ನ.9, 10ರಂದು ಮೂಡುಬಿದಿರೆಯಲ್ಲಿ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ
ಉಡುಪಿ: ಕರ್ನಾಟಕದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ಮೂಲದ ಮರಾಟಿಗರ ಸಮಗ್ರ ಬಲವರ್ಧನೆ ಮತ್ತು ಪ್ರಗತಿಗಾಗಿ ”ಗದ್ದಿಗೆ“ ಕರಾವಳಿ ಮರಾಟಿ ಸಮಾವೇಶವನ್ನು ನ.9ಮತ್ತು 10ರಂದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರಾವಳಿ ಮಾರಾಟಿ ಸಮಾವೇಶದ ಗೌರವಾಧ್ಯಕ್ಷ ಡಾ.ಕೆ.ಸುಂದರ್ ನಾಯ್ಕ್ ತಿಳಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಹಾಗೂ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಅನಾವರಣ ಮಾಡುವ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. […]
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ಪ್ರಶ್ನೆಗಳ ಸುರಿಮಳೆ; 2 ಗಂಟೆಗಳ ಕಾಲ ವಿಚಾರಣೆ – ಸಿಎಂ ಸಿದ್ದರಾಮಯ್ಯ
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ (ನ6)ವಿಚಾರಣೆಗೆ ಹಾಜರಾಗಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕಾಯುಕ್ತ ವಿಚಾರಣೆ ಬಳಿಕ, ಪ್ರಶ್ನೆಗಳ ಸುರಿಮಳೆಗೈದ ಮಾಧ್ಯಮ ಪ್ರತಿನಿಧಿಗಳಿಗೆ ಸಿಡಿಮಿಡಿಯಿಂದಲೇ ಉತ್ತರ ನೀಡಿದರು. ಹಲವು ಪ್ರಶ್ನೆಗಳನ್ನು ಮುಂದಿಟ್ಟಾಗ ಸಿಎಂ ರೇಗಾಡಿದರು.‘ಎಲ್ಲವನ್ನೂ ಅವರು ರೆಕಾರ್ಡ್ ಮಾಡಿದ್ದಾರೆ. ಸುಳ್ಳು ಕೇಸ್ ಹಾಕಿದ್ದಾರೆ ವಿಚಾರಣೆ ಮಾಡಿದ್ದಾರೆ. ಇದರಲ್ಲಿ ನನಗೇಕೆ ಮುಜುಗರ. ನನ್ನನ್ನು ಮತ್ತೆ ವಿಚಾರಣೆಗೆ […]
ಜಾರ್ಜಿಯಾ, ಉ.ಕೆರೋಲಿನಾದಲ್ಲಿ ಟ್ರಂಪ್ ಕಮಾಲ್, ಹ್ಯಾರಿಸ್ ಗೆ ತೀವ್ರ ಹಿನ್ನಡೆ; ಜೋ ಬೈಡನ್ ಕೇವಲ 11,779 ಮತಗಳ ಅಂತರದಲ್ಲಿ ಜಯ ಸಾಧಿಸಲು ಕಾರಣವಾಗಿದ್ದ ಜಾರ್ಜಿಯಾ
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಾರಾ ಅಥವಾ ಕಮಲಾ ಹ್ಯಾರಿಸ್ ಶ್ವೇತಭವನ ಪ್ರವೇಶಿಸುತ್ತಾರಾ ಎಂಬ ಕುತೂಹಲ ಇಡೀ ಜಗತ್ತಿನದ್ದಾಗಿದೆ. ಏತನ್ಮಧ್ಯೆ ಅಧ್ಯಕ್ಷಗಾದಿಗೆ ಏರಲು ನಿರ್ಣಾಯಕವಾಗಿರುವ ಏಳು ರಾಜ್ಯಗಳ ಫಲಿತಾಂಶದಲ್ಲಿ ಟ್ರಂಪ್ ಉತ್ತರ ಕೆರೋಲಿನಾ ಮತ್ತು ಜಾರ್ಜಿಯಾದಲ್ಲಿ ಗೆಲುವು ಸಾಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಜಾರ್ಜಿಯಾದ 16 ಎಲೆಕ್ಟ್ರೊರಲ್ ಕಾಲೇಜ್ ಮತಗಳು ಟ್ರಂಪ್ ಪಾಲಾಗಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. ಅಧ್ಯಕ್ಷೀಯ ಚುನಾವಣ ರಾಜಕೀಯದಲ್ಲಿ ಜಾರ್ಜಿಯಾ ನೂತನ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಅದಕ್ಕೆ ಕಾರಣ 2020ರ […]
ವಕ್ಫ್ ಬೋರ್ಡ್ ‘ಲ್ಯಾಂಡ್ ಜಿಹಾದ್’ ಖಂಡಿಸಿ ಬಿಜೆಪಿ ಪ್ರತಿಭಟನೆ
ಉಡುಪಿ: ವಕ್ಫ್ ಬೋರ್ಡ್ ‘ಲ್ಯಾಂಡ್ ಜಿಹಾದ್’ ಖಂಡಿಸಿ ಮತ್ತು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತು. ಮಣಿಪಾಲದ ಕಾಯಿನ್ ಸರ್ಕಲ್ ನಿಂದ ಪ್ರತಿಭಟನಾ ಪಾದಯಾತ್ರೆ ನಡೆಸಿದ ನೂರಾರು ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಅಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಪೊಲೀಸರ ಬಿಗಿ ಭದ್ರತೆಯ ನಡುವೆಯೇ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಕಾರರು ನುಗ್ಗಿದರು. ರಾಜ್ಯ ಸರಕಾರದ […]
ಕಟಪಾಡಿಯ ತ್ರಿಶಾ ಕ್ಲಾಸಸ್ ನಲ್ಲಿ ಸಿಎ ಇಂಟರ್ಮೀಡಿಯಟ್ ಮಾಹಿತಿ ಕಾರ್ಯಾಗಾರ
ಕಟಪಾಡಿ:ಸಿಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾಸಂಸ್ಥೆಯ ವತಿಯಿಂದ ಸಿಎ ಇಂಟರ್ಮೀಡಿಯಟ್ ಮಾಹಿತಿ ಕಾರ್ಯಾಗಾರವು ನವೆಂಬರ್ 9 ರಂದು ಪೂರ್ವಾಹ್ನ 10ಗಂಟೆಗೆ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ನಡೆಯಲಿದೆ. ತರಗತಿಯ ವಿಶೇಷತೆಗಳು : ಆಸಕ್ತರು ಉಡುಪಿಯ ಕೋರ್ಟ್ ಮುಂಭಾಗದಲ್ಲಿರುವ ತ್ರಿಶಾ ಕ್ಲಾಸಸ್ ಕಛೇರಿ ಅಥವಾ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿಗೆ ಭೇಟಿ ನೀಡಬಹುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.