ಉಡುಪಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ 2024- 25
ಉಡುಪಿ, ನ.18: ಉಡುಪಿ ಜಿಲ್ಲಾ ಪಂಚಾಯತ್ – ಶಾಲಾ ಶಿಕ್ಷಣ ಇಲಾಖೆ ಉಡುಪಿ – ಶ್ರೀ ಕ್ಷೇತ್ರ ಶಿಕ್ಷಾಧಿಕಾರಿಯವರ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥ ಮಿಕ ಶಾಲೆ ಒಳಕಾಡು ಇದರ ಸಂಯುಕ್ತ ಆಶ್ರಯದಲ್ಲಿ ಉಡುಪಿ ವಲಯ ಮಟ್ಟದ ಪ್ರಾತಮಿಕ ಹಾಗು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024-25, ನ.22 ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಳಕಾಡು ಇಲ್ಲಿ ನಡೆಯಲಿದ್ದು, ಉದ್ಘಾಟನೆಯನ್ನು […]
ಮಂಗಳೂರು: ನಿಯಂತ್ರಣ ತಪ್ಪಿ ಡಿವೈಡರಿಗೆ ಕಾರು ಡಿಕ್ಕಿ; ಓರ್ವ ಸ್ಥಳದಲ್ಲೇ ಮೃತ್ಯು.
ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿ 75ರ ದಕ್ಷಿಣ ಕನ್ನಡದ ನೆಲ್ಯಾಡಿಯಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರಿಗೆ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ನ. 17 ರಂದು ಭಾನುವಾರ ಸಂಜೆ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಬಳಿ ಮಣ್ಣಗುಂಡಿಯಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಕುಂಬ್ರದ ತಿಂಗಳಾಡಿ ಸಮೀಪದ ತ್ಯಾಗರಾಜೆಯ ಮಜ್ಜರಡ್ಕ ರಾಮಣ್ಣ ಪೂಜಾರಿ ಎಂಬವರ ಪುತ್ರ 26 ವರ್ಷದ ಜಗದೀಶ್ ಎಂದು ಗುರುತಿಸಲಾಗಿದೆ. ಮಾರುತಿ ಸ್ವಿಫ್ಟ್ ಕಾರೊಂದರಲ್ಲಿ ಗುಂಡ್ಯ ಗಡಿಯ ಶಿರಾಡಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ಬರುತಿದ್ದಾಗ ಈ ದುರ್ಘಟನೆ […]
ಮಂಗಳೂರು: ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ; ಓರ್ವ ಮೃತ್ಯು.
ಮಂಗಳೂರು: ಕಿನ್ನಿಗೋಳಿ ಕಟೀಲು ಹೆದ್ದಾರಿಯ ಉಲ್ಲಂಜೆ ರಸ್ತೆ ಬಳಿ ದ್ವಿಚಕ್ರ ವಾಹನಗಳ ನಡುವೆ ಮುಖಮುಖಿ ಢಿಕ್ಕಿ ಸಂಭವಿಸಿ ಓರ್ವ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರನ್ನು ಪಲಿಮಾರು ನಿವಾಸಿ ರವೀಂದ್ರ (42) ಹಾಗೂ ಗಾಯಗೊಂಡವರನ್ನು ಕಿನ್ನಿಗೋಳಿ ಸಮೀಪದ ಐಕಳ ನಿವಾಸಿ ಕೃಷ್ಣ ಮಾರ್ಲ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಮೃತ ರವೀಂದ್ರ ಅವರು ಸಹ ಸವಾರ ಕುಮಾರ್ ಎಂಬವರನ್ನು ತಮ್ಮ ಸ್ಕೂಟರ್ ನಲ್ಲಿ ಕುಳ್ಳಿರಿಸಿಕೊಂಡು ಕಟೀಲು ಕಡೆಗೆ ಹೋಗುತ್ತಿದ್ದಾಗ ಉಲ್ಲಂಜೆ ರಸ್ತೆಯ ಮುಗೆರೋಡಿ ಎನ್ ಕ್ಲೇವ್ […]
ಕುಂದಾಪುರ: ಮೂಡ್ಲಕಟ್ಟೆ ಪದವಿ ಕಾಲೇಜಿನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ ನಾವೊಂನ್ಮೇಶ್ ಉದ್ಘಾಟನೆ
ಕುಂದಾಪುರ: ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಮೆಟ್ಟಿಲೇರಲು ಶೈಕ್ಷಣಿಕ ಪ್ರಗತಿಯ ಜೊತೆಗೆ ನಾಲ್ಕು ಬಹುಮುಖ್ಯ ವಿಷಯಗಳಾದ ನಾಯಕತ್ವ ಗುಣ, ಸೃಜನಶೀಲತೆ ಮತ್ತು ನಾವಿನ್ಯತೆ, ರಿಸ್ಕ್ ನಿರ್ವಹಣೆ, ಸೋಲನ್ನು ಸ್ವೀಕರಿಸುವಿಕೆ ಇವನ್ನು ನಿಭಾಯಿಸುವ ಕಲೆ ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನಾವೊಂನ್ಮೇಶ್ ಅಂತಹ ಬಹುದೊಡ್ಡ ಕಾರ್ಯಕ್ರಮ ಆಯೋಜಿಸುವಿಕೆ ಮತ್ತು ನಿರ್ವಹಿಸುವುವಿಕೆ ನಿಮಗೆ ಅಂತಹ ಗುಣಗಳನ್ನು ಪಡೆಯಲು ಸಹಕರಿಸುತ್ತದೆ ಎಂದು ನಾವೊಂನ್ಮೇಶ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೀವಿಯಸ್ ಸೊಲ್ಯೂಷನ್ ಉಡುಪಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುಯೋಗ್ ಶೆಟ್ಟಿ ಹೇಳಿದರು. ಇನ್ನೊರ್ವ […]
ಉಡುಪಿ: ಸ್ಮೀತಾ ವಿ. ಕಾಮತ್ ಅವರಿಗೆ ಪಿ.ಎಚ್.ಡಿ. ಪದವಿ
ಉಡುಪಿ: ಉಡುಪಿ ಶ್ವೇತಾ ವಿ ಕಾಮತ್ ಮತ್ತು ವರದರಾಯ ಕಾಮತ್ ಅವರ ಪುತ್ರಿ ಕುಮಾರಿ ಸ್ಮೀತಾ ವಿ ಕಾಮತ್ ಅವರಿಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ರಸಾಯಿನಿಕ ಶಾಸ್ತ್ರದ ಸಂಶೋಧನೆಯಲ್ಲಿ ಪಿ.ಎಚ್.ಡಿ. ಪದವಿ ನೀಡಲಾಗಿದೆ. ಸ್ಮೀತಾ ಮಂಗಳೂರಿನ ಕೆನರಾ ಕಾಲೇಜ್ ನಲ್ಲಿ ಪಿಯುಸಿ ವರೆಗೆ, ನಂತರ ಸಂತ ಅಲೋಸಿಯಸ್ ಕಾಲೇಜ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆದು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಪ್ರೊ| ಎಸ್ ಕೆ ನಟರಾಜ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ಫಂಕ್ಷನಲ್ ನ್ಯಾನೋಮಟೀರಿಯಲ್ ಆಧಾರಿತ ಮೆಂಬ್ರೇನ್‌ಗಳು […]