ಉಡುಪಿ:ತ್ರಿಶಾ ಸಂಸ್ಥೆ : ಸಿಎಸ್ಇಇಟಿ ಉತ್ತಮ ಫಲಿತಾಂಶ

ಉಡುಪಿ:ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿಎಸ್ಐ) ನಡೆಸುವ ಸಿಎಸ್ಇಇಟಿ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಯೋಗೀಶ್ ಮಲ್ಯ(149), ಅರ್ಚನ್(135), ರಕ್ಷಕ್ ಜೆ ಅಚನ್(135), ಪವನ್(133), ಪ್ರಾರ್ಥನಾ(132), ರಾಕೇಶ್ ಕುಲಾಲ್(119), ನಿದಿಶಾ(118), ಧ್ಯಾನ್ ಪೂಜಾರಿ(115), ಮಾನ್ವಿತಾ ಮೆಂಡನ್(107), ಶ್ರಾವ್ಯ(105), ಮಾನ್ವಿತಾ ಎಸ್ ಪೂಜಾರಿ(100), ಮೊಹಮ್ಮದ್.ಸಿನಾನ್(100), ರಿತಿಕಾ(100), ಶರಣ್ಯ ಎಸ್ ನಾಯ್ಕ್(100), ತ್ರಿಶಾ ಆರ್ ಕೋಟ್ಯಾನ್(100) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮತ್ತು ಮಂಗಳೂರಿನ ತ್ರಿಶಾ ಕಾಲೇಜ್ ಆಫ್ […]

ಟಯರ್ ಬ್ಲಾಸ್ಟ್ ಆಗಿ ಗೂಡ್ಸ್ ವಾಹನ ಪಲ್ಟಿ: ಮೂವರಿಗೆ ಗಾಯ – ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಪಡುಬಿದ್ರಿ: ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆದ ಘಟನೆ ಸಂಭವಿಸಿದೆ. ಕಾವೂರಿನಿಂದ ಕಟಪಾಡಿಗೆ ಸೆಂಟ್ರಿಗ್ ಪರಿಕರಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಹಳೆ ಟಯರ್ ಬ್ಲಾಸ್ಟ್ ಆಗಿ ಎರ್ಮಾಳು ಬುದ್ದಗಿ ಪೆಟ್ರೋಲ್ ಬಂಕ್ ಬಳಿ ಹೆದ್ದಾರಿಗೆ ಉರುಳಿ ಬಿದ್ದಿದೆ. ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ನಡೆಯಲಿದ್ದ ಬಾರೀ ದುರಂತ ತಪ್ಪಿದಂತಾಗಿದೆ.ಘಟನೆಯಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಸಂಚಾರಿ […]

ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್‌’ಗೆ MBBS ವಿದ್ಯಾರ್ಥಿ ಬಲಿ.

ಗುಜರಾತ್‌: ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್‌ಗೆ ವೈದ್ಯಕೀಯ ವಿದ್ಯಾರ್ಥಿ ಬಲಿಯಾದ ಘಟನೆ ಶನಿವಾರ (ನ.16) ನಡೆದಿದೆ. ಸುಮಾರು ಮೂರು ಗಂಟೆಗಳ ಕಾಲ ಒಂದೇ ಕಡೆ ನಿಂತಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪಟಾನ್ ಜಿಲ್ಲೆಯ ಧಾರಾಪುರದ ಜಿಎಂಇಆರ್‌ಎಸ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೊದಲ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದ ಅನಿಲ್ ಮೆಥಾನಿಯಾ ಮೃತ ವಿದ್ಯಾರ್ಥಿ. ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್‌:ಈತನನ್ನು ಎಂಬಿಬಿಎಸ್‌ ಮೂರನೇ ವರ್ಷದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಸುಮಾರು ಮೂರು ಗಂಟೆಗಳ […]

ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮ

ಉಡುಪಿ: ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಆಂಧ್ರಪ್ರದೇಶದ ರಾಜ್ಯಪಾಲ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಸ್.ಅಬ್ದುಲ್ ನಝೀರ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,”ನಮ್ಮ ದೇಶದ ನ್ಯಾಯಾಲಯಗಳಲ್ಲಿ ಐದು ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಒಂದೊಂದು ಪ್ರಕರಣವು ಸುಮಾರು ಹತ್ತು ಜನರನ್ನೊಳಗೊಂಡಿದ್ದು ಕನಿಷ್ಠ 25 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ. ಇದು ತುಂಬಾ ಗಂಭೀರ ಸಮಸ್ಯೆ. ನಮ್ಮ ರಾಜ್ಯದ […]

ಉಡುಪಿ: ಜಗದ್ಗುರು ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮೀಜಿ ಅವರು ಕುಂಜಿಬೆಟ್ಟು ಶ್ರೀ ಶಾರದಾ ಮಂದಿರ ಭೇಟಿ ಕಾರ್ಯಕ್ರಮ.

ಉಡುಪಿ: ಶ್ರೀ ಕಂಚಿ ಕಾಮಕೋಟಿ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಮಹಾಸ್ವಾಮೀಜಿಯವರ ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂದಿರ ಭೇಟಿ ಕಾರ್ಯಕ್ರಮ ನಡೆಯಲಿದೆ. ದಿನಾಂಕ : 19-11-2024 ಮಂಗಳವಾರ, ಮುಸ್ಸಂಜೆ : ಶ್ರೀ ಶ್ರೀಗಳವರ ಪುರಪ್ರವೇಶ ಪೂರ್ಣಕುಂಭ ಸ್ವಾಗತ, ಧೂಳಿ ಪಾದಪೂಜೆ. ದಿನಾಂಕ: 20-11-2024 ಬುಧವಾರ, ಬೆಳಿಗ್ಗೆ 9.00ರಿಂದ : ಶ್ರೀ ಚಂದ್ರಮೌಳೀಶ್ವರ ಪೂಜೆ ಭಿಕ್ಷಾವಂದನೆ, ಪಾದಪೂಜೆ, ಆಶೀರ್ವಚನ, ಭೋಜನ ಪ್ರಸಾದ, ಸಂಜೆ ಘಂಟೆ 4.00ಕ್ಕೆ: ಶ್ರೀಕೃಷ್ಣ ಮಠಕ್ಕೆ ಭೇಟಿ. ದಿನಾಂಕ […]