ಧರ್ಮಸ್ಥಳ: ನ.26 ರಿಂದ 30ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಭಗವಾನ್‌ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ನ.26ರಿಂದ 30ರ ವರೆಗೆ ಜರಗಲಿದೆ. ನ.26ರಂದು 3 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಶಾಸಕ ಹರೀಶ್‌ ಪೂಂಜ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್‌, ಮಾಜಿ ವಿ.ಪ.ಸದಸ್ಯ ಹರೀಶ್‌ ಕುಮಾರ್‌ ನೇತೃತ್ವದಲ್ಲಿ 25,000ಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಪ್ರಾರ್ಥನೆ ಭಜನೆ ಹಾಗೂ ಶಿವಪಂಚಾಕ್ಷರಿ ಪಠಣದೊಂದಿಗೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿರುವರು. ನ.28ರಂದು ಅಮೃತವರ್ಷಿಣಿ […]

ಉಡುಪಿ:ತ್ರಿಶಾ ಕ್ಲಾಸಸ್ : ಸಿ ಎಸ್ ಎಕ್ಸಿಕ್ಯೂಟಿವ್ ಮಾಹಿತಿ ಕಾರ್ಯಾಗಾರ

ಉಡುಪಿ : ತ್ರಿಶಾ ಕ್ಲಾಸಸ್ ವತಿಯಿಂದ ಸಿಎಸ್ ಎಕ್ಸಿಕ್ಯೂಟಿವ್ ಮಾಹಿತಿ ಕಾರ್ಯಗಾರವು ನವೆಂಬರ್ 23 ರಂದು ಅಪರಾಹ್ನ1:30 ಗಂಟೆಗೆ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಲಿದೆ. ತರಗತಿಯ ವಿಶೇಷತೆಗಳು : ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಉದ್ಯಾವರ: ಹಿರಿಯ ಉದ್ಯಮಿ ರಘುನಾಥ್ ಎನ್ ಸಾಲಿಯನ್ ನಿಧನ

ಉಡುಪಿ: ಬಾಲಾಜಿ ಬಾರ್ ಮತ್ತು ನವೀನ್ ಬಾರ್ ಇದರ ಮಾಲೀಕ ರಘುನಾಥ ಎಂ ಸಾಲಿಯಾನ್ ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.ಬೊಳ್ಜೆ ಬ್ರಹ್ಮ ಬೈದ್ರಕಳ ಗರಡಿ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು, ಕೇದಾರ್ ಬ್ರಹ್ಮಲಿಂಗೇಶ್ವರ ಕಲಾಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು, ನಾಲ್ಕು ಪುತ್ರಿಯಂದಿರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಹೆಬ್ರಿ: ಎನ್ ಕೌಂಟರ್ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಕೆ

ಉಡುಪಿ: ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಉಳಿದ ನಕ್ಸಲರಿಗಾಗಿ ಶೋಧ ತೀವ್ರಗೊಂಡಿದೆ. ಈ ನಡುವೆ ಬೆಂಗಳೂರಿನ ಎಫ್ ಎಸ್ ಎಲ್ ಟೀಂ ಎನ್ ಕೌಂಟರ್ ಪ್ರದೇಶಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಕಲೆ ಹಾಕುತ್ತಿದೆ. ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡನೊಂದಿಗೆ ಇದ್ದ ಇತರೇ ನಕ್ಸಲರು ಎನ್ ಕೌಂಟರ್ ಸಂದರ್ಭ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕರಾವಳಿಯ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಈ ನಡುವೆ ವಿಕ್ರಂ […]

ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಮೇಕಪ್ ತರಬೇತುದಾರ’ ಹುದ್ದೆಗೆ ಅರ್ಜಿ ಆಹ್ವಾನ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಮೇಕಪ್ ತರಬೇತುದಾರ’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ: ಮೇಕಪ್ ತರಬೇತುದಾರಅರ್ಹತೆ: ಡಿಪ್ಲೊಮಾ ಇನ್ ಪ್ರೊಫೆಷನಲ್ ಮೇಕಪ್ಅನುಭವ: ಮೇಕಪ್ ತರಬೇತುದಾರರಾಗಿ ಕನಿಷ್ಠ 1/2 ವರ್ಷಗಳ ಬೋಧನಾ ಅನುಭವ ಹಾಗೂ ಇಂಗ್ಲಿಷ್ ಮತ್ತು ಕನ್ನಡ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591427761