲ್ ರಿಯಾಲಿಟಿ ಅಪ್ಲಿಕೇಶನ್‌ಗಳು’ ಕುರಿತು ಉಚಿತ ಕಾರ್ಯಾಗಾರ ನ.23 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಸಂವಾದಾತ್ಮಕ 3D ಸ್ಪೇಸ್‌ಗಳನ್ನು ಅನುಭವಿಸಿಕೊಳ್ಳಬಹುದು.(ವಸತಿ ವಿನ್ಯಾಸಗಳು) ನೋಂದಾಯಿಸಲು ಸ್ಕ್ಯಾನ್ ಮಾಡಿ(22ನೇ ನವೆಂಬರ್ ಸಂಜೆ 5 ಗಂಟೆಯ ಮೊದಲು) ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ:9448159810ವರ್ಚುವಲ್ ರಿಯಾಲಿಟಿ ಸೆಂಟರ್, ಎಂಎಸ್ ಡಿಸಿ ಕಟ್ಟಡ, ಈಶ್ವರ್ ನಗರ, ಮಣಿಪಾಲ
ಮಣಿಪಾಲ ಜ್ಞಾನಸುಧಾ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್, ಸಿ.ಎಸ್.ಇ.ಇ.ಟಿ ಕ್ಲ್ಯಾಟ್ ಕಾರ್ಯಗಾರ

ಮಣಿಪಾಲ:‘ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಫೆಶನಲ್ ಕೋರ್ಸ್ಗಳು ಬಹಳ ಮುಖ್ಯ, ಪದವಿ ಪೂರ್ವ ಶಿಕ್ಷಣದ ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ ಆಗಬಯಸುವವರಿಗೆ ನಡೆಸುವ ಮೊದಲ ಹಂತದ ಪರೀಕ್ಷೆ ಸಿ.ಎ.-ಫೌಂಡೇಶನ್, ಕಂಪೆನಿ ಸೆಕ್ರೆಟರಿ ವಿಭಾಗದ ಮೊದಲ ಹಂತದ ಪರೀಕ್ಷೆ ಸಿ.ಎಸ್.ಇ.ಇ.ಟಿ. ವಿದ್ಯಾರ್ಥಿಗಳನ್ನು ಆ ವಿಭಾಗಗಳಲ್ಲದೇ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಬುನಾದಿಯಿದ್ದಂತೆ, ದೇಶದ ಅಗ್ರ 22 ಕಾನೂನು ಕಾಲೇಜುಗಳಲ್ಲಿ ಪ್ರವೇಶ ಗಿಟ್ಟಿಸಲು ನಡೆಯುವ ಕ್ಲ್ಯಾಟ್(ಸಿ.ಎಲ್.ಎ.ಟಿ.) ಪರೀಕ್ಷೆಯ ಅರಿವು ಕೂಡ ಹೆಚ್ಚಿಸಿ ಕಾನೂನು ಪದವಿಯ ಮಹತ್ವ ಮತ್ತು ಬೇಡಿಕೆಯನ್ನು ವಿದ್ಯಾಥಿಗಳಿಗೆ ತಿಳಿಯಪಡಿಸುವ ಅಗತ್ಯವಿದೆ’ […]
ಉಡುಪಿ: ಜನಾರ್ದನ್ ಕೊಡವೂರು ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಅಭಿನಂದನೆ.

ಉಡುಪಿ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಸಂಸ್ಥೆಯ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಆಯ್ಕೆಯಾದ ಜನಾರ್ದನ್ ಕೊಡವೂರು ಹಾಗೆಯೇ ಅಂಚೆ ಇಲಾಖೆಯ ಶ್ರೇಷ್ಠ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪುರಸ್ಕೃತಗೊಂಡ ಪೂರ್ಣಿಮಾ ಜನಾರ್ದನ್ ದಂಪತಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ನಾಡೋಜ ಡಾ. ಕೆ. ಪಿ. ರಾವ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ಶೆಣಿೈ, ಪ್ರಭಾವತಿ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಡಾ. ಗಣನಾಥ್ ಎಕ್ಕಾರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಉಡುಪಿ ಶಾಖೆಯ ವ್ಯವಸ್ಥಾಪಕ ಹಫೀಸ್ ರೆಹಮಾನ್, ಅಂಬ್ರಯ್ಯ ಮಠ, […]
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ಲಾರಿ ಪಲ್ಟಿ; ತಪ್ಪಿದ ಭಾರೀ ದುರಂತ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಿಮೆಂಟ್ ರೆಡಿಮಿಕ್ಸ್ ಲಾರಿಯೊಂದು ಪಲ್ಟಿಯಾದ ಘಟನೆ ಅಂಬಾಗಿಲು- ಪೆರಂಪಳ್ಳಿ ಕ್ರಾಸ್ ನಲ್ಲಿ ಸಂಭವಿಸಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಯಾವುದೇ ವಾಹನ ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.ಸಿಮೆಂಟ್ ರೆಡಿಮಿಕ್ಸ್ ಲಾರಿ ಅಂಬಾಗಿಲಿನಿಂದ ಮಣಿಪಾಲದ ಕಡೆಗೆ ತೆರಳುತ್ತಿದ್ದು, ಪೆರಂಪಳ್ಳಿಗೆ ತೆರಳುವ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲ್ಲೂರು: ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ; ಚಾಲಕ ಮೃತ್ಯು.

ಕೊಲ್ಲೂರು: ಕೆರಾಡಿ ಗ್ರಾಮದ ಅರೆಕಲ್ಲು ಎಂಬಲ್ಲಿ ಟ್ಯಾಕ್ಟರೊಂದು ಪಲ್ಟಿಯಾದ ಪರಿಣಾಮ ಚಾಲಕನೊಬ್ಬ ಮೃತಪಟ್ಟ ಘಟನೆ ನ.19ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಮಂಜುನಾಥ(37) ಎಂದು ಗುರುತಿಸಲಾಗಿದೆ. ಕೆರಾಡಿ ಕಡೆಯಿಂದ ಚಿತ್ತೂರು ಪೆಟ್ರೋಲ್ ಬಂಕ್ ಕಡೆಗೆ ಹೋಗುತ್ತಿದ್ದ ಟ್ರ್ಯಾಕ್ಟರ್, ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಗ್ಗು ಜಾಗದಲ್ಲಿ ಅಡ್ಡ ಬಿತ್ತೆನ್ನಲಾಗಿದೆ. ಇದರಿದ ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ವೇಳೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದುಬಂದಿದೆ.ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.