ಕಾರ್ಕಳ: ಅಣ್ಣನ ಉತ್ತರ ಕ್ರಿಯೆಯ ಸಿದ್ಧತೆ; ವಿದ್ಯುತ್‌ ಪ್ರವಹಿಸಿ ಸಹೋದರಿ ಮೃತ್ಯು

ಉಡುಪಿ: ಅಣ್ಣನ ಉತ್ತರ ಕ್ರಿಯೆ ಸಿದ್ಧತೆ ವೇಳೆ ವಿದ್ಯುತ್‌ ಪ್ರವಹಿಸುತ್ತಿದ್ದ ಶಾಮಿಯಾನ ಕಂಬ ಸ್ಪರ್ಶಿಸಿ ಸಹೋದರಿ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಸಂಭವಿಸಿದೆ. ನಿಟ್ಟೆ ಗ್ರಾಮದ ಲಲಿತಾ (59) ಮೃತ ದುರ್ದೈವಿ. ಇವರು‌ ತನ್ನ ಅಣ್ಣ ರಾಘು ಬೋಂಟ್ರ ಎಂಬವರ ಉತ್ತರ ಕ್ರಿಯೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ಧತೆ ನಡೆದಿದ್ದು ಗುರುವಾರ ರಾತ್ರಿ 9 ಗಂಟೆ ವೇಳೆಗೆ ರಾಘು ಬೋಂಟ್ರ ಅವರ ತಂಗಿ ಶಾಮಿಯಾನದ ಆಧಾರಕ್ಕೆಂದು ಅಳವಡಿಸಿದ್ದ ಕಂಬ ಸ್ಪರ್ಶಿಸಿದ್ದರು. ಆ ಕಂಬದಲ್ಲಿ ವಿದ್ಯುತ್‌ […]

ಯಾವುದೇ ತನಿಖೆಗೆ ಸಿದ್ಧ ಎಂದ ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷರು ಅವರ ಮಾತಿಗೆ ಬದ್ದರಾಗಿರದೇ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ಯಾಕೆ : ರಮೇಶ್ ಕಾಂಚನ್ ಪ್ರಶ್ನೆ.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸುಸ್ತಿದಾರರು ಎಂದು ಪರಿಗಣಿಸಲ್ಪಟ್ಟವರು ನೀಡಿದ ದೂರಿನ ಮೇಲೆ ದಾಖಲಾಗಿರುವ ಎಫ್.ಐ.ಆರ್ ವಿರುದ್ಧದ ತನಿಖೆಗೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿಲ್ಲ ಎಂದಾದರೆ ಬ್ಯಾಂಕಿನ ಅಧ್ಯಕ್ಷರೇ ತಿಳಿಸಿರುವಂತೆ ನಿಷ್ಪಕ್ಷಪಾತವಾದ ತನಿಖೆಗೆ ಸಹಕರಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ. ಮಲ್ಪೆ ಮಧ್ವರಾಜ್ ಅಂತಹ ಹಿರಿಯ ಚೇತನಗಳ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ಮೊಗವೀರ ಮೀನುಗಾರ ಮುಖಂಡರು ಒಗ್ಗೂಡಿ ಉತ್ತಮ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಅಂದು ಹುಟ್ಟು ಹಾಕಿದ […]

ಕಾರ್ಕಳ: ಪತಿಯ ಅಗಲುವಿಕೆಯಿಂದ ಮನನೊಂದ ಅಂಗನವಾಡಿ ಟೀಚರ್ ಬಾವಿಗೆ ಹಾರಿ ಆತ್ಮಹತ್ಯೆ

ಉಡುಪಿ: ಪತಿಯ ಅಗಲುವಿಕೆಯಿಂದ ಮನನೊಂದ ಅಂಗನವಾಡಿ ಟೀಚರ್ ಒಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ. ಮಿಯ್ಯಾರು ಅಂಗನವಾಡಿ ಕಾರ್ಯಕರ್ತೆ ಸೌಮ್ಯ (40) ಆತ್ಮಹತ್ಯೆ ಮಾಡಿಕೊಂಡವರು. ಇವರು ಇಂದು ಬೆಳಿಗ್ಗೆ ಮಿಯ್ಯಾರಿನ ತನ್ನ ಮನೆಯ ಬಾವಿಗೆ ಹಾರಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಮಿಯ್ಯಾರು ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದ ಅವರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದರು.ಸೌಮ್ಯ ಅವರ ಪತಿ ಸಂತೋಷ್‌ ಪೂಜಾರಿ ಅವರು ಎರಡು ತಿಂಗಳ ಹಿಂದೆ […]

ಉಡುಪಿ:ಮಕ್ಕಳ ದಿನಾಚರಣೆಯ ಪ್ರಯುಕ್ತ ಕಿಡ್ಜೀ ಮಣಿಪಾಲ ಪ್ರಿಸ್ಕೂಲ್ ವಿದ್ಯಾರ್ಥಿಗಳಿಂದ ರ್ಯಾಲಿ ಕಾರ್ಯಕ್ರಮ

ಮಣಿಪಾಲ:ನಮಗೆ ಪರ್ಯಾವರಣದ ಮಹತ್ವವನ್ನು ಅರಿಸುವುದಕ್ಕಾಗಿ, ನ.14 ಮಕ್ಕಳ ದಿನಾಚರಣೆಯ ಪ್ರಯುಕ್ತ ಕಿಡ್ಜೀ ಮಣಿಪಾಲ ಪ್ರೀಸ್ಕೂಲ್ ವಿದ್ಯಾರ್ಥಿಗಳು “ಮರವನ್ನು ಉಳಿಸಿ, ಪ್ಲಾನೆಟ್‌ನ್ನು ಉಳಿಸಿ” ಎಂಬ ಸಂದೇಶವನ್ನು ಹರಡುವ ರ್ಯಾಲಿ (rallies)ಯಲ್ಲಿ ಪಾಲ್ಗೊಂಡಿದ್ದಾರೆ. ಈ ರ್ಯಾಲಿ (rallies) ನಲ್ಲಿ, ಮಣಿಪಾಲದ ಟೈಗರ್ ಸರ್ಕಲ್ ಇಂದ ಮಣಿಪಾಲ ಪೊಲೀಸ್ ಸ್ಟೇಷನ್ ವರೆಗೆ ಮಕ್ಕಳು ನಡೆದಾಡಿದರು. ಈ ಕಾರ್ಯಕ್ರಮವು ಮರ ಕಡಿಯುವ ನಮ್ಮ ಆಯ್ಕೆಗಳ ಕುರಿತು ಚಿಂತನೆಗೆ ಪ್ರೇರೇಪಿಸುತ್ತದೆ, ಹಾಗು ಪರಿಸರ ಸಂರಕ್ಷಣೆಯ ಅವಶ್ಯಕತೆಯನ್ನು ತಿಳಿಸುತ್ತದೆ.

ಕುಂದಾಪುರ: ಹೃದಯಾಘಾತದಿಂದ ಲಾರಿ ಚಾಲಕ ಮೃತ್ಯು.

ಕುಂದಾಪುರ: ಅಂಪಾರು ಗ್ರಾಮದ ನೆಲ್ಲಿಕಟ್ಟೆ ಬಳಿ ಲಾರಿ ಚಾಲನೆ ವೇಳೆ ಚಾಲಕನಿಗೆ ಹೃದಯಘಾತವಾಗಿ ಮೃತಪಟ್ಟ ಘಟನೆ ನ.13ರ ಮಧ್ಯರಾತ್ರಿಯಂದು ನಡೆದಿದೆ. ಮೃತಪಟ್ಟ ಲಾರಿ ಚಾಲಕ ವಿಶಾಂತ್‌(29). ಲಾರಿಯು ಮಂಗಳೂರಿನ ಇರ್ಪಾನ್‌ ಎಂಬುವವರ ಮಾಲಿಕತ್ವದ ಟ್ರಾನ್ಸ್‌ಪೋರ್ಟ್‌ ಆಗಿದೆ. ಮಂಗಳೂರಿನಿಂದ ಕಲ್ಲಿದ್ದಲು ತುಂಬಿಸಿಕೊಂಡು, ಬಳ್ಳಾರಿಗೆ ಹೋಗುತ್ತಿದ್ದ ಲಾರಿಯನ್ನು ವಿಶಾಂತ್‌ ಅವರು ಚಲಾಯಿಸುತ್ತಿದ್ದು, ಅಂಪಾರು ಗ್ರಾಮದ ನೆಲ್ಲಿಕಟ್ಟೆ ಬಳಿ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೆ 108 ವಾಹನದ ಮೂಲಕ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ […]